ಗಡಿಜಿಲ್ಲೆಯಲ್ಲಿ ಬಿಯರ್ ಹೀರುವವರ ಸಂಖ್ಯೆ ಹೆಚ್ಚಳ: ಇದೇ ಮುಖ್ಯ ಕಾರಣ

ಬೇಸಿಗೆ ಸಂದರ್ಭದಲ್ಲಿ  ಮಾತ್ರ ಬಿಯರ್ ಮಾರಾಟ ಚೇತರಿಕೆ ಕಾಣುತ್ತಿದ್ದ ಚಾಮರಾಜನಗರದಲ್ಲಿ ಈಗ ಬಿಯರ್ ಮಾರಾಟವೇ ಅಧಿಕವಾಗಿದ್ದು ಭಾರತೀಯ ಮದ್ಯಕ್ಕೆ ಹೋಲಿಸಿದರೇ ಬಿಯರ್ ಮಾರಾಟ ವೇಗ ಪಡೆದುಕೊಂಡಿದೆ. 

Written by - Yashaswini V | Last Updated : Feb 5, 2024, 03:02 PM IST
  • ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಎಂಬ ಒಟ್ಟು 4 ವಲಯಗಳಿವೆ
  • ಇಲ್ಲಿ 2022-23 ರಲ್ಲಿ 2,63,756 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು.
  • 2023-24 ರಲ್ಲಿ ಇದು 3,42,414 ಕೇಸ್ ಮಾರಾಟವಾಗಿದ್ದು ಶೇ.30 ರಷ್ಟು ಬಿಯರ್ ಮಾರಾಟ ಅಧಿಕವಾಗಿದೆ.
ಗಡಿಜಿಲ್ಲೆಯಲ್ಲಿ ಬಿಯರ್ ಹೀರುವವರ ಸಂಖ್ಯೆ ಹೆಚ್ಚಳ: ಇದೇ ಮುಖ್ಯ ಕಾರಣ  title=

ಚಾಮರಾಜನಗರ: ನಗರ ಪ್ರದೇಶಗಳಲ್ಲಿ ಮಾತ್ರ ಬಿಯರ್ ಸೇವನೆ ಹೆಚ್ಚು ಎಂಬುದು ಈಗ ಬದಲಾಗಿದ್ದು ಚಾಮರಾಜನಗರದ ಗುಂಡುಪ್ರಿಯರು ಈಗ ಮದ್ಯದಿಂದ ಬಿಯರ್ ನತ್ತ ಹೊರಳಿದ್ದಾರೆ.  

ಹೌದು..., ಅಬಕಾರಿ ಇಲಾಖೆ ಕೊಟ್ಟಿರುವ ಅಂಕಿ- ಅಂಶದ ಪ್ರಕಾರ 2023 ಡಿಸೆಂಬರ್ ಹಾಗೂ ಕಳೆದ ಜನವರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಬಿಯರ್ ಮಾರಾಟಗೊಂಡ ಜಿಲ್ಲೆಗಳಲ್ಲಿ ಚಾಮರಾಜನಗರ ಎರಡನೇ ಸ್ಥಾನದಲ್ಲಿದ್ದು ಮೊದಲ ಸ್ಥಾನ ತುಮಕೂರಿದೆ.

ಬೇಸಿಗೆ ಸಂದರ್ಭದಲ್ಲಿ  ಮಾತ್ರ ಬಿಯರ್ ಮಾರಾಟ ಚೇತರಿಕೆ ಕಾಣುತ್ತಿದ್ದ ಚಾಮರಾಜನಗರದಲ್ಲಿ ಈಗ ಬಿಯರ್ ಮಾರಾಟವೇ ಅಧಿಕವಾಗಿದ್ದು ಭಾರತೀಯ ಮದ್ಯಕ್ಕೆ ಹೋಲಿಸಿದರೇ ಬಿಯರ್ ಮಾರಾಟ ವೇಗ ಪಡೆದುಕೊಂಡಿದೆ. 

ಇದನ್ನೂ ಓದಿ- Gold investment: ಚಿನ್ನದ ನಾಣ್ಯಗಳ ಮೇಲಿನ ಹೂಡಿಕೆಯ ಪ್ರಯೋಜನಗಳು

ಎಷ್ಟು ಮಾರಾಟ..? ನಿರೀಕ್ಷಿತ ಆದಾಯ ಎಷ್ಟು..? 
ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಎಂಬ ಒಟ್ಟು 4 ವಲಯಗಳಿದ್ದು 2022-23 ರಲ್ಲಿ 2,63,756 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. 2023-24 ರಲ್ಲಿ ಇದು 3,42,414 ಕೇಸ್ ಮಾರಾಟವಾಗಿದ್ದು ಶೇ.30 ರಷ್ಟು ಬಿಯರ್  ಮಾರಾಟ ಅಧಿಕವಾಗಿದೆ. ಅಂದರೆ, 78,658 ಲಕ್ಷ ಕೇಸ್ ಹೆಚ್ಚು ಮಾರಾಟಗೊಂಡಿದೆ.

ಐಎಂಎಲ್( ಭಾರತೀಯ ಮದ್ಯ) ಮಾರಾಟವು ಅಧಿಕವಾಗಿದ್ದು  2022-23 ರಲ್ಲಿ 8,46,255 ಕೇಸ್ ಮಾರಾಟವಾಗಿದ್ದರೇ  8,73, 669 ಕೇಸ್ ಮಾರಾಟವಾಗಿದ್ದು ಶೇ.3.24  ರಷ್ಟು ಮದ್ಯ ಮಾರಾಟ ಅಧಿಕವಾಗಿದೆ. 

ಇದನ್ನೂ ಓದಿ- New Rule: ತಂಬಾಕು-ಪಾನ್ ಮಸಾಲಾಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ, ಏಪ್ರಿಲ್ 1 ರಿಂದ 1 ಲಕ್ಷ ರೂ. ದಂಡ

ಕಾರಣ ಏನು?
ಲಭ್ಯವಿರುವ ಮಾಹಿತಿಗಳ ಪ್ರಕಾರ, ಚಾಮರಾಜನಗರದಲ್ಲಿ ಕೂಲಿ ಹಾಗೂ ಕೆಳ ಮಧ್ಯಮ ವರ್ಗದ ಜನರೇ ಹೆಚ್ಚು ಮದ್ಯ ಸೇವನೆ ಮಾಡಲಿದ್ದು ಕೊಳ್ಳುವ ಶಕ್ತಿ ಕಡಿಮೆ. ಈ ಹಿನ್ನೆಲೆಯಲ್ಲಿ, ಮದ್ಯಕ್ಕೆ ಹೋಲಿಸಿದರೇ ಬಿಯರ್ ಬೆಲೆ ಕಡಿಮೆ ಇರುವುದರಿಂದ ಬಿಯರ್ ಮತ್ತು ಸ್ವಲ್ಪ ಅಗ್ಗದ ಮದ್ಯ ಎರಡನ್ನೂ ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ, ಆದ್ದರಿಂದ ಬಿಯರ್ ಮಾರಾಟ ಹೆಚ್ಚಾಗಿರಬಹುದು ಎಂದು ಚಾಮರಾಜನಗರ ಅಬಕಾರಿ ಆಯುಕ್ತ ನಾಗಶಯನ ಹೇಳಿದ್ದಾರೆ. ಇನ್ನು, ನಿರೀಕ್ಷಿತ ಆದಾಯವು ಏರಿಕೆ ಕಂಡಿರುವುದಾಗಿ ಆಯುಕ್ತರು ಮಾಹಿತಿ ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News