BBK Elimination: ತನಿಷಾಗೆ ವಿನ್ನರ್‌ ಆಗುವ ಅರ್ಹತೆಯಿದ್ರೂ ಎಲಿಮಿನೇಟ್‌ ಅಗಲು ಕಾರಣವಾಯ್ತಾ ಈ ಒಂದು ನಿರ್ಧಾರ!?

Tanisha Kuppanda Eliminated: ಸ್ಯಾಂಡಲ್‌ವುಡ್‌ ನಟಿ ತನಿಷಾ ಕುಪ್ಪಂಡ. ಬಿಗ್‌ ಬಾಸ್‌ ಕನ್ನಡ 10 ರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಪಡೆದಿದ್ದರು. 

Written by - Chetana Devarmani | Last Updated : Jan 18, 2024, 06:27 PM IST
  • ಬಿಗ್ ಬಾಸ್ ಕನ್ನಡ ಸೀಸನ್ 10
  • ಬಿಗ್‌ ಬಾಸ್‌ ಮಿಡ್‌ ವೀಕ್‌ ಎಲಿಮಿನೇಷನ್‌
  • ನಟಿ ತನಿಷಾ ಕುಪ್ಪಂಡ ಎಲಿಮಿನೇಟ್‌
BBK Elimination: ತನಿಷಾಗೆ ವಿನ್ನರ್‌ ಆಗುವ ಅರ್ಹತೆಯಿದ್ರೂ ಎಲಿಮಿನೇಟ್‌ ಅಗಲು ಕಾರಣವಾಯ್ತಾ ಈ ಒಂದು ನಿರ್ಧಾರ!? title=
Tanisha Kuppanda

Tanisha Kuppanda Eliminated: ಸ್ಯಾಂಡಲ್‌ವುಡ್‌ ನಟಿ ತನಿಷಾ ಕುಪ್ಪಂಡ. ಬಿಗ್‌ ಬಾಸ್‌ ಕನ್ನಡ 10 ರ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಪಡೆದಿದ್ದರು. ಆರಂಭಧಲ್ಲಿ ಅನರ್ಹರ ತಂಡದಲ್ಲಿ ತನಿಷಾ ಬಿಗ್‌ ಬಾಸ್‌ ವೀಕ್ಷಕರ ಮನಗೆಲ್ಲುವ ಒಂದೇ ಒಂದು ಚಾನ್ಸ್‌ ಕೂಡ ಮಿಸ್‌ ಮಾಡಲಿಲ್ಲ. ಅನರ್ಹರ ಗುಂಪಿನಲ್ಲಿದ್ದರೂ ಅರ್ಹರಗಿಂತ ಮಿಗಿಲಾಗಿ ಆಟ ಆಡಿದರು. ಬಿಗ್‌ ಬಾಸ್‌ ವೀಕ್ಷಕರಿಂದ ಸೈ ಎನಿಸಿಕೊಂಡರು. 

ಬಿಗ್‌ ಬಾಸ್‌ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಇದೀಗ ಮಿಡ್‌ ವೀಕ್‌ ಎಲಿಮಿನೇಷನ್‌ ಮೂಲಕ ಆಚೆ ಬಂದಿದ್ದಾರೆ ಎಂದು ಹೇಳಲಾಗಿದೆ. ಫಿನಾಲೆ ತಲುಪುವ ಎಲ್ಲ ಅರ್ಹತೆಗಳಿದ್ದರೂ ತನಿಷಾ ಮನೆಯಿಂದ ಹೊರಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ತನಿಷಾಗೆ ಕಿಸ್‌ ಕೊಟ್ಟ ವರ್ತೂರು

ಬಿಗ್‌ ಬಾಸ್‌ ಮನೆಯಲ್ಲಿ ಸಾಮಾನ್ಯವಾಗಿ ಕಡಿಮೆ ವೋಟ್‌ ಬೀಲುವ ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ. ಕಳೆದ ವಾರದ ಎಲಿಮಿನೇಷನ್‌ ಹೋಲ್ಡ್‌ ನಲ್ಲಿ ಇಡಲಾಗಿದೆ ಎಂದು ಸುದೀಪ್‌ ಹೇಳಿದ್ದರು. ಇದೀಗ ತನಿಷಾ ಬಿಗ್‌ ಬಾಸ್‌ ಮನೆಯಿಂದ ಆಚೆ ಹೋಗಿದ್ದು, ಕಳೆದ ವಾರವೇ ತನಿಷಾ ಹೋಗಬೇಕಿತ್ತು ಎಂದು ಹೇಳಲಾಗ್ತಿದೆ.

ತನಿಷಾ ಕುಪ್ಪಂಡ ಆಟದಲ್ಲಿ ಕೊಂಚ ಎಡವಿದರು ಎಂದು ಕೆಲವರು ಹೇಳುತ್ತಿದ್ದಾರೆ. ಕಳೆದ ವಾರ ಪೂರ್ತಿ ಗಮನಿಸಿದರೆ ತನಿಷಾ ತಾವಾಗಿರಲಿಲ್ಲ ಎನ್ನಲಾಗ್ತಿದೆ. ಬಿಗ್‌ ಬಾಸ್‌ ಮನೆಯ ಹಿಂದಿನ ವಾರಗಳಿಗೆ ಹೋಲಿಸಿದರೆ ತನಿಷಾ ವರ್ತನೆ ಕಂಪ್ಲೀಟ್‌ ಬದಲಾಗಿತ್ತು. ತನಿಷಾ ಕುಪ್ಪಂಡ ಹಾಗೂ ಕಾರ್ತಿಕ್‌ ನಡುವಿನ ಸ್ನೇಹ ಕಳೆದ ವಾರ ಸಂಪೂರ್ಣ ಹಳಿಸಿಹೋಗಿತ್ತು.

ಕಾರ್ತಿಕ್‌ ತಮ್ಮನ್ನು ನಾಮಿನೇಟ್‌ ಮಾಡಿದರೆಂಬ ಕಾರಣಕ್ಕೆ ತನಿಷಾ ವಾರ ಪೂರ್ತಿ ಹಗೆ ಸಾಧಿಸುತ್ತಾ ಬಂದರು. ಅಲ್ಲದೇ, ವರ್ತೂರ ಅವರಿಗೆ ತುಂಬಾ ಹತ್ತಿರವಾಗಲು ಪ್ರಯತ್ನಿಸಿದರು. ಕಾರ್ತಿಕ್‌ ವಿರುದ್ಧವೇ ಎಲ್ಲರ ಬಳಿ ತನಿಷಾ ಮಾತನಾಡಿದ್ದು, ಬಿಗ್‌ ಬಾಸ್‌ ವೀಕ್ಷಕರಿಗೆ ಸರಿ ಎನಿಸಲಿಲ್ಲ ಎಂದು ಹೇಳಲಾಗ್ತಿದೆ. ಕಾರ್ತಿಕ್‌ ಮೇಲೆ ತನಿಷಾ ಮುನಿಸೇ ಅವರಿಗೆ ಮುಳುವಾದಂತಿದೆ ಎಂದು ಬಿಗ್‌ ಬಾಸ್‌ ವೀಕ್ಷಕರು ಹೇಳುತ್ತಿದ್ದಾರೆ. ಕಳೆದ ವಾರಗಳಂತೆ ತನಿಷಾ ತಮ್ಮ ಆಟವನ್ನೇ ತಾವು ಆಡಿದ್ದರೇ, ಬಹುಶಃ ಫಿನಾಲೆ ವೀಕ್‌ ತಲುಪುತ್ತಿದ್ದರು ಎನ್ನಲಾಗ್ತಿದೆ. ಅದೇನೆ ಇರಲಿ ಮಿಡ್‌ ವೀಕ್‌ ಎಲಿಮಿನೇಷನ್‌ ನಲ್ಲಿ ಕೊರ ಬರುವ ಮೂಲಕ ತನಿಷಾ ಬಿಗ್ ಬಾಸ್‌ ಕನ್ನಡ ಸೀಸನ್‌ 10 ರ ಟಾಪ್‌ 8 ಕಂಟೆಸ್ಟಂಟ್‌ ಆಗುತ್ತಿದ್ದಾರೆ. 

ಇದನ್ನೂ ಓದಿ:  ಬಿಗ್ ಬಾಸ್ ಪೇಮೆಂಟ್‌ ನಲ್ಲಿ ಒಂದು ಟನ್ ಇಟ್ಟಿಗೆನೂ ಬರಲ್ಲ: ರಕ್ಷಕ್ ಬುಲೆಟ್ ಸಂಭಾವನೆ ಇಷ್ಟು ಕಡಿಮೆಯಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News