ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್, ತೂಕ ಇಳಿಕೆ ಎಲ್ಲದಕ್ಕೂ ಒಂದೇ ರಾಮಬಾಣ ಈ ಪೇಯ!

Celery Water Health Benefits: ಆಹಾರದ ರುಚಿಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಶರೀರವನ್ನು ಕಾಪಾಡಿಕೊಳ್ಳಲು ಅಜ್ವೈನ್ ಬಳಸಲಾಗುತ್ತದೆ. ಇದರ ನೀರನ್ನು ಕುಡಿಯುವುದರಿಂದ ದೇಹದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.  

Written by - Nitin Tabib | Last Updated : Sep 15, 2023, 08:44 PM IST
  • ತಜ್ಞರ ಪ್ರಕಾರ, ಅಜ್ವೈನ್ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದಕ್ಕಾಗಿ ಅಜ್ವೈನ್ ಅನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
  • ಬೆಳಗ್ಗೆ ಎದ್ದ ತಕ್ಷಣ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ನೀರನ್ನು ನಿಯಮಿತವಾಗಿ ಕುಡಿದರೆ ಆರೋಗ್ಯದ ಪ್ರಯೋಜನಗಳನ್ನು ನೀಡುವುದು ಖಚಿತ.
  • ಏಕೆಂದರೆ ಕ್ಯಾಲ್ಸಿಯಂ, ಫೈಬರ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಅಜ್ವೈನ್ ನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ,
  • ಇದು ವೇಗವಾಗಿ ತೂಕವನ್ನು ಇಳಿಕೆ ಮಾಡಲು ಕೂಡ ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ದೇಹದಿಂದ ಹೊರಹಾಕುತ್ತದೆ.
ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್, ತೂಕ ಇಳಿಕೆ ಎಲ್ಲದಕ್ಕೂ ಒಂದೇ ರಾಮಬಾಣ ಈ ಪೇಯ! title=

ಬೆಂಗಳೂರು: ಅಡುಗೆಮನೆಯ ಮಸಾಲೆಗಳಲ್ಲಿ ಶಾಮಿಲಾಗಿರುವ ಅಜ್ವೈನ್ ಅನ್ನು ಹಲವು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದರ ಸಣ್ಣ ಬೀಜಗಳನ್ನು ಆಹಾರ ಪದಾರ್ಥಗಳಿಗೆ ಬೇರೆಸಲಾಗುತ್ತದೆ. ಇದು ಉತ್ತಮ ರುಚಿ ಮತ್ತು ಸ್ವಾದದ ಜೊತೆಗೆ, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅಜ್ವೈನ್ ತಿನ್ನಲು ಇಷ್ಟಪಡದಿದ್ದರೆ, ಅದರ ನೀರನ್ನು ಕುಡಿದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅಜ್ವೈನ್ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹೃದಯವನ್ನು ಕಾಯಿಲೆಗಳಿಂದ ದೂರವಿಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಂಗ್ಲ ಭಾಷೆಯಲ್ಲಿ ಇದನ್ನು ಸೆಲರಿ ಎಂದು ಕರೆಯುತ್ತಾರೆ. ಅಜ್ವೈನ್ ನಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿವೆ. ಅವುಗಳ ನೀರನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಅಜ್ವೈನ್ ನೀರನ್ನು ತಯಾರಿಸುವ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ, 

ತಜ್ಞರ ಪ್ರಕಾರ, ಅಜ್ವೈನ್ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದಕ್ಕಾಗಿ ಅಜ್ವೈನ್ ಅನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ನೀರನ್ನು ನಿಯಮಿತವಾಗಿ ಕುಡಿದರೆ ಆರೋಗ್ಯದ ಪ್ರಯೋಜನಗಳನ್ನು ನೀಡುವುದು ಖಚಿತ. ಏಕೆಂದರೆ ಕ್ಯಾಲ್ಸಿಯಂ, ಫೈಬರ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಅಜ್ವೈನ್ ನಲ್ಲಿ  ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ವೇಗವಾಗಿ ತೂಕವನ್ನು ಇಳಿಕೆ ಮಾಡಲು ಕೂಡ ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ದೇಹದಿಂದ ಹೊರಹಾಕುತ್ತದೆ.

ಅಜ್ವೈನ್ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಸೆಲರಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಬಳಪಡಿಸುತ್ತದೆ. ಅಜ್ವೈನ್ ನಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಕಂಡುಬರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಸೆಲರಿ ನೀರನ್ನು ಕುಡಿಯುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳಿಂದ ತ್ವರಿತ ಮುಕ್ತಿ ಸಿಗುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
ಸೆಲರಿ ನೀರು ಮಧುಮೇಹ ರೋಗಿಗಳಿಗೆ ಔಷಧಕ್ಕಿಂತ ಕಡಿಮೆಯಿಲ್ಲ. ಇದರ ನೀರು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇವುಗಳಲ್ಲಿರುವ ಫೈಬರ್‌ಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. ಉಪವಾಸದ ಸಂದರ್ಭದಲ್ಲಿಯೂ ಕೂಡ ಇದು ಸಕ್ಕರೆಯನ್ನು ಸೀಮಿತಗೊಳಿಸುತ್ತದೆ. ಸೆಲರಿ ನೀರನ್ನು ನಿಯಮಿತವಾಗಿ ಸೇವಿಸುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ತೂಕ ಇಳಿಕೆಗೆ ಪ್ರಯೋಜನಕಾರಿ
ಬೆಳಗ್ಗೆ ಅಜ್ವೈನ್ ನೀರನ್ನು ಕುಡಿಯುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯನ್ನು ಸುಡುವುದರ ಜೊತೆಗೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೆಲರಿ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕೊಳೆ ಶುದ್ಧವಾಗುವುದಲ್ಲದೆ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಸೆಲರಿ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Taming Blood Sugar: ದಿನಕ್ಕೇರಡು ಬಾರಿ ಈ ಹಣ್ಣಿನ ಚಹಾ ಸೇವಿಸಿದರೆ ನಿಯಂತ್ರಣದಲ್ಲಿರುತ್ತೆ ಮಧುಮೇಹ, ಹೀಗೆ ತಯಾರಿಸಿ!

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸೆಲರಿಯಲ್ಲಿ ಕಂಡುಬರುತ್ತವೆ. ಇದರ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಸೆಲರಿ ನೀರು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ-ಮಧುಮೇಹ ಕಾಯಿಲೆಯ ಶತ್ರು ಈ ಹಸಿರು ತರಕಾರಿ, ಸೇವಿಸುತ್ತಲೇ ನಿಯಂತ್ರಣಕ್ಕೆ ಬರುತ್ತೆ, ಡ್ಯೆಬಿಟೀಸ್!

ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕುತ್ತದೆ
ಆಹಾರದ ಫೈಬರ್ ಮತ್ತು ಕೊಬ್ಬಿನಾಮ್ಲಗಳು ಸೆಲರಿಯಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ. ಸೆಲರಿ ನೀರನ್ನು ಕುಡಿಯುವುದರಿಂದ ರಕ್ತನಾಳಗಳು ಶುದ್ಧವಾಗುತ್ತವೆ. ಇದು ಅಡೆತಡೆಗಳನ್ನು ತೆಗೆದುಹಾಕುತ್ತದೆ. ಇದು ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News