ಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನ

Tata Family Lifestyle : ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಟಾಟಾ ಪರಿವಾರದ ಈ ವ್ಯಕ್ತಿ ಐಷಾರಾಮಿ ಬದುಕಿನಿಂದ ದೂರ.ಮುಂಬೈನ ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.   

Written by - Ranjitha R K | Last Updated : May 13, 2024, 08:51 AM IST
  • ರತನ್ ಟಾಟಾ ವಿಶ್ವದ ಅತ್ಯಂತ ಗೌರವಾನ್ವಿತ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರು
  • ರತನ್ ಟಾಟಾ 3800 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ
  • ಕುಟುಂಬದ ಪ್ರತಿಯೊಬ್ಬ ಸದಸ್ಯ ಈ ವ್ಯವಹಾರದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಟಾಟಾ ಕುಟುಂಬದಲ್ಲಿಯೇ ಹುಟ್ಟಿ ಬೆಳೆದರೂ ಇನ್ನೂ ಮೊಬೈಲ್ ಇಟ್ಟುಕೊಂಡಿಲ್ಲ!2BHK ಫ್ಲಾಟ್‌ನಲ್ಲಿಯೇ ವಾಸ!ರತನ್ ಟಾಟಾಗಿಂತಲೂ ಸರಳ ಇವರ ಜೀವನ   title=

Jimmy Naval Tata : ರತನ್ ಟಾಟಾ ಹೆಸರಾಗಿರಲಿ ಅಥವಾ ಟಾಟಾ ಗ್ರೂಪ್ ಆಗಿರಲಿ, ಆ ಹೆಸರನ್ನು ತೆಗೆದುಕೊಂಡ ತಕ್ಷಣ,ನಂಬಿಕೆ ಅನ್ನುವುದು ತಾನಾಗಿಯೇ ಮೂಡುತ್ತದೆ.ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ವಿಶ್ವದ ಅತ್ಯಂತ ಗೌರವಾನ್ವಿತ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರು. ಲೋಕೋಪಕಾರ,ವ್ಯವಹಾರ ಕುಶಾಗ್ರಮತಿ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ರತನ್ ಟಾಟಾ 3800 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.ರತನ್ ಟಾಟಾ ಅವರ ಕುಟುಂಬ ತಲೆಮಾರುಗಳಿಂದ ವ್ಯಾಪಾರ ಸಾಮ್ರಾಜ್ಯವನ್ನು ನಡೆಸುತ್ತಿದೆ.ಅವರ ಕುಟುಂಬದ ಬಹುತೇಕ ಪ್ರತಿಯೊಬ್ಬ ಸದಸ್ಯ ಕೂಡಾ ಈ ವ್ಯವಹಾರದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. 

ಜಿಮ್ಮಿ ನೇವಲ್ ಟಾಟಾ ಹೆಸರು ನೀವೂ ಕೂಡಾ ಕೇಳಿರಬಹುದು. ಇವರು ರತನ್ ಟಾಟಾ ಕಿರಿಯ ಸಹೋದರ.ರತನ್ ಟಾಟಾ ಅವರಂತೆಯೇ ಅವರ ಸಹೋದರ ಜಿಮ್ಮಿ ಟಾಟಾ ಕೂಡಾ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.ಸರಳ ಜೀವನಶೈಲಿಗೆ ಹೆಸರಾದ ಜಿಮ್ಮಿ ಟಾಟಾ ಮತ್ತು ರತನ್ ಟಾಟಾ ಅವರದ್ದು ಅನ್ಯೋನ್ಯ ಸಂಬಂಧ.ಇತ್ತೀಚಿಗೆ ರತನ್ ಟಾಟಾ ತಮ್ಮ ಬಾಲ್ಯದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಇವರಿಬ್ಬರ ನಡುವಿನ ಪ್ರೀತಿ ಪ್ರಪಂಚಕ್ಕೂ ಗೋಚರಿಸಿದ್ದು. 

ಇದನ್ನೂ ಓದಿ : Swift Z series: ಮಾರುತಿ ಸ್ವಿಫ್ಟ್‌ನ ಹೊಸ Z ಸರಣಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆ

ಈ ಫೋಟೋದಲ್ಲಿ ರತನ್ ಟಾಟಾ ಸಹೋದರ ಜಿಮ್ಮಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.ಈ ಫೋಟೋ 1945 ರದ್ದು.ಮನೆಯ ಹಿರಿಯ ಮಗನಾಗಿ ರತನ್ ಟಾಟಾ,ಕುಟುಂಬದ ವ್ಯವಹಾರವನ್ನು ಕೈಗೆತ್ತಿಕೊಂಡ ನಂತರ ಅದನ್ನು ಯಶಸ್ಸಿನ ಉತ್ತುಂಗಕ್ಕೆ ತಲುಪಿಸಿದವರು.ಜಿಮ್ಮಿ ಟಾಟಾ ಸರಳ ಜೀವನ ನಡೆಸಲು ನಿರ್ಧರಿಸಿದವರು.

ಕೊಲಾಬಾದಲ್ಲಿ 2BHK ಫ್ಲಾಟ್ : 
ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಜಿಮ್ಮಿ ನೇವಲ್ ಟಾಟಾ ಐಷಾರಾಮಿ ಬದುಕಿನಿಂದ ದೂರ ಉಳಿದಿದ್ದಾರೆ. ಮುಂಬೈನ ಕೊಲಾಬಾದಲ್ಲಿ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.ಹರ್ಷ್ ಗೋಯೆಂಕಾ ಅವರು ಹಂಚಿಕೊಂಡ ಪೋಸ್ಟ್ ಪ್ರಕಾರ,ಜಿಮ್ಮಿ ಟಾಟಾ ಅವರು ಸಣ್ಣ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ವ್ಯವಹಾರದಲ್ ಅವರಿಗೆ ಯಾವುದೇ ರೀತಿಯ ಆಸಕ್ತಿ ಇಲ್ಲ. ಅವರೊಬ್ಬ ಉತ್ತಮ ಸ್ಕ್ವಾಷ್ ಆಟಗಾರ.

ಇದನ್ನೂ ಓದಿ : Lok Sabha Election 2024: ನಾಳೆ 4ನೇ ಹಂತದ ಮತದಾನ, ಬ್ಯಾಂಕುಗಳಿಗೆ ರಜೆ

ಮಾಧ್ಯಮ ವರದಿಗಳ ಪ್ರಕಾರ,ಜಿಮ್ಮಿ ಟಾಟಾ ಇವತ್ತಿಗೂ  ಮೊಬೈಲ್ ಫೋನ್ ಬಳಸುವುದಿಲ್ಲ. ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೂ ಅವರು ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಪವರ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಕೆಮಿಕಲ್ಸ್‌ನ ಪ್ರಮುಖ ಷೇರುದಾರರಾಗಿದ್ದಾರೆ.ಟಾಟಾ ಗ್ರೂಪ್‌ನ ವ್ಯವಹಾರದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಅವರಿಗೂ ಸಂಪೂರ್ಣ ಮಾಹಿತಿ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News