Pre-Monsoon Season: ಪೂರ್ವ ಮುಂಗಾರು ಹಂಗಾಮಿನ ವೇಳೆ ನಿಮ್ಮ ಭೂಮಿಯನ್ನು ಸಿದ್ದಪಡಿಸುವ ವಿಧಾನ ಹೇಗೆ ಗೊತ್ತೇ...!

ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ.ರೈತ ಬಾಂಧವರು ಮೇ ತಿಂಗಳಿನಲ್ಲಿ ಎಂ.ಬಿ ನೇಗಿಲಿನಿಂದ ಹೊಲವನ್ನು ಉಳುಮೆ ಮಾಡಬೇಕು. ಇದರಿಂದ ಮಣ್ಣು ಸಡಿಲಗೊಂಡು ಕೆಳಗಡೆ ಇರುವಂತಹ ಸಮೃದ್ಧವಾದ ಪೋಷಕಾಂಶಯುಕ್ತ ಮಣ್ಣು ಮೇಲ್ಬಾಗಕ್ಕೆ ಬರುತ್ತದೆ.

Written by - Manjunath N | Last Updated : May 14, 2024, 07:20 PM IST
  • ಸೂರ್ಯನ ಕಿರಣಗಳ ಶಾಖಕ್ಕೆ ಒಳಗಾಗುವುದರಿಂದ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದುತ್ತದೆ.
  • ಉಳುಮೆ ಮಾಡಿದ ಮಣ್ಣು ಸೂಕ್ಷ್ಮ ಜೀವಿಗಳಿಗೆ ಹಾಗೂ ರೈತನ ಮಿತ್ರ ಎರೆಹುಳುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
Pre-Monsoon Season: ಪೂರ್ವ ಮುಂಗಾರು ಹಂಗಾಮಿನ ವೇಳೆ ನಿಮ್ಮ ಭೂಮಿಯನ್ನು ಸಿದ್ದಪಡಿಸುವ ವಿಧಾನ ಹೇಗೆ ಗೊತ್ತೇ...! title=
ಸಾಂಧರ್ಭಿಕ ಚಿತ್ರ

Pre-Monsoon Season: ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ.ರೈತ ಬಾಂಧವರು ಮೇ ತಿಂಗಳಿನಲ್ಲಿ ಎಂ.ಬಿ ನೇಗಿಲಿನಿಂದ ಹೊಲವನ್ನು ಉಳುಮೆ ಮಾಡಬೇಕು. ಇದರಿಂದ ಮಣ್ಣು ಸಡಿಲಗೊಂಡು ಕೆಳಗಡೆ ಇರುವಂತಹ ಸಮೃದ್ಧವಾದ ಪೋಷಕಾಂಶಯುಕ್ತ ಮಣ್ಣು ಮೇಲ್ಬಾಗಕ್ಕೆ ಬರುತ್ತದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

ಸೂರ್ಯನ ಕಿರಣಗಳ ಶಾಖಕ್ಕೆ ಒಳಗಾಗುವುದರಿಂದ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದುತ್ತದೆ. ಉಳುಮೆ ಮಾಡಿದ ಮಣ್ಣು ಸೂಕ್ಷ್ಮ ಜೀವಿಗಳಿಗೆ ಹಾಗೂ ರೈತನ ಮಿತ್ರ ಎರೆಹುಳುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಇದನ್ನೂ ಓದಿ: ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು : ಶುಭ ಗಳಿಗೆಯಲ್ಲಿಯೇ ಜೈಲಿನಿಂದ ಬಿಡುಗಡೆ 

ಇದಲ್ಲದೆ ಮಾಗಿ ಉಳುಮೆ ಮಾಡುವುದರಿಂದ ಕಳೆಗಳ ಹತೋಟಿ ಮಾಡಬಹುದು ಮತ್ತು ಮಣ್ಣಿನಲ್ಲಿ ಅವಿತಿರುವಂತಹ ಕೀಟ ಹಾಗೂ ಅವುಗಳ ತತ್ತಿಗಳು ಮತ್ತು ಕೋಶಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಂಡು ಅವುಗಳ ಸಂತತಿ ಕಡಿಮೆ ಆಗುತ್ತದೆ ಮತ್ತು ಸಮರ್ಪಕವಾಗಿ ಹತೋಟಿ ಆಗುತ್ತದೆ.ಮಾಗಿ ಉಳುಮೆ ಮಾಡುವ ಮೊದಲು ರೈತರು ತಮ್ಮ ಹೊಲಗಳಿಗೆ ಹೆಕ್ಟೆರಿಗೆ 10 ಟನ್‍ಗಳಷ್ಟು ಕೊಟ್ಟಿಗೆ ಅಥವಾ ಸಗಣಿ ಗೊಬ್ಬರವನ್ನು ಸಮನಾಗಿ ಹರಡಿ ನಂತರ ನೇಗಿಲಿನಿಂದ ಉಳುಮೆ ಮಾಡಿ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News