ಆಮಿರ್ ಖಾನ್​ ಮನೆಯಲ್ಲಿ ಮದುವೆ ಸಂಭ್ರಮ : ಇರಾ ಖಾನ್​ ಮದುವೆ ಶಾಸ್ತ್ರಗಳ ಫೋಟೋ ವೈರಲ್​

Ira Khan and Nupur Shikhare marriage : ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಅಮಿರ್‌ ಖಾನ್‌ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಅಮಿರ್‌ ಪುತ್ರಿ ಇರಾ ನೂಪುರ್‌ ಶಿಖಾರೆ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಸಧ್ಯ ಈ ಜೋಡಿಯ ಮದುವೆ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Written by - Krishna N K | Last Updated : Jan 3, 2024, 11:01 AM IST
  • ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಅಮಿರ್‌ ಖಾನ್‌ ಮನೆಯಲ್ಲಿ ಮದುವೆ ಸಂಭ್ರಮ
  • ಅಮಿರ್‌ ಖಾನ್‌ ಪುತ್ರಿ ಇರಾ ನೂಪುರ್‌ ಶಿಖಾರೆ ಜೊತೆ ಸಪ್ತಪದಿ ತುಳಿಯಲು ರೆಡಿ
  • ಮದುವೆ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ಆಮಿರ್ ಖಾನ್​ ಮನೆಯಲ್ಲಿ ಮದುವೆ ಸಂಭ್ರಮ : ಇರಾ ಖಾನ್​ ಮದುವೆ ಶಾಸ್ತ್ರಗಳ ಫೋಟೋ ವೈರಲ್​ title=

Aamir Khan Daugher : ಚಿತ್ರರಂಗದಿಂದ ದೂರ ಉಳಿದಿರುವ ಸೆಲೆಬ್ರಿಟಿ ಮಕ್ಕಳ ಪೈಕಿ ಆಮಿರ್​ ಖಾನ್ ಪುತ್ರಿ ಇರಾ ಖಾನ್​ ಕೂಡ ಒಬ್ಬರು. ಇರಾಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಅದಕ್ಕಾಗಿ ನಟನೆಯ ಗೋಜಿಗೆ ಹೋಗಿಲ್ಲ. ‌ಸಧ್ಯ ಅವರು ಫಿಟ್ನೆಸ್​ ಟ್ರೇನರ್​ ನೂಪುರ್​ ಶಿಖಾರೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಹೌದು.. ಅಮಿರ್‌ ಪುತ್ರಿಯ ಮದುವೆ ಇಂದು (ಜನವರಿ 3ರಂದು) ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಅದರ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಇರಾ ಖಾನ್​ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.. ಇನ್ನು ಈ ಮದುವೆ ಸಂಭ್ರಮದಲ್ಲಿ, ಅಮಿರ್‌ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Animal: ಅನಿಮಲ್‌ OTT ರಿಲೀಸ್‌ ಡೇಟ್‌ ಫಿಕ್ಸ್‌..! ಆ ಸ್ಪೇಷಲ್‌ ದಿನದಂದು ಸ್ಟ್ರೀಮಿಂಗ್

1986ರಲ್ಲಿ ಆಮಿರ್​ ಖಾನ್​ ಮತ್ತು ರೀನಾ ದತ್ತ ಮದುವೆಯಾಗಿದ್ದರು. 2002ರಲ್ಲಿ ವಿಚ್ಛೇದನ ಪಡೆದರು. ಈ ದಂಪತಿಯ ಮಗಳೇ ಇರಾ ಖಾನ್​. ದೂರವಾದರೂ ಸಹ ಅಮಿರ್‌ ಖಾನ್‌ ತಮ್ಮ ಮಕ್ಕಳ ಮತ್ತು ಮಾಜಿ ಪತ್ನಿಯ ಜೊತೆ ಒಡನಾಟ ಉಳಿಸಿಕೊಂಡಿದ್ದರು, ಇದೀಗ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ.

ನೂಪರ್‌ ಶಿಖಾರೆ, ನಟ ಆಮಿರ್ ಖಾನ್​ಗೆ ಫಿಟ್ನೆಸ್​ ಟ್ರೇನರ್‌. ಇರಾ ನೂಪರ್‌ ನಡುವೆ ಲವ್​ ಆಗಿತ್ತು, ಒಂದಷ್ಟು ದಿನ ಡೇಟಿಂಗ್​ ಕೂಡ ನಡೆಸಿದ್ದರು. ಇದೀಗ ಈ ಜೋಡಿ ಹಸೆಮಣೆ ಏರುತ್ತಿದೆ. ಖಾನ್‌ ಪುತ್ರಿಯ ಮದುವೆ ಸಂಭ್ರಮದಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು ಮಗಳ ಮದುವೆಗಾಗಿ ಆಮಿರ್ ಖಾನ್​ ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್​ ಪಡೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News