Top-Up Loan: ಟಾಪ್-ಅಪ್ ಲೋನ್‌ಗಾಗಿ ಅರ್ಜಿ ಸಲ್ಲಿಸುವ ಸುಲಭ ವಿಧಾನ, ಮತ್ತದರ ಪ್ರಯೋಜನ!

Top-Up Loan: ನೀವು ಮನೆ ನಿರ್ಮಿಸಲು ಗೃಹ ಸಾಲವನ್ನು ತೆಗೆದುಕೊಂಡಿದ್ದರೆ, ಈ ಸಾಲದ ಮೇಲೆ ನೀವು ಟಾಪ್-ಅಪ್ ಸಾಲದ ಸೌಲಭ್ಯವನ್ನು ಸಹ ಪಡೆಯಬಹುದು. ಟಾಪ್-ಅಪ್ ಲೋನ್ ಎಂದರೇನು, ಅದನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ... 

Written by - Yashaswini V | Last Updated : Jan 16, 2024, 04:47 PM IST
  • ಟಾಪ್ ಅಪ್ ಲೋನ್ ಹೆಚ್ಚುವರಿ ಸಾಲದ ಮೊತ್ತ
  • ಈಗಾಗಲೇ ಅಸ್ತಿತ್ವದಲ್ಲಿರುವ ಗೃಹ ಸಾಲದ ಎಂದರೆ ಹೋಂ ಲೋನ್ ಈ ಟಾಪ್-ಅಪ್ ಲೋನ್ ತೆಗೆದುಕೊಳ್ಳಬಹುದು.
  • ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಟಾಪ್-ಅಪ್ ಸಾಲ ಸೌಲಭ್ಯವನ್ನು ಒದಗಿಸುತ್ತವೆ.
Top-Up Loan: ಟಾಪ್-ಅಪ್ ಲೋನ್‌ಗಾಗಿ ಅರ್ಜಿ ಸಲ್ಲಿಸುವ ಸುಲಭ ವಿಧಾನ, ಮತ್ತದರ ಪ್ರಯೋಜನ! title=

Top-Up Loan Benefits: ಜೀವನದಲ್ಲಿ ಒಂದು ಸ್ವಂತ ಮನೆ ಕಟ್ಟಬೇಕು ಎಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಅದರಲ್ಲೂ, ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟುವುದು ಒಂದು ಕನಸಾಗಿರುತ್ತದೆ. ಆದರೆ, ಮನೆ ಕಟ್ಟಲು ಸಾಕಷ್ಟು ಹಣ ಖರ್ಚಾಗುವುದರಿಂದ ಅದಕ್ಕಾಗಿ ಸಾಲದ ಅವಶ್ಯಕತೆಯೂ ಇರುತ್ತದೆ. ಕೆಲವರು ಬ್ಯಾಂಕಿನಲ್ಲಿ ಹೋಂ ಲೋನ್  ತೆಗೆದುಕೊಳ್ಳುವ ಮೂಲಕ ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸುತ್ತಾರೆ. ಆದರೆ ಮನೆ ಕಟ್ಟಿದ ನಂತರವೂ ಹಣದ ಅವಶ್ಯಕತೆ ಇರುವ ಅನೇಕ ಖರ್ಚುಗಳು ಇರುತ್ತವೆ. ಅದು, ಇಂಟೀರಿಯರ್, ಪೀಠೋಪಕರಣಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಟಾಪ್-ಅಪ್ ಲೋನ್ ಸಹಾಯಕವಾಗಿರುತ್ತದೆ.  

ಟಾಪ್-ಅಪ್ ಲೋನ್ ಎಂದರೇನು?
ಟಾಪ್ ಅಪ್ ಲೋನ್ ಹೆಚ್ಚುವರಿ ಸಾಲದ ಮೊತ್ತವಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿರುವ ಗೃಹ ಸಾಲದ ಎಂದರೆ ಹೋಂ ಲೋನ್ ಈ ಟಾಪ್-ಅಪ್ ಲೋನ್ ತೆಗೆದುಕೊಳ್ಳಬಹುದು. ಎಲ್ಲಾ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಟಾಪ್-ಅಪ್ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಟಾಪ್ ಅಪ್ ಹೋಮ್ ಲೋನ್ ನೀವು ಕಡಿಮೆ ಬಡ್ಡಿದರದಲ್ಲಿ ಪಡೆಯುವ ಒಂದು ರೀತಿಯ ವೈಯಕ್ತಿಕ ಸಾಲವಾಗಿದೆ. ನಿಮ್ಮ ಟಾಪ್-ಅಪ್ ಲೋನಿನ ಅವಧಿಯು ಗೃಹ ಸಾಲದ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ- ಕೇಂದ್ರ ಸರ್ಕಾರ ನೀಡುತ್ತಿದೆ ಉಚಿತ ಗ್ಯಾಸ್ ಸಿಲಿಂಡರ್ : ಲಾಭ ಪಡೆಯಬೇಕಾದರೆ ಇಂದೇ ಅರ್ಜಿ ಸಲ್ಲಿಸಿ

ಟಾಪ್-ಅಪ್ ಲೋನ್ ಪ್ರಯೋಜನಗಳು:-
>> ಟಾಪ್-ಅಪ್ ಲೋನ್ ಪಡೆಯಲು ನಿಮಗೆ ಯಾವುದೇ ಭದ್ರತೆ ಮತ್ತು ಗ್ಯಾರಂಟಿ ಅಗತ್ಯವಿರುವುದಿಲ್ಲ. 
>> ಟಾಪ್-ಅಪ್ ಲೋನ್ ಒಂದು ರೀತಿಯ ವೈಯಕ್ತಿಕ ಲೋನ್ ಆಗಿದ್ದು,  ನೀವು ಈ ಸಾಲವನ್ನು ಮನೆಯ ಪೀಠೋಪಕರಣಗಳು, ನವೀಕರಣ, ದುರಸ್ತಿ, ನಿರ್ಮಾಣ ಅಥವಾ ಯಾವುದೇ ಇತರ ವೈಯಕ್ತಿಕ ಅಥವಾ ವ್ಯಾಪಾರದ ಕಾರಣಗಳಿಗಾಗಿ ಬಳಸಬಹುದು. 
>> ಗಮನಾರ್ಹವಾಗಿ ಟಾಪ್-ಅಪ್ ಲೋನ್ ಅನ್ನು ಮನೆ ನಿರ್ಮಾಣ ಮತ್ತು ನವೀಕರಣಕ್ಕಾಗಿ ಮಾತ್ರ ಬಳಸಿದರೆ, ಅದರ ಮೇಲೆ ತೆರಿಗೆ ವಿನಾಯಿತಿಯೂ ಲಭ್ಯವಿರುತ್ತದೆ. 

ಟಾಪ್-ಅಪ್ ಲೋನ್ ನಿಯಮಗಳು ಮತ್ತು ಷರತ್ತುಗಳು:- 
ಟಾಪ್ ಅಪ್ ಲೋನ್ ನೀಡುವ ಮೊದಲು, ಬ್ಯಾಂಕ್‌ಗಳು ನಿಮ್ಮ ಸಾಲದ ಕಂತಿನ ಪಾವತಿಯ ದಾಖಲೆಯನ್ನು ಪರಿಶೀಲಿಸುತ್ತವೆ. ಗ್ರಾಹಕರ ಇಎಂಐ ಪಾವತಿಗೆ ಸಂಬಂಧಿಸಿದ ದಾಖಲೆ ಸರಿಯಾಗಿದ್ದರೆ, ನೀವು ಸುಲಭವಾಗಿ ಟಾಪ್ ಅಪ್ ಲೋನ್ ಅನ್ನು ಪಡೆಯಬಹುದು. ಆದರೆ ನೀವು ಈಗಾಗಲೇ ಪಡೆದಿರುವ ಸಾಲಕ್ಕೆ ಸರಿಯಾದ ಸಮಯದಲ್ಲಿ ಇಎಂಐ ಪಾವತಿಸದಿದ್ದರೆ ನೀವು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದಿರಬಹುದು. ಟಾಪ್-ಅಪ್ ಹೋಮ್ ಲೋನ್ ಆಗಿ ನೀವು ಪಡೆಯುವ ಮೊತ್ತಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ವಿಭಿನ್ನ ನಿಯಮಗಳನ್ನು ಹೊಂದಿರಬಹುದು. ಟಾಪ್-ಅಪ್ ಸಾಲದ ಮೊತ್ತವು ಒಟ್ಟು ಗೃಹ ಸಾಲದ ಮೊತ್ತ ಮತ್ತು ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯದ 70% ವರೆಗೆ ಇರಬಹುದು. 

ಇದನ್ನೂ ಓದಿ- ಸರ್ಕಾರಿ ನೌಕರರ ಮೂಲ ವೇತನದಲ್ಲೇ ಹೆಚ್ಚಳ ! ಈ ದಿನದಿಂದ 9000 ರೂ.ಯಷ್ಟು ಹೆಚ್ಚಳವಾಗುವುದು ಸ್ಯಾಲರಿ

ಟಾಪ್-ಅಪ್ ಲೋನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಗೃಹ ಸಾಲ ಪಡೆದಿರುವ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಅಥವಾ ಬ್ಯಾಂಕ್‌ನ ವೆಬ್‌ಸೈಟ್ ಮೂಲಕ ಟಾಪ್ ಅಪ್ ಲೋನ್‌ಗಾಗಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹೋಮ್ ಲೋನ್‌ನಲ್ಲಿ ಟಾಪ್ ಅಪ್ ಲಭ್ಯವಿರುವುದರಿಂದ, ಲೋನ್ ತೆಗೆದುಕೊಂಡ ನಂತರ ನೀವು ಹೋಮ್ ಲೋನ್ ಪಾವತಿಯ ಜೊತೆಗೆ ಟಾಪ್ ಅಪ್ ಲೋನ್‌ನ ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News