Allu Arjun: ಸೌತ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಗೊತ್ತಾ?

20 Years of Arya Movie: ಸೌತ್‌ ಸ್ಟಾರ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಆರ್ಯ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.. ಇದೀಗ ಈ ಚಿತ್ರ 20 ವರ್ಷಗಳನ್ನು ಪೊರೈಸಿದೆ.. 

Written by - Savita M B | Last Updated : May 7, 2024, 05:53 PM IST
  • ಅಲ್ಲು ಅರ್ಜುನ್ ನಾಯಕನಾಗಿ ಮತ್ತು ಅನು ಮೆಹ್ತಾ ನಾಯಕಿಯಾಗಿ ನಟಿಸಿದ ಆರ್ಯ ಸಿನಿಮಾ
  • ಈ ಸಿನಿಮಾ ಮೇ 7, 2004 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು..
Allu Arjun: ಸೌತ್‌ ಸ್ಟಾರ್‌ ಅಲ್ಲು ಅರ್ಜುನ್‌ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಗೊತ್ತಾ?  title=

Allu Arjun: ಅಲ್ಲು ಅರ್ಜುನ್ ನಾಯಕನಾಗಿ ಮತ್ತು ಅನು ಮೆಹ್ತಾ ನಾಯಕಿಯಾಗಿ ನಟಿಸಿದ ಸುಕುಮಾರ್ ನಿರ್ದೇಶನದ ಚಿತ್ರ ‘ಆರ್ಯ’.. ಈ ಸಿನಿಮಾ ಮೇ 7, 2004 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು..

ಹಿಂದೆ ಬಂದಿರುವ ಲವ್ ಸ್ಟೋರಿಗಳಿಗಿಂತ ಭಿನ್ನ, ಟ್ರೈಆಂಗಲ್‌ ಪ್ರೇಮಕಥೆ.. ಒಳ್ಳೆ ಫೀಲಿಂಗ್‌ ಸಾಂಗ್ಸ್‌ ಹೊಂದಿರುವ ಈ ಚಿತ್ರವು ಪ್ರೇಕ್ಷಕರಿಗೆ, ವಿಶೇಷವಾಗಿ ಯುವಜನರಿಗೆ ಇಷ್ಟವಾಯಿತು. 30 ಕೋಟಿ ಕಲೆಕ್ಷನ್ ಮಾಡಿ ಭರ್ಜರಿ ಯಶಸ್ಸು ಕಂಡಿತು.. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 20 ವರ್ಷಗಳಾಗಿವೆ..

ಇದನ್ನೂ ಓದಿ-ಅಮ್ಮನ ಕೊನೆಯ ಆಸೆಯನ್ನು ಈಡೇರಿಸಲಾಗಲಿಲ್ಲ..! ಕಾರ್ಯಕ್ರಮದ ವೇಳೆ ಬಿಕ್ಕಿ ಬಿಕ್ಕಿ ಅತ್ತ ನಟಿ ಇಂದ್ರಜಾ

ಈ ಸಂದರ್ಭದಲ್ಲಿ ಬನ್ನಿ ಆ ದಿನಗಳನ್ನು ನೆನಪಿಸಿಕೊಂಡು ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. 'ಆರ್ಯಗೆ 20 ವರ್ಷ. ಇದು ಬರೀ ಸಿನಿಮಾ ಅಲ್ಲ.. ನನ್ನ ಬದುಕನ್ನೇ ಬದಲಿಸಿದ ಸಿನಿಮಾ. ಎಂದೆಂದಿಗೂ ಕೃತಜ್ಞ. ‘ಸಿಹಿ ನೆನಪುಗಳು’ ಎಂದು ಸಿನಿಮಾದ ಶೂಟಿಂಗ್ ಗೆ ಸಂಬಂಧಿಸಿದ ಕೆಲ ಫೋಟೋಗಳನ್ನು ಅಲ್ಲು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಶಿವಬಾಲಾಜಿ, ರಾಜನ್ ದೇವ್, ಸುನೀಲ್ ಮತ್ತು ವೇಣು ಮಾಧವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನೀಡಿದ್ದಾರೆ. ದಿಲ್ ರಾಜ್ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ-ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News