ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಖತರ್ನಾಕ್ ಜೋಡಿಯ ಎಂಟ್ರಿ.!

Bigg Boss wild card entry : ಬಿಗ್ ಬಾಸ್ ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ. ಬಿಗ್‌ ಬಾಸ್‌ ಮನೆಗೆ ಇದೀಗ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.

Written by - Chetana Devarmani | Last Updated : Nov 23, 2023, 11:53 PM IST
  • ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ
  • ಬಿಗ್‌ ಬಾಸ್‌ ಮನೆಗೆ ಇದೀಗ ವೈಲ್ಡ್ ಕಾರ್ಡ್ ಎಂಟ್ರಿ
  • ಖತರ್ನಾಕ್ ಜೋಡಿಯ ಆಗಮನ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಖತರ್ನಾಕ್ ಜೋಡಿಯ ಎಂಟ್ರಿ.! title=
Bigg Boss

Bigg Boss wild card entry Rakhi Sawant : ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್‌ ಖಾನ್‌ ನಡೆಸಿಕೊಡುವ ಬಿಗ್‌ ಬಾಸ್‌ 17 ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ. ರಾಖಿ ಸಾವಂತ್ ಅವರು ತಮ್ಮ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿಯೊಂದಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : BBK 10: ನೊಂದು ಬೆಂದವರ ಗುಂಪಿಗೆ ನಾಯಕರಾದ ಕಾರ್ತಿಕ್‌ ಮಹೇಶ್!‌

ವರದಿಗಳ ಪ್ರಕಾರ, ಬಿಗ್‌ ಬಾಸ್‌ ಹಿಂದಿ ಸೀಸನ್‌ 17 ರ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನಡೆಯಲಿದೆ. ಇದು ಆಟಕ್ಕೆ ಹೊಸ ತಿರುವು ನೀಡಲಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಿತ ಮುಖವಾಗಿರುವ ರಾಖಿ ಸಾವಂತ್ ವಿವಾದಗಳಿಂಲೇ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಿಗ್ ಬಾಸ್ 1, 14 ಮತ್ತು 15 ರಲ್ಲಿ ಭಾಗವಹಿಸಿದ ರಾಖಿ ಸಾವಂತ್‌ ತನ್ನ ಬೋಲ್ಡ್ ವ್ಯಕ್ತಿತ್ವದಿಂದ ನಿರಂತರವಾಗಿ‌ ವೀಕ್ಷಕರ ಗಮನ ಸೆಳೆದವರು.

Rakhi Sawant

ಆದರೆ ಈ ಬಾರಿ ರಾಖಿಯೊಂದಿಗೆ ಅವರ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿ ಸಹ ಬಿಗ್‌ ಬಾಸ್‌ ಶೋಗೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಒಟ್ಟಿಗೆ ಬಿಗ್‌ ಬಾಸ್‌ ಶೋಗೆ ಪ್ರವೇಶಿಸುವ ನಿರೀಕ್ಷೆಯಿದೆ ಎನ್ನಲಾಗ್ತಿದೆ. 

ಇದನ್ನೂ ಓದಿ : Alia Bhatt: ಫಸ್ಟ್ ಲವ್ ಎಂದಿಗೂ ಮರೆಯಲ್ಲ ಎಂದ ಆಲಿಯಾ ಭಟ್‌.. ಇವರೇ ಮೊದಲ ಪ್ರಿಯಕರ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News