ಸರ್ಕಾರ ಉರುಳಿಸುವುದು ಹೆಚ್ ಡಿ ಕುಮಾರಸ್ವಾಮಿ ಹಗಲುಗನಸು: ಸಚಿವ ಎಂಬಿ ಪಾಟೀಲ

ಶನಿವಾರ ತಮ್ಮ‌ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

Written by - Bhavishya Shetty | Last Updated : May 11, 2024, 07:36 PM IST
    • ರಾಜ್ಯ ಸರಕಾರ ಉರುಳಿ ಬೀಳಲಿದೆ ಎನ್ನುವ ಮಾತು ಬರೀ ಹಗಲುಗನಸು
    • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ
    • ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಲೇವಡಿ
ಸರ್ಕಾರ ಉರುಳಿಸುವುದು ಹೆಚ್ ಡಿ ಕುಮಾರಸ್ವಾಮಿ ಹಗಲುಗನಸು: ಸಚಿವ ಎಂಬಿ ಪಾಟೀಲ title=
File Photo

ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರಕಾರ ಉರುಳಿ ಬೀಳಲಿದೆ ಎನ್ನುವ ಹೆಚ್ ಡಿ ಕುಮಾರಸ್ವಾಮಿ ಅವರ ಮಾತು ಬರೀ ಹಗಲುಗನಸು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: 21 ವರ್ಷ, 700 ವಿಕೆಟ್, ಅಗಾಧ ನೆನಪು… ಕ್ರಿಕೆಟ್ ಲೋಕದ GOAT ಜೇಮ್ಸ್ ಆಂಡರ್ಸನ್ ನಿವೃತ್ತಿ ಘೋಷಣೆ

ಶನಿವಾರ ತಮ್ಮ‌ ನಿವಾಸದಲ್ಲಿ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕನಿಷ್ಠ ಪಕ್ಷ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ವಿಜಯಪುರದಲ್ಲಂತೂ ಕಾಂಗ್ರೆಸ್ ಅಭ್ಯರ್ಥಿ ಒಂದು ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತದಾರರ ಮನ ಗೆದ್ದಿವೆ. ಫಲಿತಾಂಶದ ನಂತರ ಜೆಡಿಎಸ್ ಗತಿ ಏನಾಗಲಿದೆ ಕಾದು ನೋಡೋಣ ಎಂದರು.

ಜೆಡಿಎಸ್ ಪಕ್ಷದ ಅನೇಕರು ಕಾಂಗ್ರೆಸ್ಸಿನ ಸಂಪರ್ಕದಲ್ಲಿ ಇದ್ದಾರೆ. ಪೆನ್ ಡ್ರೈವ್ ಪ್ರಕರಣವು ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರಜ್ವಲ್ ರೇವಣ್ಣನ ಕಾಮಕಾಂಡವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಮೂಲಕ ಕ್ಲೀನ್ ಚಿಟ್ ತೆಗೆದುಕೊಂಡು, ಬಿಜೆಪಿಯಿಂದ ಪರಿಶುದ್ಧತೆಯ ಸರ್ಟಿಫಿಕೇಟ್ ಪಡೆದುಕೊಳ್ಳುವ ಯೋಜನೆ ಇದರ ಹಿಂದಿದೆ ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ

ಸದ್ಯಕ್ಕೆ ನಡೆಯುತ್ತಿರುವ ಎಸ್’ಐಟಿ ತನಿಖೆ ಬಗ್ಗೆ ಓರ್ವ ಸಚಿವನಾಗಿ ನಾನು ಏನನ್ನೂ ಮಾತನಾಡಲು ಬಯಸುವುದಿಲ್ಲ. ಎಸ್’ಐಟಿ ತನ್ನ‌ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

<

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News