ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುವ ಬ್ಯಾಂಕ್ ಗಳು ಇವು !

ಪರ್ಸನಲ್ ಲೋನ್ ಅನ್ನು ನಿರ್ದಿಷ್ಟ ಮೊತ್ತದವರೆಗೆ ಯಾವುದೇ ಭದ್ರತೆಯಿಲ್ಲದೆ ನೀಡಲಾಗುತ್ತದೆ. ಅನೇಕ ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳ ಮೇಲೆ ವೈಯಕ್ತಿಕ ಸಾಲ ನೀಡುತ್ತವೆ.   

Written by - Ranjitha R K | Last Updated : May 15, 2023, 03:38 PM IST
  • ಬಹಳಷ್ಟು ಮಂದಿ ಪರ್ಸನಲ್ ಲೋನ್ ಮೊರೆ ಹೋಗುತ್ತಾರೆ.
  • ಪರ್ಸನಲ್ ಲೋನ್ ಗೆ ಹೆಚ್ಚಿನ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.
  • ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳ ಮೇಲೆ ವೈಯಕ್ತಿಕ ಸಾಲ ನೀಡುತ್ತವೆ.
ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುವ  ಬ್ಯಾಂಕ್ ಗಳು ಇವು ! title=

ಬೆಂಗಳೂರು : ಹಣಕಾಸಿನ ತೊಂದರೆಗಳಿಂದ ಬಳಲುತ್ತಿರುವಾಗ ಈ ಸಮಸ್ಯೆಯಿಂದ ಹೊರ ಬರುವ ಸಲುವಾಗಿ ಬಹಳಷ್ಟು ಮಂದಿ ಪರ್ಸನಲ್ ಲೋನ್ ಮೊರೆ ಹೋಗುತ್ತಾರೆ. ಬೇರೆ ಸಾಲಗಳಿಗೆ ಹೋಲಿಸಿದರೆ ಪರ್ಸನಲ್ ಲೋನ್ ಗೆ ಹೆಚ್ಚಿನ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಈ ಲೋನ್ ಅನ್ನು ನಿರ್ದಿಷ್ಟ ಮೊತ್ತದವರೆಗೆ ಯಾವುದೇ ಭದ್ರತೆಯಿಲ್ಲದೆ ನೀಡಲಾಗುತ್ತದೆ. ಅನೇಕ ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳ ಮೇಲೆ ವೈಯಕ್ತಿಕ ಸಾಲ ನೀಡುತ್ತವೆ.

ಪರ್ಸನಲ್ ಲೋನ್ : 
ಬ್ಯಾಂಕ್‌ಗಳು ಅಥವಾ  ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲಗಳನ್ನು ಪಡೆಯಬಹುದು. ಮದುವೆ, ವೈದ್ಯಕೀಯ ವೆಚ್ಚಗಳು, ಮನೆ ನವೀಕರಣ, ಪ್ರಯಾಣ ಅಥವಾ ಯಾವುದೇ ಇತರ ವೈಯಕ್ತಿಕ ಹಣಕಾಸಿನ ಅವಶ್ಯಕತೆಗಳಿಗಾಗಿ  ವೈಯಕ್ತಿಕ ಸಾಲಗಳನ್ನು ಪಡೆಯಬಹುದು. ಆದರೆ, ಈ ಸಾಲಕ್ಕಾಗಿ ಬ್ಯಾಂಕ್ ಗಳು ವಿಧಿಸುವ ಬಡ್ಡಿದರ ಅಧಿಕವಾಗಿರುತ್ತದೆ. ಕೆಲವೊಂದು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಈ ಸಾಲವನ್ನು ನೀಡುತ್ತವೆ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಬ್ಯಾಂಕ್ ಆಫ್ ಮಹಾರಾಷ್ಟ್ರ : 
ಗ್ರಾಹಕರು ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ 20 ಲಕ್ಷದವರೆಗೆ  ವೈಯಕ್ತಿಕ ಸಾಲವನ್ನು ಪಡೆಯಬಹುದು. ಇಲ್ಲಿ ಬಡ್ಡಿ ದರವು 10 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಸಾಲ ತೀರಿಸಲು ಸಿಗುವ ಗರಿಷ್ಠ ಅವಧಿ 84 ತಿಂಗಳುಗಳು.

ಬ್ಯಾಂಕ್ ಆಫ್ ಇಂಡಿಯಾ :
ಈ ಬ್ಯಾಂಕ್ ಶೇಕಡಾ 10.25 ಬಡ್ಡಿದರಗಳ ಮೇಲೆ ಸಾಲ ನೀಡುತ್ತದೆ. ಈ ಬ್ಯಾಂಕ್ ಮೂಲಕ ಕೂಡಾ ಗ್ರಾಹಕರು 20 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು. ಇಲ್ಲಿ ಸಾಲ ಮರುಪಾವತಿಗೆ ಇರುವ ಗರಿಷ್ಠ ಅವಧಿ 84 ತಿಂಗಳುಗಳು.

ಇಂಡಸ್‌ಇಂಡ್ ಬ್ಯಾಂಕ್ :
ಇಂಡಸ್‌ಇಂಡ್ ಬ್ಯಾಂಕ್ ನಲ್ಲಿ ಗ್ರಾಹಕರು 30,000 ರಿಂದ 50 ಲಕ್ಷದವರೆಗಿನ ಸಾಲವನ್ನು ಆಯ್ಕೆ ಮಾಡಬಹುದು. ಬಡ್ಡಿ ದರವು 10.25ರಿಂದ 27 ಪ್ರತಿಶತದ ನಡುವೆ ಬದಲಾಗುತ್ತದೆ. ಸಾಲದ ಅವಧಿಯು 1 ರಿಂದ 6 ವರ್ಷಗಳ ನಡುವೆ ಇರಬಹುದು.

ಇದನ್ನೂ ಓದಿ : ಮತ್ತೆ ಬಾನೆತ್ತರಕ್ಕೆ ಹಾರಲಿದೆ ಈ ಕಂಪನಿಯ ವಿಮಾನಗಳು ! ಇನ್ನು ಅಗ್ಗದ ದರದಲ್ಲಿ ಲಭ್ಯ ವಿಮಾನ ಯಾನ !

ಪಂಜಾಬ್ ನ್ಯಾಷನಲ್ ಬ್ಯಾಂಕ್ : 
PNB ಸಾಲಗಾರರಿಗೆ  10 ಲಕ್ಷದವರೆಗಿನ ವೈಯಕ್ತಿಕ ಸಾಲವನ್ನು ನೀಡುತ್ತದೆ. 10.4 ರಿಂದ 16.95 ರಷ್ಟು ಬಡ್ಡಿದರಗಳನ್ನು ಪಾವತಿಸಬೇಕಾಗುತ್ತದೆ. ಮರುಪಾವತಿಗೆ ಸಿಗುವ ಅವಧಿ 60 ತಿಂಗಳುಗಳು.

ಆಕ್ಸಿಸ್ ಬ್ಯಾಂಕ್ :
ಆಕ್ಸಿಸ್ ಬ್ಯಾಂಕ್‌ನಲ್ಲಿನ ಬಡ್ಡಿ ದರವು ಶೇಕಡಾ 10.49 ರಿಂದ ಪ್ರಾರಂಭವಾಗುತ್ತದೆ. ಇಲ್ಲಿ 60 ತಿಂಗಳವರಗಿನ ಅವಧಿ ಸಾಲ ಮರುಪಾವತಿಗೆ ಸಿಗುತ್ತದೆ. 

IDFC ಫಸ್ಟ್ ಬ್ಯಾಂಕ್ :
10.49 ಪ್ರತಿಶತದಿಂದ ಪ್ರಾರಂಭವಾಗುವ ಬಡ್ಡಿದರಗಳೊಂದಿಗೆ IDFC ಬ್ಯಾಂಕ್ ಗ್ರಾಹಕರಿಗೆ ಸ್ಪರ್ಧಾತ್ಮಕ ಬಡ್ಡಿದರಗಳ ಸೀರಿಸ್ ಅನ್ನು ನೀಡುತ್ತದೆ. ಸಾಲಗಾರರು 6 ತಿಂಗಳಿಂದ 5 ವರ್ಷಗಳ ಮರುಪಾವತಿ ಅವಧಿಯೊಂದಿಗೆ 1 ಕೋಟಿ ರೂ.ವರೆಗೆ ಸಾಲ ಪಡೆಯಬಹುದು.

ಇದನ್ನೂ ಓದಿ : Unclaimed Deposits In Bank: ದೇಶದ ಬ್ಯಾಂಕ್‌ಗಳಲ್ಲಿರುವ 35 ಸಾವಿರ ಕೋಟಿ ಹಣಕ್ಕೆ ಕೇಳೋರಿಲ್ಲ!

HDFC ಬ್ಯಾಂಕ್ :
ಸಾಲಗಾರರು 10.5 ರಿಂದ 24 ಪ್ರತಿಶತದವರೆಗಿನ ಬಡ್ಡಿಯೊಂದಿಗೆ ವೈಯಕ್ತಿಕ ಸಾಲಗಳನ್ನು ಪಡೆಯಬಹುದು. ಸಾಲ ಮರುಪಾವತಿಗೆ ಗರಿಷ್ಟ 5 ವರ್ಷಗಳವರೆಗೆ ಸಮಯಾವಕಾಶ ಸಿಗುತ್ತದೆ. ಆದರೆ ಇಲ್ಲಿ  ಗರಿಷ್ಠ40 ಲಕ್ಷದವರೆಗೆ ಮಾತ್ರ ಸಾಲ ಪಡೆಯಬಹುದು. 

ಕರೂರ್ ವೈಶ್ಯ ಬ್ಯಾಂಕ್ :
ಕರೂರ್ ವೈಶ್ಯ ಬ್ಯಾಂಕ್ 10 ಲಕ್ಷದವರೆಗೆ ಸಾಲ ನೀಡುತ್ತದೆ. ಬ್ಯಾಂಕ್ ಮೂಲಕ ನೀಡಲಾಗುವ ಬಡ್ಡಿ ದರವು 10.5 ರಿಂದ 13.5 ಪ್ರತಿಶತದವರೆಗೆ ಇರುತ್ತದೆ.

ಐಡಿಬಿಐ ಬ್ಯಾಂಕ್ :
ಗ್ರಾಹಕರಿಗೆ ಐಡಿಬಿಐ ಬ್ಯಾಂಕ್ 50 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. 10.5 ರಿಂದ 15.5 ರಷ್ಟು ಬಡ್ಡಿ ದರದಲ್ಲಿ 60 ತಿಂಗಳುಗಳಲ್ಲಿ ಮೊತ್ತವನ್ನು ಮರುಪಾವತಿ ಮಾಡಬಹುದು.

ಇದನ್ನೂ ಓದಿ : Tata Punch Sales: ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಟಾಟಾ ಪಂಚ್!

ICICI ಬ್ಯಾಂಕ್ :
10.75 ರಿಂದ 19 ಪ್ರತಿಶತದವರೆಗಿನ ಬಡ್ಡಿದರಗಳೊಂದಿಗೆ 50 ಲಕ್ಷ ರೂ.ವರೆಗಿನ ವೈಯಕ್ತಿಕ ಸಾಲಗಳನ್ನು ನೀಡುತ್ತದೆ. ಸಾಲ ಮರುಪಾವತಿಗೆ ಈ ಬ್ಯಾಂಕ್ ನೀಡುವ ಗರಿಷ್ಠ ಅವಧಿ 6 ವರ್ಷಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News