ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ!

YouTuber Arman Malik Interview: ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಪ್ರಸ್ತುತ ತನ್ನ ಇಬ್ಬರು ಮಡದೀಯರ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು  ಮುಖ್ಯಾಂಶಗಳಲ್ಲಿದ್ದಾರೆ. ಅರ್ಮಾನ್ ಮಲಿಕ್ ಮತ್ತು ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಇತ್ತೀಚೆಗೆ ನ್ಯೂಸ್ 18 ನ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.   

Written by - Nitin Tabib | Last Updated : Apr 19, 2024, 08:29 PM IST
  • ತನ್ನ ಮೊದಲ ಪತ್ನಿಯ ಸ್ನೇಹಿತೆ ಕೃತಿಕಾಳನ್ನು ಗುಟ್ಟಾಗಿ ವಿವಾಹ ಮಾಡಿಕೊಂದಾಗ,
  • ಈ ವಿಷಯ ಸಾಕಷ್ಟು ಜನರಿಗೆ ಅಸಹನೀಯವಾಗಿತ್ತು ಎಂದು ಅರ್ಮಾನ್ ಹೇಳಿದ್ದಾರೆ.
  • ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಕೂಡ ಈ ಮದುವೆಯ ಬಗ್ಗೆ ತಿಳಿದು ಸಾಕಷ್ಟು ಆಘಾತಕ್ಕೊಳಗಾಗಿದ್ದರು ಎಂದು ಅವರು ಹೇಳಿದ್ದಾರೆ.
ತನ್ನ ಪತ್ನಿಯ ಸ್ನೇಹಿತೆಯನ್ನು ಎರಡನೇ ಮದುವೆ ಮಾಡಿಕೊಂಡ ಈ ಖ್ಯಾತ ಯುಟ್ಯೂಬರ್ ಬೀದಿಗೆ ಬಂದಿದ್ದ! title=

YouTuber Arman Malik Interview: ಖ್ಯಾತ ಯೂಟ್ಯೂಬರ್ ಅರ್ಮಾನ್ ಮಲಿಕ್ ಪ್ರಸ್ತುತ ತನ್ನ ಇಬ್ಬರು ಮಡದೀಯರ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು  ಮುಖ್ಯಾಂಶಗಳಲ್ಲಿದ್ದಾರೆ. ಅರ್ಮಾನ್ ಮಲಿಕ್ ಮತ್ತು ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಇತ್ತೀಚೆಗೆ ನ್ಯೂಸ್ 18 ನ ಪಾಡ್‌ಕಾಸ್ಟ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ಪಾಡ್‌ಕಾಸ್ಟ್ ಶೋನಲ್ಲಿ, ಯೂಟ್ಯೂಬರ್ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಅರ್ಮಾನ್ ಅವರಿಗೆ ಇಬ್ಬರು ಮಡದಿಯರ ಜೊತೆಗೆ ನಾಲ್ವರು ಮಕ್ಕಳಿದ್ದಾರೆ
ಪ್ರಸ್ತುತ ಯೂಟ್ಯೂಬರ್ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳ ಜೊತೆಗೆ ಸಂತೋಷದ ಜೀವನ ಸಾಗಿಸುತ್ತಿದ್ದಾರೆ ಆದರೆ, ಮೊದಲು ಅವರ ಜೀವನ ಅಷ್ಟೊಂದು ಸರಿಯಾಗಿರಲಿಲ್ಲ ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮೊದಲ ಮತ್ತು ಎರಡನೇ ಮದುವೆಯ ನಂತರ ಅವರು ಸಾಕಷ್ಟು ಸಂಕಷ್ಟ ಅನುಭವಿಸಿರುವುದಾಗಿ ಅರ್ಮಾನ್ ಹೇಳಿದ್ದಾರೆ. 

ಇದನ್ನೂ ಓದಿ-'Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ....' ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?

ಪಾಯಲ್ ಕುಟುಂಬಸ್ಥರು ಸಾಕಷ್ಟು ಗೊಂದಲ ಸೃಷ್ಟಿಸಿದ್ದರು ಎಂದ ಅರ್ಮಾನ್
ತನ್ನ ಮೊದಲ ಪತ್ನಿಯ ಸ್ನೇಹಿತೆ ಕೃತಿಕಾಳನ್ನು ಗುಟ್ಟಾಗಿ ವಿವಾಹ ಮಾಡಿಕೊಂದಾಗ, ಈ ವಿಷಯ ಸಾಕಷ್ಟು ಜನರಿಗೆ ಅಸಹನೀಯವಾಗಿತ್ತು ಎಂದು ಅರ್ಮಾನ್ ಹೇಳಿದ್ದಾರೆ.  ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಕೂಡ ಈ ಮದುವೆಯ ಬಗ್ಗೆ ತಿಳಿದು ಸಾಕಷ್ಟು ಆಘಾತಕ್ಕೊಳಗಾಗಿದ್ದರು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಪಾಯಲ್ ಕುಟುಂಬಸ್ಥರು ಕೂಡ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಕೋಲಾಹಲ ಸೃಷ್ಟಿಸಿದ್ದರು.

ಇದನ್ನೂ ಓದಿ-IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?

'ನಾನು ಪತ್ನಿಯರ ಜೊತೆಗೆ ಬೀದಿಗೆ ಬಂದಿದ್ದೆ'
ಈ ಬಗ್ಗೆ ಹೇಳಿಕೊಂಡ ಅರ್ಮಾನ್ ಮಲಿಕ್, ನಾನು ಜಾಟ್ ಸಮುದಾಯದಿಂದ ಬಂದಿದ್ದೇನೆ ಮತ್ತು ನಮ್ಮ ಮೊದಲ ಪತ್ನಿ ಗುರ್ಜರ್ ಸಮುದಾಯಕ್ಕೆ ಸೇರಿದ್ದಾರೆ ಎಂದ ಅರ್ಮಾನ್, ಇಂತಹ ಕೋಲಾಹಲಗಳು ಸಮುದಾಯಗಳಲ್ಲಿ ಕಾಮನ್ ಆಗಿವೆ ಎನ್ನುತ್ತಾರೆ. ಪಾಯಲ್ ಅವರ ಕುಟುಂಬಸ್ಥರಿಗೆ ನಾನು ಮೊದಲೇ ಹಿಡಿಸಿರಲಿಲ್ಲ. ಏತನ್ಮಧ್ಯೆ ನಾನು ಕೃತಿಕಾ ಜೊತೆಗೆ ವಿವಾಹ ಮಾಡಿಕೊಂದಾಗ ಆ ಕೋಪ ಮತ್ತಷ್ಟು ಹೆಚ್ಚಾಯಿತು ಎಂದು ಅರ್ಮಾನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಜೈಲಿಗೆ ಹೋಗುವ ಪ್ರಸಂಗ ಕೂಡ ಬಂದಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಅದೃಷ್ಟವಶಾತ್ ಈ ಸಂದರ್ಭದಲ್ಲಿ ನನ್ನ ಮೊದಲ ಪತ್ನಿ ಪಾಯಲ್ ನನ್ನ ಸಹಾಯಕ್ಕೆ ಧಾವಿಸಿದಳು ಮತ್ತು ನನ್ನ ಎರಡನೇ ವಿವಾಹದಿಂದ ಅವಳಿಗೆ ಏನೂ ತೊಂದರೆ ಇಲ್ಲ ಎಂದು ಹೇಳಿದಳು ಎನ್ನುತ್ತಾರೆ ಅರ್ಮಾನ್. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News