ಬಿಗ್‌ಬಾಸ್‌ ಮನೆಯೊಳಗೆ ಹೈಸ್ಕೂಲ್‌ ವಾತಾವರಣ

BBK 10: ಕನ್ನಡ ಬಿಗ್‌ಬಾಸ್‌ 10ರ ಸೀಸನ್‌ನಲ್ಲಿ ದಿನಕ್ಕೊಂದು ಕುತೂಹಲಕಾರಿ ಘಟನೆಗಳು ನಡೆಯುತ್ತಲೆ ಇರುತ್ತವೆ. ಇದೀಗ ಬಿಗ್‌ಬಾಸ್‌ ಹೊಸದೊಂದು ಟಾಸ್ಕ್‌ ನೀಡಿದ್ದಾರೆ. ದೊಡ್ಡವರೆಲ್ಲ ಶಾಲಾ ಮಕ್ಕಳಾಗಿ ತುಂಟರಾಗಿದ್ದಾರೆ. ಬಿಗ್‌ ಬಾಸ್‌ ಸ್ಪರ್ಧಿಗಳಲ್ಲೇ ಒಬ್ಬರು ಶಿಕ್ಷಕರಾಗಿ ಬೇರೆ ಬೇರೆ ವಿಷಯಗಳನ್ನು ತೆಗೆದು ಕೊಂಡು ಬಿಗ್‌ ಬಾಸ್‌ನ  ವಿದ್ಯಾರ್ಥಿಗಳಿಗೆ ಕ್ಲಾಸ್‌ ಎಗೆದುಕೊಳ್ಳುತ್ತಿದ್ದಾರೆ. ಗುರುಗಳು ಮಕ್ಕಳೊಂದಿಗೆ ಮಕ್ಕಳಾಗಿರುವುದನ್ನು  ನೋಡಿದ ವೀಕ್ಷಕರು ಬಿಗ್‌ಬಾಸ್‌ ಮನೆ ಒಳಗೆ ಹೀಗೂ ಉಂಟೆ ಎಂದೇ ಅಚ್ಚರಿ ಪಡುತ್ತಿದ್ದಾರೆ.

Written by - Zee Kannada News Desk | Last Updated : Dec 14, 2023, 02:57 PM IST
  • ಬಿಗ್‌ ಬಾಸ್‌ ಮನೆಯಲ್ಲಿ ಹಿರಿಯ ಪಾಥಮಿಕ ಶಾಲೆಯ ಟಾಸ್ಕ್‌ ಜೋರಾಗಿಯೇ ನಡೆಯುತ್ತಿದೆ
  • ಸಿಂಪಲ್‌ ಸೀರೆ ಉಟ್ಟು ನಮ್ರತಾ ಮೇಡಂ ವಿದ್ಯಾರ್ಥಿಗಳೊಂದಿಗೆ ಸ್ಟೆಪ್‌ ಹಾಕ್ತಿದ್ರು
  • ಬಿಗ್‌ ಬಾಸ್‌ ವಿದ್ಯಾರ್ಥಿಗಳು ಡಾನ್ಸ್‌ಗೂ ಸೈ, ನಾಟಕಕ್ಕೂ ಸೈ
ಬಿಗ್‌ಬಾಸ್‌ ಮನೆಯೊಳಗೆ ಹೈಸ್ಕೂಲ್‌ ವಾತಾವರಣ title=

Bigg Boss Session 10: ಕಳೆದ ವಾರ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ‘ಚೇರ್‌ ಆಫ್ ಥಾರ್ನ್ಸ್‌’ ಟಾಸ್ಕ್‌ ನೀಡಲಾಗಿತ್ತು. ಮಾನವೀಯತೆ ಮರೆತು ಟಾಸ್ಕ್‌ನಲ್ಲಿನ ಗೆಲುವಿಗಾಗಿ, ಹಠ ಸಾಧಿಸುವ ಉದ್ದೇಶದಿಂದ, ಜಿದ್ದಿಗೆ ಬಿದ್ದು ವರ್ತೂರು ಸಂತೋಷ್, ವಿನಯ್ ಮತ್ತು ಟೀಮ್‌ ಪರ್ಫಾಮ್ ಮಾಡಿದ್ದರು. ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮೇಲೆ ಸೋಪು ನೀರಿನ ದಾಳಿ ನಡೆಸಿಲಾಗಿದ್ದು, ಈ ವೇಳೆ ಇಬ್ಬರ ಕಣ್ಣುಗಳಿಗೆ  ಗಂಭೀರವಾಗಿ ಪೆಟ್ಟಾಗಿತ್ತು.  ಚಿಕಿತ್ಸೆ ಬಳಿಕ ಮರಳಿ ಬಿಗ್ ಬಾಸ್‌ ಮನೆಗೆ ವಾಪಸ್ ಆದಾಗ ಇಬ್ಬರೂ ಕಪ್ಪು ಕನ್ನಡಕಗಳನ್ನ ಧರಿಸಿದ್ದರು. ಇದೀಗ ಕಪ್ಪು ಕನ್ನಡಕಗಳಿಂದ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಮುಕ್ತಿ ಪಡೆದಿದ್ದಾರೆ. ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತಾ ಮತ್ತು ಡ್ರೋನ್‌  ಪ್ರತಾಪ್‌ ಈಗ ಕಪ್ಪು ಕನ್ನಡಕವನ್ನು ಬದಿಗಿಟ್ಟು, ಈ ವಾರದ ಬಿಗ್‌ ಬಾಸ್‌ನ  ಸ್ಕೂಲ್‌  ಟಾಸ್ಕ್‌ನಲ್ಲಿ ಪರ್ಫಾಮ್  ಮಾಡುವುದಕ್ಕೆ ರೆಡಿಯಾಗಿದ್ದಾರೆ.

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಹಿರಿಯ ಪಾಥಮಿಕ ಶಾಲೆಯ ಟಾಸ್ಕ್‌ ಜೋರಾಗಿಯೇ ನಡೆಯುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಉಳಿದಿರುವುದೇ ಎಂಟು ಸ್ಪರ್ಧಿಗಳು. ಆದಾಗ್ಯೂ, ಮನರಂಜನೆಗೇನೂ ಕೊರತೆ ಇಲ್ಲದಂತೆ ಇವರೆಲ್ಲರೂ ವಿದ್ಯಾರ್ಥಿಗಳಾಗಿ ಮಕ್ಕಳ ತುಂಟತನ ಹೇಗಿರುತ್ತದೆ ಎಂಬುದನ್ನು ಆಟದ ಮೂಲಕ ತೋರಿಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಾಗಿರುವವರು ಒಬ್ಬರಿಗಿಂತ ಮತ್ತೊಬ್ಬರು ಬಲು ಕಿಲಾಡಿತನವನ್ನು ತೋರುತ್ತಿದ್ದಾರೆ. ಶಿಕ್ಷಕರನ್ನು ಗೋಳು ಹಿಡುವುದರಲ್ಲಿ ನಾ ಮುಂದು ತಾ ಮುಂದು ಎಂದು ಬರುತ್ತಿದ್ದಾರೆ. ಈ ಎಲ್ಲಾ ತುಂಟಾಟಗಳನ್ನು ಇಂದಿನ ಬಿಗ್‌ಬಾಸ್ ಸಂಚಿಕೆಯಲ್ಲೂ ಕೂಡ ಆನಂದಿಸಬಹುದು. 

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಪತ್ನಿ ಇವರು ! ಇವರಿಗೆ ಎಷ್ಟು ದೊಡ್ಡ ಮಗನಿದ್ದಾನೆ ಗೊತ್ತಾ ?

ಬುಧವಾರ ಹಿರಿಯ ಪ್ರಾಥಮಿಕ ಶಾಲೆಗೆ ಒಂದೊಂದು ವಿಷಯದೊಂದಿಗೆ ಬಿಗ್‌ಬಾಸ್‌ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ತನಿಷಾ ಟೀಚರ್‌ ಅವರಿಂದ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದ ಪಾಠ ಕಲಿತರೆ , ಮೈಕಲ್‌ ಮೇಷ್ಟ್ರು ಜೊತೆಗೆ ರೋಮಾಂಚನವೀ ಕನ್ನಡ  ರಾಗವನ್ನು ಹಾಡಿದ್ದಾರೆ. ಪ್ರತಾಪ್‌ ಸರ್‌ ಅವರಿಂದ ವಿದ್ಯಾರ್ಥಿಗಳು ಗಣಿತ ಕಲಿತರೆ, ಇನ್ನೂ ನಮ್ರತಾ ಮೇಡಂ ಅವರು ತುಂಟ ಹುಡುಗರಿಗೆ ಸಖತ್‌ ಆಗಿ ಡಾನ್ಸ್‌ ಹೇಳಿಕೊಟ್ಟಿದ್ದಾರೆ.  ಜೊತೆಗೆ ಬ್ಲ್ಯಾಕ್‌ ಬೋರ್ಡ್‌ ಮುಂದೆ ಬಂದು ವಿನಯ್‌ ಮತ್ತು ಕಾರ್ತಿಕ್‌ ಮಸ್ತಾಗಿ ಡಾನ್ಸ್‌ ಮಾಡಿದ್ದಾರೆ. ಇವರೊಂದಿಗೆ ಸಿಂಪಲ್‌ ಸೀರೆ ತೋಟ್ಟಿದ್ದ ನಮ್ರತಾ ಮೇಡಂ ಕೂಡ ಸಖತ್ತಾಗಿಯೇ ಸ್ಟೆಪ್‌ ಹಾಕ್ತಿದ್ರು, ಇಂಥ ಒಳ್ಳೆಯ ಅವಕಾಶಕ್ಕಾಗಿಯೇ ಕಾಯುತ್ತಿದ್ದ ವಿದ್ಯಾರ್ಥಿಗಳು ಸುಮ್ಮನೆ ಕೂರ್ತಾರಾ? ಪಾಠದ ಕಡೆ ಇಲ್ಲದ ಗಮನವನ್ನು ಜೋಷ್‌ ಡಾನ್ಸ್‌ನ ಮೂಲಕ ಹೊರಹಾಕಿದ್ದಾರೆ. 

ಇದನ್ನೂ ಓದಿ: Bigg Boss: ಬಿಗ್’ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್… ಮಿಡ್ ವೀಕ್ ಎಲಿಮಿನೇಷನ್.. ಈ ಸ್ಪರ್ಧಿ ಔಟ್!

ಏನೇ ಹೇಳಿ ಬಿಗ್‌ ಬಾಸ್‌ ವಿದ್ಯಾರ್ಥಿಗಳು ಬರೀ ಡಾನ್ಸ್‌ಗೆ ಮಾತ್ರವಲ್ಲ, ನಾಟಕಕ್ಕೂ ಸೈ ಅನಿಸಿಕೊಂಡಿದ್ದಾರೆ. ಮುಗ್ಧತೆಗೆ ಮತ್ತೊಂದು ಹೆಸರೇ ವರ್ತೂರ್ ಸಂತೋಷ್‌. ʼ ಪಟಾಕಿ ಯಾರ್‌ದಾದ್ರೆ ಏನೂ ಹಚ್ಚೋರು ಮಾತ್ರ ನಾವು ಆಗಿರಬೇಕುʼ ಎನ್ನುತ್ತಾ ಮುದ್ದಾಗಿ ತನಿಷಾ ಕೆನ್ನೆಯ ಮೇಲೆ ಬೇರಳಾಡಿಸುತ್ತಾ ಮಾಸ್‌ ಡೈಲಾಗ್‌ ಹೇಳುತ್ತಿದ್ದಾರೆ.  ಇದರೊಂದಿಗೆ ನಮ್ಮ ತುಕಾಲಿ ಮೇಷ್ಟ್ರು ಮಾಡೋ ಪದ್ಯ ಪಾಠಕಂತೂ ಬಂದ್ರೆ, ವಿದ್ಯಾರ್ಥಿಗಳೆಲ್ಲರು  ಎಣ್ಣೆ ಕುಡಿಸಿ ಬಿಟ್ಟ ಮಂಗನಂತೆ ಆಡುತ್ತಿದ್ದಾರೆ. ʼನಾನು ಹೇಳಿ ಕೊಡತ್ತಿರುವ ಪಾಠವನ್ನು ಸರಿಯಾಗಿ ಹೇಳಬೇಕುʼ ಎಂದು  ಹೇಳುವ ಮೇಷ್ಟ್ರ ಮಾತನ್ನು ಇಲ್ಲ ಎಂದು ಹೇಳದೆ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಮೇಷ್ಟ್ರು ʼ ಥೂʼ ಅಂತ ಅಂದ್ರೂ ಅದನ್ನು ಪಾಲಿಸುತ್ತ ಗುರುಗಳಿಗೆ ಹಿಂದೆಯಿಂದಲೇ ಉಗಿಯುತ್ತಿದ್ದಾರೆ. 

ಒಟ್ಟಾರೆ ಈ ವಾರದ ಬಿಗ್‌ಬಾಸ್‌ ಮನೆಯೊಳಗೆ ಶಾಲೆಯ ಸಣ್ಣ ನೋಟನೇ ಇಷ್ಟೊಂದು ಮಜವಾಗಿರಬೇಕಾದರೆ, ಇನ್ನೂ ಇಡೀ ಕ್ಲಾಸು ಯಾವ ರೀತಿಯೆಲ್ಲ ಇರುತ್ತೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News