Personal Loan-Credit Card ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವ ಸಾಲ ಸೌಲಭ್ಯ ಹೆಚ್ಚು ಸೂಕ್ತ!

Personal loan vs Credit card: ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಎರಡೂ ಕೂಡ ಬೇಕೆಂದಾಗ ಸುಲಭವಾಗಿ ಲಭ್ಯವಾಗುವ ಸಾಲ ಸೌಲಭ್ಯಗಳಾಗಿವೆ. ಆದರೆ, ಇವೆರಡೂ ಕೂಡ ವಿಭಿನ್ನವಾಗಿದ್ದು ಇದರ ಅನುಕೂಲ ಅನಾನುಕೂಲಗಳಲ್ಲೂ ಕೆಲವು ವ್ಯತ್ಯಾಸಗಾಲನು ಕಾಣಬಹುದು. 

Written by - Yashaswini V | Last Updated : Mar 14, 2024, 03:11 PM IST
  • ಕ್ರೆಡಿಟ್ ಕಾರ್ಡ್‌ಗಾಗಿ ಬ್ಯಾಂಕ್ ಗ್ರಾಹಕರಾಗುವುದು ಅನಿವಾರ್ಯವಲ್ಲ.
  • ಕ್ರೆಡಿಟ್ ಕಾರ್ಡ್‌ನಿಂದ ನೀವು ಮತ್ತೆ ಮತ್ತೆ ಸಾಲ ಪಡೆಯಬಹುದು
  • ವೈಯಕ್ತಿಕ ಸಾಲದಲ್ಲಿ ಯಾವುದೇ ಗ್ರೇಸ್ ಅವಧಿ ಇಲ್ಲ
Personal Loan-Credit Card ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವ ಸಾಲ ಸೌಲಭ್ಯ ಹೆಚ್ಚು ಸೂಕ್ತ!  title=

Personal loan vs Credit card: ಅಗತ್ಯವಿದ್ದಾಗ ಸುಲಭವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಪರ್ಸನಲ್ ಲೋನ್ ಎಂದರೆ ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಎರಡೂ ಕೂಡ ಅಸುರಕ್ಷಿತ ಸಾಲಗಳ ವರ್ಗದಲ್ಲಿ ಬರುತ್ತವೆ. ಇವೆರಡರಲ್ಲೂ ಹಲವು ವೈಶಿಶ್ತ್ಯಾಗಳಿವೆ. ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಎರಡನ್ನೂ ಕೂಡ ಪಡೆಯುವುದು ಸುಲಭವಾಗಿದ್ದರೂ ಇವೆರಡೂ ಸಹ ಒಂದಕ್ಕೊಂದು ವಿಭಿನ್ನವಾಗಿವೆ. ಮಾತ್ರವಲ್ಲ, ಇವುಗಳ ಪ್ರಯೋಜನಗಳು, ಅನಾನುಕೂಲತೆಗಳಲ್ಲೂ ಕೂಡ ವ್ಯತ್ಯಾಸ ಕಂಡು ಬರುತ್ತದೆ. ಹಾಗಿದ್ದರೆ, ಇವುಗಳ ಪ್ರಮುಖ ವ್ಯತ್ಯಾಸಗಳನ್ನು ತಿಳಿಯೋಣ... 

ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲದ ನಡುವಿನ ವ್ಯತ್ಯಾಸ? 
ಕ್ರೆಡಿಟ್ ಕಾರ್ಡ್‌ಗಾಗಿ ಬ್ಯಾಂಕ್ ಗ್ರಾಹಕರಾಗುವುದು ಅನಿವಾರ್ಯವಲ್ಲ. ಆದರೆ ಪರ್ಸನಲ್ ಲೋನ್ ಕೊಳ್ಳಲು ಆ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು:- 

ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ, ಕ್ರೆಡಿಟ್ ಕಾರ್ಡ್ ಅನ್ನು ಹೊಂದಲು ಅಥವಾ ಕ್ರೆಡಿಟ್ ಕಾರ್ಡ್‌ನಿಂದ ಸಾಲವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ನೀವು ಆ ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಆದರೆ ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಆ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವುದು ಅತ್ಯಗತ್ಯ. 

ಕ್ರೆಡಿಟ್ ಕಾರ್ಡ್‌ನಿಂದ ನೀವು ಮತ್ತೆ ಮತ್ತೆ ಸಾಲ ಪಡೆಯಬಹುದು, ಆದರೆ ಪರ್ಸನಲ್ ಲೋನ್ ನಲ್ಲಿ ಇದು ಸಾಧ್ಯವಿಲ್ಲ:- 
ಕ್ರೆಡಿಟ್ ಕಾರ್ಡ್ ಮತ್ತು ವೈಯಕ್ತಿಕ ಸಾಲದ ನಡುವಿನ ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಲದ ಮೊತ್ತವನ್ನು ಪಾವತಿಸಿದ ನಂತರ, ನೀವು ಅದೇ ಕ್ರೆಡಿಟ್ ಕಾರ್ಡ್‌ನಿಂದ ಪುನಃ ಹೊಸ ಸಾಲವನ್ನು ಪಡೆಯಬಹುದು.  ಆದರೆ ಪರ್ಸನಲ್ ಲೋನ್ ವಿಷಯದಲ್ಲಿ ಇದು ಅಷ್ಟು ಸುಲಭವಲ್ಲ.  ಪರ್ಸನಲ್ ಲೋನ್ ಅನ್ನು ಸಂಪೂರ್ಣವಾಗಿ ಪಾವತಿಸಿ, ಬಳಿಕ ನೀವು ಮತ್ತೆ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ, ಅದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಒಂದೊಮ್ಮೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ದರೆ ಮತ್ತೆ ವೈಯಕ್ತಿಕ ಸಾಲವನ್ನು ಪಡೆಯುವುದು ಕಷ್ಟವಾಗಬಹುದು. ಅಷ್ಟೇ ಅಲ್ಲ, ಪದೇ ಪದೇ ಪರ್ಸನಲ್ ಲೋನ್ ತೆಗೆದುಕೊಳ್ಳುವುದರಿಂದ ನಿಮ್ಮ CIBIL ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. 

ಇದನ್ನೂ ಓದಿ- ಈ ಬ್ಯಾಂಕ್ ಗಳಿಂದ ಮಾತ್ರ ಖರೀದಿಸಬೇಕು Fastag : ಇಲ್ಲಿದೆ ನೋಡಿ NHAI ಬಿಡುಗಡೆ ಮಾಡಿದ ಲಿಸ್ಟ್

ವೈಯಕ್ತಿಕ ಸಾಲದಲ್ಲಿ ಯಾವುದೇ ಗ್ರೇಸ್ ಅವಧಿ ಇಲ್ಲ, ಆದರೆ ಕ್ರೆಡಿಕ್ ಕಾರ್ಡ್ ಸಾಲಕ್ಕೆ ಗ್ರೇಸ್ ಅವಧಿ ಇರುತ್ತದೆ: 
ಪ್ರಸ್ತುತ, ಬದಲಾಗುತ್ತಿರುವ ಕಾಲಮಾನದಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ.  ಏಕೆಂದರೆ ಕ್ರೆಡಿಟ್ ಕಾರ್ಡ್ ಸಾಲವನ್ನು ಮರುಪಾವತಿಸಲು ಸ್ವಲ್ಪ ಸಮಯದವರೆಗೆ ಗ್ರೇಸ್ ಅವಧಿ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಗ್ರೇಸ್ ಅವಧಿಯಲ್ಲಿ ಸಾಲವನ್ನು ಮರುಪಾವತಿಸಿದರೆ, ಸಾಲದ ಮೊತ್ತಕ್ಕೆ ಯಾವುದೇ ಬಡ್ಡಿ ಕಟ್ಟುವ ಅಗತ್ಯವಿರುವುದಿಲ್ಲ. ಆದರೆ, ವೈಯಕ್ತಿಕ ಸಾಲದಲ್ಲಿ ಈ ಆಯ್ಕೆ ಲಭ್ಯವಿಲ್ಲ. ವೈಯಕ್ತಿಕ ಸಾಲದಲ್ಲಿ ನೀವು ಸಾಲ ಪಡೆದ ಮುಂದಿನ ತಿಂಗಳಿನಿಂದಲೇ ಬಡ್ಡಿ ಸಹಿತವಾಗಿ ಇಎಂಐ ಪಾವತಿಸಬೇಕಾಗುತ್ತದೆ.  

ಕ್ರೆಡಿಟ್ ಕಾರ್ಡ್‌ಗಾಗಿ ಹೆಚ್ಚಿನ ಔಪಚಾರಿಕತೆಗಳ ಅಗತ್ಯವಿಲ್ಲ, ಆದರೆ ಪರ್ಸನಲ್ ಲೋನ್ ಪಡೆಯಲು ಇದರ ಅಗತ್ಯವಿದೆ:-
ಕ್ರೆಡಿಟ್ ಕಾರ್ಡ್‌ಗಳಿಗೆ ಹೆಚ್ಚಿನ ಔಪಚಾರಿಕತೆಗಳ ಅಗತ್ಯವಿರುವುದಿಲ್ಲ. ಆದರೆ, ವೈಯಕ್ತಿಕ ಸಾಲವನ್ನು ಪಡೆಯಲು, ನೀವು ಕೆಲವು ಪ್ರಮುಖ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಬೇಕು. ನಿಮ್ಮ ಸಂಬಳ ಇತ್ಯಾದಿ ನಿಯತಾಂಕಗಳನ್ನು ಪರಿಶೀಲಿಸಲಾಗುತ್ತದೆ. ಇದರ ನಂತರವೇ ನಿಮ್ಮ ಸಾಲವನ್ನು ಅನುಮೋದಿಸಲಾಗುತ್ತದೆ.  

ಪರ್ಸನಲ್ ಲೋನ್ ನಲ್ಲಿ ಈ ಸೌಕರ್ಯಗಳು ಲಭ್ಯವಿರುವುದಿಲ್ಲ:- 
ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ, ನೀವು ರಿವಾರ್ಡ್ ಪಾಯಿಂಟ್‌ಗಳು, ಉಡುಗೊರೆ ಕಾರ್ಡ್‌ಗಳು, ವೋಚರ್‌ಗಳು, ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್‌ಗಳ ಪ್ರಯೋಜನಗಳನ್ನು ಪಡೆಯಬಹುದು.  ಆದರೆ ನೀವು ವೈಯಕ್ತಿಕ ಸಾಲದಲ್ಲಿ ಅಂತಹ ಕೊಡುಗೆಗಳನ್ನು ಪಡೆಯುವುದಿಲ್ಲ. ವೈಯಕ್ತಿಕ ಸಾಲದಲ್ಲಿ ರಿವಾರ್ಡ್ ಪಾಯಿಂಟ್‌ಗಳು ಮತ್ತು ರಿಯಾಯಿತಿಗಳಂತಹ ಯಾವುದೇ ಪ್ರಯೋಜನಗಳು ಲಭ್ಯವಿರುವುದಿಲ್ಲ. 

ಇದನ್ನೂ ಓದಿ- PM Kisan: ಈ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭ

ಕ್ರೆಡಿಟ್ ಕಾರ್ಡ್‌ಗಳ ಸಾಲದ ಮೊತ್ತವನ್ನು ಒಮ್ಮೆಗೆ ಕ್ಲಿಯರ್ ಮಾಡಬಹುದು. ಆದರೆ, ವೈಯಕ್ತಿಕ ಸಾಲವನ್ನು ಮುಚ್ಚುವ ಅವಧಿ ವಿಭಿನ್ನ:- 
ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಲ ಪಡೆದಿದ್ದರೆ ನೀವು ಗ್ರೇಸ್ ಅವಧಿಯೊಳಗೆ ಬಡ್ಡಿಯಿಲ್ಲದೆ ಸಾಲವನ್ನು ಮರುಪಾವತಿಸಬಹುದು. ಅಷ್ಟೇ ಅಲ್ಲ, ಕ್ರೆಡಿಟ್ ಕಾರ್ಡ್ ಸಾಲದ ಮೊತ್ತವು ಅಧಿಕವಾಗಿದ್ದರೆ ಅದನ್ನು ಇಎಂಐ ಆಗಿ ಪರಿವರ್ತಿಸುವ ಆಯ್ಕೆಯನ್ನು ಸಹ ನೀವು ಪಡೆಯುತ್ತೀರಿ. ಆದರೆ, ವೈಯಕ್ತಿಕ ಸಾಲವನ್ನು ಮುಚ್ಚುವ ನಿಯಮಗಳು ಸಹ ವಿಭಿನ್ನವಾಗಿವೆ. ಒಂದು ನಿರ್ದಿಷ್ಟ ಅವಧಿಗೆ ಮುಂಚಿತವಾಗಿ ಒಟ್ಟು ಮೊತ್ತವನ್ನು ಪಾವತಿಸುವ ಮೂಲಕ ವೈಯಕ್ತಿಕ ಸಾಲವನ್ನು ಮುಚ್ಚಲಾಗುವುದಿಲ್ಲ. ಹೀಗೆ ಮಾಡಿದರೆ ಹಲವು ಬ್ಯಾಂಕ್‌ಗಳು ದಂಡ ವಿಧಿಸುತ್ತವೆ.

ಕ್ರೆಡಿಟ್ ಕಾರ್ಡ್ vs ವೈಯಕ್ತಿಕ ಸಾಲ ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ? 
ಆರ್ಥಿಕ ತಜ್ಞರ ಪ್ರಕಾರ, ನೀವು ಅಲ್ಪಾವಧಿಗೆ ಸಣ್ಣ ಮೊತ್ತದ ಸಾಲವನ್ನು ಪಡೆಯಲು ಬಯಸಿದರೆ  ಕ್ರೆಡಿಟ್ ಕಾರ್ಡ್‌ನಿಂದ ಸಾಲವನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ನೀವು ಈ ಸಾಲವನ್ನು ಗ್ರೇಸ್ ಅವಧಿಯೊಳಗೆ ಮರುಪಾವತಿಸಿದರೆ ಯಾವುದೇ ಬಡ್ಡಿ ಇರುವುದಿಲ್ಲ. ಇಲ್ಲದಿದ್ದರೆ, ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಮಾತ್ರವಲ್ಲ, ನೀವು ಸಾಲದ ಬಲೆಯಲ್ಲಿ ಸಿಲುಕಿಕೊಳ್ಳಬಹುದು ಎಂಬುದನ್ನೂ ನೆನಪಿನಲ್ಲಿಡಿ. 

ಒಂದೊಮ್ಮೆ ನಿಮಗೆ ದೊಡ್ಡ ಮೊತ್ತದ ಸಾಲದ ಅಗತ್ಯವಿದ್ದರೆ ಬೇರೆಡೆ ಸಾಲ ಪಡೆಯುವ ಬದಲು ವೈಯಕ್ತಿಕ ಸಾಲವನ್ನು ಆರಿಸಿಕೊಳ್ಳುವುದು ಬುದ್ಧಿವಂತಿಕೆ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News