ಇಂಜಿನ್ ಸಮಸ್ಯೆಗಳ ಕಾರಣದಿಂದ ದಿವಾಳಿಯಾಗುವ ಹಾದಿಯಲ್ಲಿ ಉದ್ಯಮಿ ವಾಡಿಯಾ ಮಾಲಕತ್ವದ ವಿಮಾನಯಾನ ಸಂಸ್ಥೆ

ನುಸ್ಲಿ ವಾಡಿಯಾ ಅವರ ವಾಡಿಯಾ ಗ್ರೂಪ್ ಏರ್‌ಲೈನ್ಸ್ ಸಂಸ್ಥೆಯ ಬಹುಪಾಲು ಮಾಲಿಕತ್ವ ಹೊಂದಿದೆ. ವಾಡಿಯಾ ಗ್ರೂಪ್ ಕೂಕಿ ನಿರ್ಮಾಣ ಸಂಸ್ಥೆ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ (ಬಿಆರ್‌ಐಟಿ) ಮತ್ತು ವಸ್ತ್ರ ನಿರ್ಮಾಣ ಸಂಸ್ಥೆ ಬಾಂಬೇ ಡೈಯಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಕೋ (ಬಿಡಿ) ಮಾಲಕತ್ವ ಹೊಂದಿದೆ.

Written by - Girish Linganna | Edited by - Yashaswini V | Last Updated : May 3, 2023, 03:43 PM IST
  • ಭಾರತ ವಿಮಾನಯಾನ ಸಂಸ್ಥೆಗಳಿಗೆ ಅತ್ಯಂತ ಕಷ್ಟಕರ ಮಾರುಕಟ್ಟೆಯಾಗಿದೆ.
  • ಇಲ್ಲಿನ ಜೋರಾದ ದರ ಸ್ಪರ್ಧೆ ಜೆಟ್ ಏರ್‌ವೇಸ್ ಇಂಡಿಯಾ ಲಿಮಿಟೆಡ್ (ಜೆಟ್ಇನ್), ಉದ್ಯಮಿ ವಿಜಯ್ ಮಲ್ಯ ಮಾಲಿಕತ್ವದ ಕಿಂಗ್ ಫಿಶರ್ ಏರ್‌ಲೈನ್ಸ್ ನಂತಹ ಪ್ರಸಿದ್ಧ ಕಂಪನಿಗಳನ್ನೇ ಮುಳುಗಿಸಿದೆ.
  • ಇಂಟರ್‌ಗ್ಲೋಬ್ ಏವಿಯೇಷನ್‌ ಲಿಮಿಟೆಡ್ (ಇಂಡಿಗೋ), ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ವಿಮಾನಯಾನ ಸೇವೆ ಒದಗಿಸುತ್ತಿದ್ದು, ಅರ್ಧಕ್ಕಿಂತಲೂ ಹೆಚ್ಚು ಸ್ಥಳೀಯ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ.
ಇಂಜಿನ್ ಸಮಸ್ಯೆಗಳ ಕಾರಣದಿಂದ ದಿವಾಳಿಯಾಗುವ ಹಾದಿಯಲ್ಲಿ ಉದ್ಯಮಿ ವಾಡಿಯಾ ಮಾಲಕತ್ವದ ವಿಮಾನಯಾನ ಸಂಸ್ಥೆ title=

ಭಾರತದ ವಿಮಾನಯಾನ ಸಂಸ್ಥೆ ಗೋ ಏರ್‌ಲೈನ್ಸ್ ಇಂಡಿಯಾ ಲಿಮಿಟೆಡ್ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರ್ಯಾಟ್ ಆ್ಯಂಡ್ ವಿಟ್ನಿ ಸಂಸ್ಥೆಯ ಇಂಜಿನ್ ವೈಫಲ್ಯವನ್ನು ಸಂಸ್ಥೆ ಕಾರಣವಾಗಿ ನೀಡಿದೆ. ವಿಮಾನಯಾನ ಬೇಡಿಕೆ ಹೆಚ್ಚಾಗುತ್ತಿರುವ ದಿನಗಳಲ್ಲಿ ಗೋ ಫಸ್ಟ್ ಏರ್‌ಲೈನ್ಸ್ ಕಾರ್ಯಾಚರಣೆ ನಿಲ್ಲಿಸುತ್ತಿದೆ.

ಸಾಲದ ಸೋಲದಲ್ಲಿ ಸಿಲುಕಿರುವ ಸಂಸ್ಥೆ ಮಂಗಳವಾರ ತನ್ನ ಹೇಳಿಕೆಯಲ್ಲಿ ತಾನು ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನಲ್ಲಿ ದಿವಾಳಿತನದ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಇದಕ್ಕೆ ಕಾರಣ ಪ್ರ್ಯಾಟ್ ಆ್ಯಂಡ್ ವಿಟ್ನಿಯ ಇಂಟರ್‌ನ್ಯಾಷನಲ್ ಏರೋ ಇಂಜಿನ್‌ಗಳು ಸತತವಾಗಿ ವಿಫಲವಾಗುತ್ತಿರುವುದು ಎಂದಿದೆ. ಈ ಇಂಜಿನ್ ವೈಫಲ್ಯದ ಕಾರಣದಿಂದ ಈಗಾಗಲೇ 25 ಎ320 ನಿಯೋ ಜೆಟ್ ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭಾರತೀಯ ಸಂಸ್ಥೆಯಾದ ವಾಡಿಯಾ ಗ್ರೂಪ್ ಮಾಲಕತ್ವದ ಗೋ ಏರ್‌ಲೈನ್ಸ್ ತನ್ನ ಹೇಳಿಕೆಯಲ್ಲಿ ಪ್ರ್ಯಾಟ್ ಸಂಸ್ಥೆ ಮಧ್ಯಸ್ಥಗಾರರ ಆದೇಶದಂತೆ, ಎಪ್ರಿಲ್ 27ರ ಒಳಗೆ ಕನಿಷ್ಠ ಹತ್ತು ಕಾರ್ಯಾಚರಿಸುವಂತಹ ಇಂಜಿನ್‌ಗಳು ಮತ್ತು ಡಿಸೆಂಬರ್ 2023ರ ಒಳಗೆ ಇನ್ನೂ ಹತ್ತು ಇಂಜಿನ್‌ಗಳನ್ನು ಪೂರೈಸಬೇಕು ಎನ್ನುವ ಬೇಡಿಕೆಯನ್ನು ನಿರಾಕರಿಸಿದೆ ಎಂದು ಆರೋಪಿಸಿದೆ.

ಇಂಜಿನ್‌ಗಳನ್ನು ನಿರ್ಮಿಸುವ ಸಂಸ್ಥೆ ರೇಥಾನ್ ಟೆಕ್ನಾಲಜೀಸ್‌ ಕಾರ್ಪ್ (ಆರ್‌ಟಿಎಕ್ಸ್) ಸಂಸ್ಥೆಯ ಅಂಗಸಂಸ್ಥೆಯಾಗಿದ್ದು, ಅದು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ತನ್ನ ಪ್ರತ್ಯೇಕ ಹೇಳಿಕೆಯಲ್ಲಿ ಸಂಸ್ಥೆ ತಾನು ಮಧ್ಯಸ್ಥಿಕೆದಾರರ ಆದೇಶಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ.

"ಪ್ರ್ಯಾಟ್ ಆ್ಯಂಡ್ ವಿಟ್ನಿ ಸಂಸ್ಥೆ ತನ್ನ ಏರ್‌ಲೈನ್ ಗ್ರಾಹಕ ಸಂಸ್ಥೆಗಳ ಯಶಸ್ಸಿಗೆ ಕಟಿಬದ್ಧವಾಗಿದ್ದು, ನಾವು ಎಲ್ಲ ಗ್ರಾಹಕರಿಗೆ ನಿರ್ಧಾರಿತ ಸಮಯದಲ್ಲೇ ಉತ್ಪನ್ನಗಳನ್ನು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ವಿಚಾರ ಈಗ ವ್ಯಾಜ್ಯ ರೂಪಕ್ಕೆ ತಿರುಗಿರುವುದರಿಂದ, ತಾನು ಈ ಕುರಿತು ಇನ್ನೇನೂ ಮಾತನಾಡುವುದಿಲ್ಲ" ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ- ಹೆಚ್ಚಿನ ಪಿಂಚಣಿ ಪಡೆಯಲು ಜೂನ್ 26 ರವರೆಗೆ ಅವಕಾಶ ! ಗಡುವು ವಿಸ್ತರಿಸಿದ ಸರ್ಕಾರ

ಗೋ ಫಸ್ಟ್ ಸಂಸ್ಥೆಯ ಹೇಳಿಕೆಯ ಪ್ರಕಾರ, ಪ್ರ್ಯಾಟ್ ಆ್ಯಂಡ್ ವಿಟ್ನಿ ಸಂಸ್ಥೆಯ ಇಂಜಿನ್‌ಗಳ ಸರಣಿ ವೈಫಲ್ಯದ ಪರಿಣಾಮವಾಗಿ ಹಲವು ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಲಾಭದ ಕೊರತೆ ಮತ್ತು ಇತರ ವೆಚ್ಚಗಳ ಮೂಲಕ 108 ಬಿಲಿಯನ್ ರೂಪಾಯಿ (1.3 ಬಿಲಿಯನ್ ಡಾಲರ್) ನಷ್ಟ ಉಂಟು ಮಾಡಿದೆ.

"ನಾವು ಇನ್ನು ಮುಂದೆ ಈ ಹಣಕಾಸಿನ ಹೊರೆಯನ್ನು ಸಹಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ" ಎಂದು ಸಂಸ್ಥೆ ಹೇಳಿಕೊಂಡಿದೆ. ಗೋ ಏರ್‌ಲೈನ್ಸ್ ಡೆಲಾವೆರ್ ನ್ಯಾಯಾಲಯದ ಬಳಿ ಮಧ್ಯಸ್ಥಿಕೆದಾರರ ನಿರ್ಧಾರಗಳನ್ನು ಅಧಿಕೃತಗೊಳಿಸುವಂತೆ ಮನವಿ ಮಾಡಿತ್ತು.

ಕಳೆದ ವರ್ಷ ಸಂಸ್ಥೆಯ 36 ಬಿಲಿಯನ್ ರೂಪಾಯಿ ಮೌಲ್ಯದ ಶೇರು ಮಾರಾಟದ ಪ್ರಯತ್ನ ಬಳಿಕ ರದ್ದುಗೊಂಡಿತು. ಅದಕ್ಕೂ ಮೊದಲು ಸಂಸ್ಥೆಯನ್ನು 'ಗೋ ಫಸ್ಟ್' ಎಂದು ಮರುನಾಮಕರಣ ಮಾಡಲಾಯಿತು. ಕೋವಿಡ್ ಸಾಂಕ್ರಾಮಿಕದ ಬಳಿಕ ಭಾರತದಲ್ಲಿ ವಿಮಾನಯಾನದ ಬೇಡಿಕೆ ಅಪಾರವಾಗಿ ಹೆಚ್ಚಳವಾದರೂ, ಸಂಸ್ಥೆಗೆ ಅಗತ್ಯ ವಿಮಾನಗಳನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಿತ್ತು. ಸಂಸ್ಥೆಯ ಬಳಿ ಪ್ರಸ್ತುತ 59 ವಿಮಾನಗಳಿದ್ದು, ಅವುಗಳಲ್ಲಿ 54 ಎ320 ನಿಯೋಸ್ ಆಗಿವೆ. ಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಈ ವಿಮಾನಗಳು 34 ನಗರಗಳಿಗೆ ಸಂಚರಿಸುತ್ತಿದ್ದು, ಅವುಗಳಲ್ಲಿ 7 ವಿದೇಶಗಳಿಗೆ ಪ್ರಯಾಣಿಸುತ್ತವೆ.

ನುಸ್ಲಿ ವಾಡಿಯಾ ಅವರ ವಾಡಿಯಾ ಗ್ರೂಪ್ ಏರ್‌ಲೈನ್ಸ್ ಸಂಸ್ಥೆಯ ಬಹುಪಾಲು ಮಾಲಿಕತ್ವ ಹೊಂದಿದೆ. ವಾಡಿಯಾ ಗ್ರೂಪ್ ಕೂಕಿ ನಿರ್ಮಾಣ ಸಂಸ್ಥೆ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ (ಬಿಆರ್‌ಐಟಿ) ಮತ್ತು ವಸ್ತ್ರ ನಿರ್ಮಾಣ ಸಂಸ್ಥೆ ಬಾಂಬೇ ಡೈಯಿಂಗ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ ಕೋ (ಬಿಡಿ) ಮಾಲಕತ್ವ ಹೊಂದಿದೆ.

ಇದನ್ನೂ ಓದಿ- FD Interest Rate: ಈ ಬ್ಯಾಂಕ್ FD ಮೇಲೆ ಶೇ.9ರಷ್ಟು ಬಡ್ಡಿ ನೀಡುತ್ತಿದೆ

ಕಷ್ಟಕರ ಮಾರುಕಟ್ಟೆ: 
ಭಾರತ ವಿಮಾನಯಾನ ಸಂಸ್ಥೆಗಳಿಗೆ ಅತ್ಯಂತ ಕಷ್ಟಕರ ಮಾರುಕಟ್ಟೆಯಾಗಿದೆ. ಇಲ್ಲಿನ ಜೋರಾದ ದರ ಸ್ಪರ್ಧೆ ಜೆಟ್ ಏರ್‌ವೇಸ್ ಇಂಡಿಯಾ ಲಿಮಿಟೆಡ್ (ಜೆಟ್ಇನ್), ಉದ್ಯಮಿ ವಿಜಯ್ ಮಲ್ಯ ಮಾಲಿಕತ್ವದ ಕಿಂಗ್ ಫಿಶರ್ ಏರ್‌ಲೈನ್ಸ್ ನಂತಹ ಪ್ರಸಿದ್ಧ ಕಂಪನಿಗಳನ್ನೇ ಮುಳುಗಿಸಿದೆ. ಇಂಟರ್‌ಗ್ಲೋಬ್ ಏವಿಯೇಷನ್‌ ಲಿಮಿಟೆಡ್ (ಇಂಡಿಗೋ), ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ವಿಮಾನಯಾನ ಸೇವೆ ಒದಗಿಸುತ್ತಿದ್ದು, ಅರ್ಧಕ್ಕಿಂತಲೂ ಹೆಚ್ಚು ಸ್ಥಳೀಯ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ. ಸಂಸ್ಥೆ ಕಡಿಮೆ ಬೆಲೆಯ, ಸಮಯಕ್ಕೆ ಸರಿಯಾದ ಸೇವೆಗಳನ್ನು ಒದಗಿಸುವ ಮೂಲಕ ಈ ಪಾರಮ್ಯ ಸಾಧಿಸಿದೆ.

ಭಾರತದ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಮುಖ ಪೂರೈಕೆ ವಿಚಾರಗಳು ಗೋ ಫಸ್ಟ್ ಸಂಸ್ಥೆಯ ಹಣಕಾಸಿಗೆ ಹೊಡೆತ ನೀಡಿವೆ ಎಂದಿದ್ದಾರೆ. ಅವರು ತಮ್ಮಹೇಳಿಕೆಯಲ್ಲಿ, ಸರ್ಕಾರ ಸಂಸ್ಥೆಗೆ ಸಹಾಯ ನೀಡುತ್ತಿದ್ದು, ಇಂಜಿನ್ ಸಮಸ್ಯೆಯ ಕುರಿತು ಈಗಾಗಲೇ ಹಲವರೊಡನೆ ಮಾತುಕತೆ ನಡೆಸಿದೆ ಎಂದಿದ್ದಾರೆ. ಗೋ ಫಸ್ಟ್ ಸಂಸ್ಥೆ ಮೊದಲು ಪ್ರಯಾಣಿಕರಿಗೆ ತಲುಪಬೇಕಾದಲ್ಲಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟು, ಬಳಿಕ ಕಾನೂನು ತನ್ನ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡಬೇಕಿದೆ.

ಭಾರತದ ವೈಮಾನಿಕ ವಾಯುಯಾನ ನಿಯಂತ್ರಣ ಸಂಸ್ಥೆ ಗೋ ಫಸ್ಟ್ ಸಂಸ್ಥೆಗೆ ಮುನ್ಸೂಚನೆ ನೀಡದೆ, ಯಾಕೆ ವಿಮಾನಗಳನ್ನು ರದ್ದುಪಡಿಸಿದೆ ಎಂದು ವಿವರಿಸುವಂತೆ ಸೂಚಿಸಿದೆ. ಗೋ ಫಸ್ಟ್ ಸಂಸ್ಥೆ ಯಾವುದೇ ಪೂರ್ವ ಸೂಚನೆಗಳಿಲ್ಲದೆ ಎರಡು ದಿನಗಳ ವಿಮಾನಗಳನ್ನು ರದ್ದುಪಡಿಸಿದ ಪರಿಣಾಮವಾಗಿ ಈ ಸೂಚನೆ ನೀಡಲಾಗಿದೆ. ಈಗ ಗೋ ಫಸ್ಟ್ ಸಂಸ್ಥೆಗೆ ತನ್ನ ಎಂದಿನ ವಿಮಾನಯಾನ ಕಾರ್ಯಾಚರಣೆ ಪುನರಾರಂಭಿಸುವ ಯೋಚನೆ ಕೈಗೊಳ್ಳಲು ಶುಕ್ರವಾರದ ತನಕ ಕಾಲಾವಕಾಶವಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

"ಗೋ ಫಸ್ಟ್ ಸ್ವಯಂಪ್ರೇರಿತವಾಗಿ ದಿವಾಳಿತನ ಘೋಷಣೆಗೆ ಮುಂದಾಗಿದೆ. ಈ ಘೋಷಣೆ ವಿಮಾನಯಾನ ಅತಿಹೆಚ್ಚು ಮಟ್ಟದಲ್ಲಿ ನಡೆಯುವ, ಶಾಲೆಗಳಿಗೆ ರಜೆ ಸಿಗುವ ಸಂದರ್ಭದಲ್ಲಿ ನಡೆದಿದೆ" ಎನ್ನುತ್ತಾರೆ ವಿಮಾನಯಾನ ಸಲಹಾ ಸಂಸ್ಥೆ ಎಟಿ-ಟಿವಿ ನಿರ್ವಾಹಕ ಪಾಲುದಾರ ಮತ್ತು ಮಾಜಿ ಗೋ - ಫಸ್ಟ್ ಉದ್ಯೋಗಿ ಸತ್ಯೇಂದ್ರ ಪಾಂಡೆ.

ಎಲ್ಲರೂ ಗೋ ಫಸ್ಟ್ ಕಾರ್ಯಾಚರಣೆ ನಡೆಸುತ್ತದೆ ಎಂಬ ಆಶಾ ಭಾವನೆ ಹೊಂದಿದ್ದಾರೆ. ಆದರೆ ಅದಕ್ಕಾಗಿ ವಿಮಾನ ನಿಲ್ದಾಣಗಳು ಮತ್ತು ಇತರ ಸೇವೆಗಳಿಗೆ ಸಂಸ್ಥೆ ಮುಂಚಿತವಾಗಿ ಹಣ ಪಾವತಿಸಬೇಕಾಗುತ್ತದೆ. ಆದರೆ ಈಗ ಗೋ ಫಸ್ಟ್ ಸಂಸ್ಥೆ ಇದನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದು ಯಾರಿಗೂ ತಿಳಿಯದ ವಿಚಾರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News