BBK10: ಮಡಿಕೆಯೊಟ್ಟಿಗೆ ಮನಸುಗಳೂ ಒಡೆಯಿತೇ?

Bigg Boss Kannada: ಬಿಗ್‌ಬಾಸ್ ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಮನೆಯೊಳಗಿನ ಸ್ಪರ್ಧಿಗಳಿಗೆ ಪ್ರತಿ ವಾರವೂ ಹೊಸ ಹೊಸ ಚಾಲೆಂಜ್‌ಗಳು ಎದುರಾಗುತ್ತಿವೆ.

Written by - Savita M B | Last Updated : Dec 17, 2023, 11:59 AM IST
  • ಬಿಗ್‌ಬಾಸ್ ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ.
  • ಈ ಮನೆಯೊಳಗೆ ಯಾರೂ ಸ್ನೇಹಿತರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ
  • ಯಾರು ಮುನ್ನಲೆಗೆ ಬರುತ್ತಾರೆ? ಯಾರು ಹಿನ್ನೆಲೆಗೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
BBK10: ಮಡಿಕೆಯೊಟ್ಟಿಗೆ ಮನಸುಗಳೂ ಒಡೆಯಿತೇ? title=

BBK10: ಇಂದಿದ್ದ ಹಾಗೆ ನಾಳೆ ಇಲ್ಲ. ಈ ಮನೆಯೊಳಗೆ ಯಾರೂ ಸ್ನೇಹಿತರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬುದು ಸತ್ಯವಾಗುತ್ತಿದೆ. ಅದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವಂಥ ಚಟುವಟಿಕೆಯನ್ನು ಕಿಚ್ಚ ‘ಸೂಪರ್‍ ಸಂಡೆ ವಿತ್ ಸುದೀಪ್‌’ ಎಪಿಸೋಡಿನಲ್ಲಿ ಮಾಡಿಸಿದ್ದಾರೆ. ಆ ಚಟುವಟಿಕೆಯ ಝಲಕ್‌ JioCinema ಬಿಡುಗಡೆಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಒಂದು ಬೆರ್ಚಪ್ಪನನ್ನು ನಿಲ್ಲಿಸಲಾಗಿದೆ. ಅದರ ಮೇಲೆ ಒಂದು ಮಡಿಕೆ ಇದೆ. ಅದರ ಮೇಲೆ ಸದಸ್ಯರು ಒಬ್ಬರ ಫೋಟೊ ಹಾಕಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕು. 

ಇದನ್ನೂ ಓದಿ-ನಟ ಕಿಚ್ಚ ಸುದೀಪ್ ತಂದೆ-ತಾಯಿ ಯಾರು ಗೊತ್ತಾ? ಕರುನಾಡ ಮಾಣಿಕ್ಯನ ಅಪ್ಪ ಸ್ಯಾಂಡಲ್ವುಡ್’ನಲ್ಲಿ ಸಖತ್ ಫೇಮಸ್

ಈ ಚಟುವಟಿಕೆ ಮನೆಯೊಳಗಿನ ಸಮತೋಲವನ್ನು ಒಮ್ಮೆ ಕದಡುವುದಂತೂ ಖಚಿತ. ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಆಯ್ಕೆ ನಡೆದಿದೆ. ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು! ಸದಾಕಾಲ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ.

ಆದರೆ ಹಿಂದಿನ ವಾರದದಲ್ಲಿ ಪ್ರತಾಪ್ ಜೊತೆ ಮಾತನಾಡುತ್ತ, ‘ಕಾರ್ತೀಕ್ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ?’ ಎಂದು ಸಂಗೀತಾ ಹೇಳಿದ್ದು ಅವರಿಗೆ ನೋವನ್ನುಂಟು ಮಾಡಿದೆ. ಹಾಗೆಯೇ ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ’ ಎಂದಿರುವುದೂ ಅವರಿಗೆ ಅಸಮಧಾನವನ್ನುಂಟು ಮಾಡಿದೆ. 

ಇದನ್ನೂ ಓದಿ-ವಿನಯ್, ನಮ್ರತಾ ಅಲ್ಲ… ಇವರಾಗ್ತಾರೆ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಎಂದ ಸ್ನೇಹಿತ್ ಗೌಡ!

ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಬೇರೆ ಹಾಕಿದ್ದಾರೆ. 

ಇದು ಮುಂದಿನ ವಾರದ ಟಾಸ್ಕ್‌ಗಳು ಇನ್ನಷ್ಟು ಟಫ್‌ ಆಗುವುದರ ಸೂಚನೆಯಂತೂ ಹೌದು. ಮನೆಯ ಸಮತೋಲಗಳು ಏರುಪೇರಾದಾಗ ಏನಾಗುತ್ತದೆ? ಯಾರು ಮುನ್ನಲೆಗೆ ಬರುತ್ತಾರೆ? ಯಾರು ಹಿನ್ನೆಲೆಗೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News