Salary Hike News : ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ : ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳ

 7th Pay Commission : ಇತ್ತೀಚೆಗೆ ಬಿಡುಗಡೆಯಾದ ಡಿಸೆಂಬರ್ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ, ಜನವರಿ 2024 ರಿಂದ, ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ  ಡಿಆರ್  4% ರಷ್ಟು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ. 

Written by - Ranjitha R K | Last Updated : Feb 7, 2024, 09:58 AM IST
  • ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶುಭ ಸುದ್ದಿ
  • ಡಿಎ ಡಿಆರ್ ನಲ್ಲಿ 4 ಶೇ ದಷ್ಟು ಹೆಚ್ಚಳ
  • ಉದ್ಯೋಗಿಗಳಿಗೆ ಮೂರು ದೊಡ್ಡ ಉಡುಗೊರೆಗಳು ಸಿಗಲಿವೆ.
Salary Hike News : ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ : ಮಾಸಿಕ ವೇತನದಲ್ಲಿ ಭಾರೀ ಹೆಚ್ಚಳ title=

7th Pay Commission : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇದು  ಒಂದು ಒಳ್ಳೆಯ ಸುದ್ದಿ ಇದೆ. ನೌಕರರು ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ನಿರ್ಧಾರ ಶೀಘ್ರವೇ ಹೊರ ಬೀಳಲಿದೆ. ಕೆಲವೇ ದಿನಗಳಲ್ಲಿ ಉದ್ಯೋಗಿಗಳಿಗೆ ಮೂರು ದೊಡ್ಡ ಉಡುಗೊರೆಗಳು ಸಿಗಲಿವೆ. 

ಡಿಎ ಹೆಚ್ಚಳ :
ಇತ್ತೀಚಿಗೆ ಬಿಡುಗಡೆಯಾದ ಡಿಸೆಂಬರ್ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ, 2024 ರ ಜನವರಿಯಿಂದ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ 4% ರಷ್ಟು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ.ಇದು ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಅನ್ನು ಶೇ.50ಕ್ಕೆ ಹೆಚ್ಚಿಸಲಿದೆ. ಇದರಿಂದ ಮಾಸಿಕ ವೇತನ ಮತ್ತು ಪಿಂಚಣಿಯಲ್ಲಿ ಭಾರೀ ಏರಿಕೆಯಾಗಲಿದೆ. ಆದರೆ,ಈ ಬಗ್ಗೆ ಅಧಿಕೃತ  ಘೋಷಣೆ  ಮಾರ್ಚ್ ನಲ್ಲಿ ಬರಲಿದೆ ಎನ್ನಲಾಗಿದೆ.

ಇದನ್ನೂ ಓದಿ : StartUp News: ಕನ್ನಡದ ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಹಲವು ಬಂಡವಾಳ ಹೂಡಿಕೆದಾರರಿಂದ 83 ಕೋಟಿ ರೂ.ಗಳನ್ನು ಕಲೆಹಾಕಿದೆ ಈ ಸ್ಟಾರ್ಟ್ ಅಪ್!

ಫಿಟ್ಮೆಂಟ್ ಅಂಶದಲ್ಲಿ ಹೆಚ್ಚಳ :
ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎನ್ನುವುದು ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರಕಾರ ಶೀಘ್ರವೇ ನೌಕರರ ಈ ಬೇಡಿಕೆಗೆ ಅಸ್ತು ಎನ್ನಲಿದೆ ಎಂದು ಹೇಳಲಾಗುತ್ತಿದೆ. ಈಗಿನಂತೆ, 7ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ಫಿಟ್‌ಮೆಂಟ್ ಅಂಶವು 2.57 ಆಗಿದೆ. ಇದರ ಅಡಿಯಲ್ಲಿ ಕನಿಷ್ಠ ಮೂಲ ವೇತನ 18,000 ರೂ.

ಫಿಟ್‌ಮೆಂಟ್ ಅಂಶವನ್ನು 2.57 ರಿಂದ 3 ಪಟ್ಟು ಹೆಚ್ಚಿಸುವಂತೆ ನೌಕರರು ಒತ್ತಾಯಿಸುತ್ತಿದ್ದಾರೆ. ಫಿಟ್‌ಮೆಂಟ್ ಅಂಶ ಮೂರು ಪಟ್ಟು ಹೆಚ್ಚಾದರೆ ಮೂಲ ವೇತನ 18,000 ರೂ.ನಿಂದ 21,000 ರೂ.ಗೆ ಏರುತ್ತದೆ. ಇದರಿಂದಾಗಿ ನೌಕರರ ವೇತನದಲ್ಲಿ ಭಾರೀ  ಏರಿಕೆಯಾಗಲಿದೆ. 

ಫಿಟ್‌ಮೆಂಟ್ ಅಂಶವು ಉದ್ಯೋಗಿಗಳ ವೇತನವನ್ನು ಎಷ್ಟು ಹೆಚ್ಚಿಸುತ್ತದೆ ಎಂಬುದನ್ನು ಈ ಲೆಕ್ಕಾಚಾರ ತೋರಿಸುತ್ತದೆ.

- ಫಿಟ್‌ಮೆಂಟ್ ಅಂಶವು 2.57 ಪಟ್ಟು ಇದ್ದರೆ, ರೂ.18,000 X 2.57 = ಮೂಲ ವೇತನ 18,000 ರೂ. ಆಗಿದ್ದಾಗ ಸಿಗುವ ಮೊತ್ತ 46,260 ಆಗಿರುತ್ತದೆ. 
- ಫಿಟ್‌ಮೆಂಟ್ ಅಂಶವು 3 ಪಟ್ಟು ಇದ್ದರೆ, ವೇತನ 21,000 X 3 =  63,000 ಗೆ  ಏರುತ್ತದೆ. 

ಇದನ್ನೂ ಓದಿ : PM Kisan ಯೋಜನೆಯ ಫಲಾನುಭವಿಗಳಿಗೊಂದು ಮಹತ್ವದ ಅಪ್ಡೇಟ್, ಖಾತೆಗೆ 12,000 ಬರುವುದೋ ಅಥವಾ ಇಲ್ಲ? ಉತ್ತರ ನೀಡಿದ ಸರ್ಕಾರ!

ವೆಚ್ಚದ ಬೆಲೆಗೆ ಅನುಗುಣವಾಗಿ ಅರಿಯರ್ ಮೊತ್ತ : 
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅಸಾಧಾರಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರಿ ನೌಕರರ ಭತ್ಯೆಯನ್ನು ಜನವರಿ 2020 ರಿಂದ ಜೂನ್ 2021 ರವರೆಗೆ ತಡೆಹಿಡಿದಿತ್ತು. ಪರಿಸ್ಥಿತಿ ಸುಧಾರಿಸಿದ ತಕ್ಷಣ ಫ್ರೀಜ್ ಅನ್ನು ತೆಗೆದುಹಾಕಲಾಯಿತು. ಆದರೆ, ಈ ಅವಧಿಯಲ್ಲಿ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ ಬಾಕಿಯನ್ನು ನೌಕರರಿಗೆ ಪಾವತಿಸಿಲ್ಲ. ಈ ಬಾಕಿ ನೀಡುವಂತೆ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಮುಂಬರುವ ಲೋಕಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ನೌಕರರನ್ನು ಓಲೈಸುವ ಸಲುವಾಗಿ ಕೇಂದ್ರ ಸರ್ಕಾರವು ಡಿಎ ಬಾಕಿಯನ್ನು ನೀಡಬಹುದು. ಹೀಗಾದರೆ ನೌಕರರು ಮತ್ತು ಪಿಂಚಣಿದಾರರ ಖಾತೆಗಳಿಗೆ ಭಾರೀ ದೊಡ್ಡ ಮೊತ್ತ ಜಮಾ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News