Hoysala songs : ಖಾಕಿ ಖದರ್‌ನಲ್ಲಿ ಡಾಲಿ.. ಹೊಯ್ಸಳ ಫಸ್ಟ್‌ ಸಾಂಗ್‌ ರಿಲೀಸ್‌..! ನೋಡಿ

ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯನದ ಬಹುನಿರೀಕ್ಷಿತ ಸಿನಿಮಾ ಹೊಯ್ಸಳ. ಇದೀಗ ಈ ಸಿನಿಮಾದ ಮೊದಲ ಹಾಡು ಇಂದು (ಫೆಬ್ರವರಿ 25) ಬಿಡುಗಡೆಯಾಗಿದೆ. ಹಾಡಿನಲ್ಲಿ ಖಾಕಿ ಖದರ್‌ನಲ್ಲಿ ಡಾಲಿ ಮಿಂಚಿದ್ದಾರೆ. ಗನ್‌ ಹಿಡಿದು ವಿಲನ್‌ಗಳ ಮಾರಣಹೋಮಕ್ಕೆ ನಿಂತಿರುವ ಗುರುದೇವ ವಿಡಿಯೋದಲ್ಲಿ ಅಬ್ಬರಿಸಿದ್ದಾರೆ. ಸಧ್ಯ ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಲಭ್ಯವಿದೆ.

Written by - Krishna N K | Last Updated : Feb 25, 2023, 04:35 PM IST
  • ಡಾಲಿ ಧನಂಜಯ್ ಅಭಿನಯನದ ಬಹುನಿರೀಕ್ಷಿತ ಸಿನಿಮಾ ಹೊಯ್ಸಳ.
  • ಹೊಯ್ಸಳ ಸಿನಿಮಾದ ಫಸ್ಟ್‌ ವಿಡಿಯೋ ಸಾಂಗ್‌ ರಿಲೀಸ್‌.
  • ಹಾಡಿನಲ್ಲಿ ಖಾಕಿ ಖದರ್‌ನಲ್ಲಿ ಡಾಲಿ ಮಿಂಚಿದ್ದಾರೆ.
Hoysala songs : ಖಾಕಿ ಖದರ್‌ನಲ್ಲಿ ಡಾಲಿ.. ಹೊಯ್ಸಳ ಫಸ್ಟ್‌ ಸಾಂಗ್‌ ರಿಲೀಸ್‌..! ನೋಡಿ title=

Hoysala First Song : ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯನದ ಬಹುನಿರೀಕ್ಷಿತ ಸಿನಿಮಾ ಹೊಯ್ಸಳ. ಇದೀಗ ಈ ಸಿನಿಮಾದ ಮೊದಲ ಹಾಡು ಇಂದು (ಫೆಬ್ರವರಿ 25) ಬಿಡುಗಡೆಯಾಗಿದೆ. ಹಾಡಿನಲ್ಲಿ ಖಾಕಿ ಖದರ್‌ನಲ್ಲಿ ಡಾಲಿ ಮಿಂಚಿದ್ದಾರೆ. ಗನ್‌ ಹಿಡಿದು ವಿಲನ್‌ಗಳ ಮಾರಣಹೋಮಕ್ಕೆ ನಿಂತಿರುವ ಗುರುದೇವ ವಿಡಿಯೋದಲ್ಲಿ ಅಬ್ಬರಿಸಿದ್ದಾರೆ. ಸಧ್ಯ ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಲಭ್ಯವಿದೆ.

ʼಸಳ ಸಳ ಹೊಯ್ಸಳʼ ಎಂದು ಆರಂಭವಾಗುವ ಈ ಹಾಡಿನಲ್ಲಿ ಡಾಲಿ ರಫ್‌ ಆಂಡ್‌ ಟಫ್‌ ಕಾಪ್‌ನಲ್ಲಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ನೋಡಿದ್ರೆ, ಒಬ್ಬ ಖಡಕ್‌ ಪೊಲೀಸ್‌ ಅಧಿಕಾರಿ ಗುರುದೇವ ಅವರ ವ್ಯಕ್ತಿತ್ವವನ್ನು ಪರಿಚಯಿಸಲು ಬಿಡುಗಡೆ ಮಾಡಿದಂತೆ. ಈ ಹಾಡಿನಲ್ಲಿ ಗುಡ್ಡ ಗಾಡು, ಸಂದಿ ಗೊಂದಿ ಎನ್ನದೆ ಕೈಯಲ್ಲಿ ಗನ್‌ ಹಿಡಿದು ರೌಡಿಗಳನ್ನು ನುಗ್ಗಿ ಹೊಡೆಯುವ ಡಾಲಿಯ ರೌದ್ರಾವತಾರ ಸಖತ್ತಾಗಿದೆ.

ಇದನ್ನೂ ಓದಿ: Selfiee collecion : ಕೇವಲ 1 ಕೋಟಿ ಹಣ ಗಳಿಸಿದ ಅಕ್ಷಯ್‌ ಕುಮಾರ್‌ ʼಸೆಲ್ಫಿ ಸಿನಿಮಾʼ..! ʼಪಠಾಣ್‌ʼ ದಾಖಲೆ ಮುರಿದಂತೆ ಬಿಡಿ..

ನಿರ್ದೇಶಕ ಸಂತೋಶ್ ಆನಂದ್​ರಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಅಜನೀಶ್ ಲೋಕನಾಥ್ ಮ್ಯೂಜಿಕ್‌ ನೀಡಿದ್ದಾರೆ. ಈ ಹಾಡನ್ನು ನಕಶ್ ಅಜೀಜ್ ಹಾಡಿದ್ದಾರೆ. ಸದ್ಯ ರಿಲೀಸ್‌ ಆಗಿರುವ ವಿಡಿಯೋ ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸುತ್ತಿದೆ. ವಿಡಿಯೋ ಸಾಂಗ್‌ನಲ್ಲಿ ಡಾಲಿ ಅಬ್ಬರ ನೋಡಿದ್ರೆ, ಇನ್ನು ಸಿನಿಮಾದಲ್ಲಿ ಧನಂಜಯ್‌ ಹೇಗೆ ಅಬ್ಬರಿಸಿರಬಾರದು ಅಂತ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಡಾಲಿ ಧನಂಜಯ್​ರ 25ನೇ ಸಿನಿಮಾ ಹೊಯ್ಸಳ ಮಾರ್ಚ್‌ 30 ರಂದು ತೆರೆಮೆಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್​ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News