ಪವರ್ ಕಟ್‌ನಿಂದಾಗಿ ಜನರ ಪರದಾಟ; ರಸ್ತೆ ಬಂದ್ ಮಾಡಿ ಕಚೇರಿಗೆ ನುಗ್ಗಿದ ಸಾರ್ವಜನಿಕರು

ಸಣ್ಣ ಮಳೆ ಬಂದರೂ ಎದುರಾಗುವ ಪವರ್ ಕಟ್ ಸಮಸ್ಯೆಯಿಂದ ಬೇಸತ್ತಿರುವ  ಸಾರ್ವಜನಿಕರು ಕರೆಂಟ್ ಇಲ್ದೆ ಆಕ್ರೋಶಗೊಂಡು ಕಾರವಾರ ರೋಡ್ ಬಂದ್ (Karwar Road Bandh) ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Written by - Yashaswini V | Last Updated : May 14, 2024, 07:06 PM IST
  • ಪವರ್ ಇಲ್ಲದ ಕಾರಣ ಕುಡಿಯುವ ನೀರು ಇಲ್ಲಾ
  • ಕಾರವಾರ ರಸ್ತೆಯಲ್ಲಿ ಕಂಪನಿಗಳು, ಪೆಟ್ರೋಲ್ ಬಂಕ್‌ಗಳಿವೆ
  • ಐದಾರು ದಿನಗಳಿಂದ ವಿದ್ಯುತ್ ಕಟ್ ಆಗಿದ್ದರಿಂದ ಯಾವುದೇ ರೀತಿಯ ವ್ಯಾಪಾರ ಕೂಡ ಆಗುತ್ತಿಲ್ಲ ಎಂದು ಸಾರ್ವಜನಿಕರ ಆಕ್ರೋಶ
ಪವರ್ ಕಟ್‌ನಿಂದಾಗಿ ಜನರ ಪರದಾಟ; ರಸ್ತೆ ಬಂದ್ ಮಾಡಿ ಕಚೇರಿಗೆ ನುಗ್ಗಿದ ಸಾರ್ವಜನಿಕರು title=

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲೆ ನೋಡಿದ್ರೂ ಪವರ್ ಕಟ್.... ಕರೆಂಟ್ ಇಲ್ಲದೆ ಸಾರ್ವಜನಿಕರು ಪರಾದಡುವಂತಾಗಿದೆ. ಒಂದು ಚಿಕ್ಕ ಮಳೆ ಬಂದ್ರೆ ಸಾಕು ಕೆಲವೊಂದು ಭಾಗಗಳಲ್ಲಿ ಕರೆಂಟ್ ಇಲ್ದೆ, ಕತ್ತಲಲ್ಲಿ ಜೀವನ ನಡೆಸುವಂತಾಗಿದೆ.

ಸಣ್ಣ ಮಳೆ ಬಂದರೂ ಎದುರಾಗುವ ಪವರ್ ಕಟ್ ಸಮಸ್ಯೆಯಿಂದ ಬೇಸತ್ತಿರುವ  ಸಾರ್ವಜನಿಕರು ಕರೆಂಟ್ ಇಲ್ದೆ ಆಕ್ರೋಶಗೊಂಡು ಕಾರವಾರ ರೋಡ್ ಬಂದ್ (Karwar Road Bandh) ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ- SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ₹ 5 ಲಕ್ಷ ಪ್ರೋತ್ಸಾಹಧನ ನೀಡಿದ ಡಿಕೆಶಿ

ಹುಬ್ಬಳ್ಳಿಯ  ಕಾರವಾರ ರೋಡ್ (Karwar Road),  ಗೋಕುಲ ದಾಮ, ಪಂಜಾರ ಪೋಳ, ತಿಮ್ಮಸಾಗರ ರೋಡ್, ಹೀಗೆ ಸೇರಿದಂತೆ ಹಳೇ ಹುಬ್ಬಳ್ಳಿಯ ಕೆಲವೊಂದು ಭಾಗಗಳಲ್ಲಿ ಸುಮಾರು ಐದಾರು ದಿನಗಳಿಂದ ಕರೆಂಟ್ ಇಲ್ದೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. 

ಇದನ್ನೂ ಓದಿ- ಹುಬ್ಬಳ್ಳಿಯಲ್ಲಿ ಭಾರೀ ಮಳೆ- ಜನಜೀವನ ಅಸ್ತವ್ಯಸ್ತ

ಪವರ್ ಇಲ್ಲದ ಕಾರಣ ಕುಡಿಯುವ ನೀರು ಇಲ್ಲಾ (No drinking water), ಮನೆಯಲ್ಲಿ  ಚಿಕ್ಕ ಮಕ್ಕಳು ಮಲಗಲು ಆಗುತ್ತಿಲ್ಲ, ಈ ಕಾರವಾರ ರಸ್ತೆಯಲ್ಲಿ ಕಂಪನಿಗಳು, ಪೆಟ್ರೋಲ್ ಬಂಕ್‌ಗಳಿವೆ ಹೀಗೆ ಐದಾರು ದಿನಗಳಿಂದ ವಿದ್ಯುತ್ ಕಟ್ ಆಗಿದ್ದರಿಂದ ಯಾವುದೇ ರೀತಿಯ ವ್ಯಾಪಾರ ಕೂಡ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. 

ಪವರ್ ಕಟ್ ಸಮಸ್ಯೆ (Power cut problem) ಬಗ್ಗೆ ಹೇಳಲು ಹೋದ್ರೆ ಕೆಇಬಿ ಅಧಿಕಾರಿಗಳ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಸೇರಿಕೊಂಡು ಇಂದು ರಸ್ತೆ ಬಂದ್ ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News