ಶರದ್ ಪೂರ್ಣಿಮಾ ದಿನವೇ ಚಂದ್ರಗ್ರಹಣ, ಗಜಕೇಸರಿ ಯೋಗ: ಈ ರಾಶಿಯವರ ಮನೆಗೆ ತಾಯಿ ಲಕ್ಷ್ಮಿ ಪ್ರವೇಶ

Gajakesari Yoga: ನಾಳೆ ಶನಿವಾರ, 28 ಅಕ್ಟೋಬರ್ 2023ರಂದು ಶರದ್ ಪೂರ್ಣಿಮೆಯ ರಾತ್ರಿ ಚಂದ್ರನ ಮೇಲೆ ಗ್ರಹಣದ ಛಾಯೆ ಮೂಡಲಿದ್ದು, ಈ ಅವಧಿಯಲ್ಲಿ ಶುಭಕರ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ, ನಾಲ್ಕು ರಾಶಿಯವರ ಜೀವನದಲ್ಲಿ ತಾಯಿ ಲಕ್ಷ್ಮಿ ಪ್ರವೇಶಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Oct 27, 2023, 08:27 AM IST
  • ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗಜಕೇಸರಿ ಯೋಗವನ್ನು ರಾಜಯೋಗ ಎಂದು ಬಣ್ಣಿಸಲಾಗುತ್ತದೆ.
  • ಈ ರೀತಿಯಾಗಿ, ನಾಳೆ 28 ಅಕ್ಟೋಬರ್ 2023 ರಂದು, ಶರದ್ ಪೂರ್ಣಿಮಾದಲ್ಲಿ ಚಂದ್ರಗ್ರಹಣ ಮತ್ತು ಗಜಕೇಸರಿ ರಾಜ ಯೋಗದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
  • ಆದಾಗ್ಯೂ, ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಶರದ್ ಪೂರ್ಣಿಮಾ ದಿನವೇ ಚಂದ್ರಗ್ರಹಣ, ಗಜಕೇಸರಿ ಯೋಗ: ಈ ರಾಶಿಯವರ ಮನೆಗೆ ತಾಯಿ ಲಕ್ಷ್ಮಿ ಪ್ರವೇಶ  title=

Sharad Purnima, Lunar Eclipse, Gajakesari Yoga:  ನಾಳೆ 28 ಮತ್ತು 29 ಅಕ್ಟೋಬರ್ 2023 ರ ರಾತ್ರಿ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಶುಭ ಶರದ್ ಪೂರ್ಣಿಮಾ ದಿನದಂದು ಸಂಭವಿಸಲಿರುವ ಈ ಗ್ರಹಣವು ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಈ ಚಂದ್ರಗ್ರಹಣವು 2023ರಲ್ಲಿ ಭಾರತದಲ್ಲಿ ಗೋಚರಿಸುತ್ತಿರುವ ಏಕೈಕ ಗ್ರಹಣವಾಗಿದೆ. ಅಷ್ಟೇ ಅಲ್ಲ, ದಶಕದ ಬಳಿಕ  ಶರದ್ ಪೂರ್ಣಿಮೆಯಲ್ಲಿ ಸಂಭವಿಸುತ್ತಿರುವ ಚಂದ್ರ ಗ್ರಹಣ ಇದಾಗಿದ್ದು, ಇದರಿಂದಾಗಿ ಶುಭಕರ ಗಜಕೇಸರಿ ಯೋಗವೂ ನಿರ್ಮಾಣವಾಗಲಿದೆ. 

ಹೌದು, ನಾಳೆ, ಚಂದ್ರ ಮೇಷ ರಾಶಿಯಲ್ಲಿ ಇರಲಿದ್ದಾರೆ. ಈಗಾಗಲೇ, ಗುರು ಮೇಷ ರಾಶಿಯಲ್ಲಿರುವುದರಿಂದ ಮೇಷ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಅತ್ಯಂತ ಮಂಗಳಕರ ಗಜಕೇಸರಿ ಯೋಗ ನಿರ್ಮಾಣವಾಗಲಿದೆ.  

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗಜಕೇಸರಿ ಯೋಗವನ್ನು ರಾಜಯೋಗ ಎಂದು ಬಣ್ಣಿಸಲಾಗುತ್ತದೆ. ಈ ರೀತಿಯಾಗಿ, ನಾಳೆ 28 ಅಕ್ಟೋಬರ್ 2023 ರಂದು, ಶರದ್ ಪೂರ್ಣಿಮಾದಲ್ಲಿ ಚಂದ್ರಗ್ರಹಣ ಮತ್ತು ಗಜಕೇಸರಿ ರಾಜ ಯೋಗದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Chandra Grahan: ಇನ್ನೆರಡು ದಿನದಲ್ಲಿ ಚಂದ್ರಗ್ರಹಣ, ಈ ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವ ಯೋಗ

ಶರದ್ ಪೂರ್ಣಿಮ ದಿನವೇ ಚಂದ್ರ ಗ್ರಹಣ, ಗಜಕೇಸರಿ ಯೋಗ: ಈ ರಾಶಿಯವರಿಗೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ:- 
ವೃಷಭ ರಾಶಿ: 

ಶರದ್ ಪೂರ್ಣಿಮೆಯಂದು ಸಂಭವಿಸಲಿರುವ ವರ್ಷದ ಕೊನೆಯ ಚಂದ್ರಗ್ರಹಣವು ವೃಷಭ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ಈ ಸಮಯದ್ಲಲಿ ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಬ್ಗಳು ಬಗೆಹರಿಯಲಿದ್ದು, ಪ್ರಗತಿಯನ್ನು ಕಾಣಬಹುದು. 

ಮಿಥುನ ರಾಶಿ: 
ಶರದ್ ಪೂರ್ಣಿಮಯಂದೇ ಚಂದ್ರ ಗ್ರಹಣ, ಗಜಕೇಸರಿ ಯೋಗದ ಪರಿಣಾಮವಾಗಿ ಮಿಥುನ ರಾಶಿಯವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲಿದ್ದಾರೆ. ಆರ್ಥಿಕ ಹರಿವು ಹೆಚ್ಚಾಗುವುದರಿಂದ ಒತ್ತಡ ನಿವಾರಣೆ ಆಗಿ, ಆನಂದದಾಯಕ ಸಮಯವನ್ನು ಅನುಭವಿಸುವಿರಿ. 

ಕನ್ಯಾ ರಾಶಿ:  
ಶರದ್ ಪೂರ್ಣಿಮ ಚಂದ್ರಗ್ರಹಣದ ದಿನ ರೂಪುಗೊಳ್ಳಲಿರುವ ಗಜಕೇಸರಿ ರಾಜಯೋಗವು ಕನ್ಯಾ ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಇದರಿಂದಾಗಿ ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಇದರ ಸದುಪಯೋಗ ಪಡಿಸಿಕೊಳ್ಳುವುದರಿಂದ ಉನ್ನತ ಹುದ್ದೆಗೇರುವಿರಿ. ಇದಲ್ಲದೆ, ಹೂಡಿಕೆಯಿಂದಲೂ ಲಾಭವಾಗಲಿದೆ. 

ಇದನ್ನೂ ಓದಿ- Lucky Girls Zodiac: ಈ ರಾಶಿಚಕ್ರದ ಹುಡುಗಿಯರು ಪತಿಗೆ ಅದೃಷ್ಟ ಲಕ್ಷ್ಮಿಯರು

ಕುಂಭ ರಾಶಿ: 
ಶರದ್ ಪೂರ್ಣಿಮಾ ಚಂದ್ರಗ್ರಹಣದ ಪ್ರಭಾವದಿಂದಾಗಿ ಕುಂಭ ರಾಶಿಯವರಿಗೆ ಕೆಟ್ಟ ದಿನಗಳು ಕೊನೆಗೊಂಡು ಶುಭ ದಿನಗಳು ಆರಂಭವಾಗಲಿದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಪ್ರಯೋಷನ್ ಸಾಧ್ಯತೆ ಇದ್ದು, ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News