IPL Play Off: IPL 2023 ರಲ್ಲಿ 2 ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಪ್ಲೇಆಫ್ನಿಂದ ತೆಗೆದುಹಾಕಬಹುದು ಅಥವಾ ಆ ತಂಡಗಳಿಗೆ ಎಂಟ್ರಿಯೇ ಸಿಗದಂತೆ ಮಾಡಬಹುದು. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆಯಬೇಕಾದರೆ, ಕೊನೆಯ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಐಪಿಎಲ್ 2023 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪ್ರಸ್ತುತ 13 ಪಂದ್ಯಗಳಿಂದ 15 ಅಂಕಗಳನ್ನು ಪಡೆದಿದೆ. ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 14 ಅಂಕಗಳನ್ನು ಪಡೆದಿದೆ.
Nitish Rana: ನಿತೀಶ್ ರಾಣಾ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ ನಡೆಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಅಂಪೈರ್ ಜೊತೆ ಜಗಳವಾಡಲು ಹೋಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ನ 19 ನೇ ಓವರ್ ನಲ್ಲಿ ನಡೆದ ಗೊಂದಲದಿಂದ ಈ ಘಟನೆ ಎದುರಾಗಿದ್ದು, ನಿತೀಶ್ ರಾಣಾ ಮತ್ತು ಅಂಪೈರ್ ನಡುವೆ ವಾಗ್ವಾದ ನಡೆದಿದೆ.
IPL 2023, MS Dhoni Video: ಚೆನ್ನೈ ಸೂಪರ್ ಕಿಂಗ್ಸ್ ಇನಿಂಗ್ಸ್ ನ 19ನೇ ಓವರ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅಬ್ಬರದ ಬ್ಯಾಟಿಂಗ್ ನೋಡಿ ಕ್ರಿಕೆಟ್ ಜಗತ್ತು ಅಚ್ಚರಿ ಮೂಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಖಲೀಲ್ ಅಹ್ಮದ್ ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ನ 19 ನೇ ಓವರ್ ಬೌಲ್ ಮಾಡಲು ಬಂದರು.
IPL 2023 News, MS Dhoni: ಮಹೇಂದ್ರ ಸಿಂಗ್ ಧೋನಿ, “ಈ ಪಿಚ್ನಲ್ಲಿ ಕೆಲವು ಶಾಟ್ ಗಳನ್ನು ಆಡಬಾರದಿತ್ತು. ಮೊಯಿನ್ ಮತ್ತು ಜಡೇಜಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಒಳ್ಳೆಯ ಸಂಗತಿ. ಎಲ್ಲರೂ ಬ್ಯಾಟಿಂಗ್ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವು ಬೌಂಡರಿ ಮತ್ತು ಸಿಕ್ಸರ್ ಗಳನ್ನು ಹೊಡೆಯುವುದು ನನ್ನ ಕೆಲಸ ಎಂದು ಹೇಳಿದ್ದಾರೆ.
IPL 2023, CSK vs DC Today Match: ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ನಂತರ ಚೆನ್ನೈ ಗೆಲುವಿನ ಹಾದಿಗೆ ಮರಳಿದೆ. ಪಂದ್ಯಾವಳಿಯ ಆರಂಭಿಕ ಹಂತದಿಂದಲೇ ಹೆಣಗಾಡುತ್ತಿರುವ ಡೆಲ್ಲಿಯನ್ನು ಸೋಲಿಸಿ ಮತ್ತೆ ಪ್ಲೇ ಆಫ ಹಂತಕ್ಕೆ ಪ್ರವೇಶಿಸುವ ಎಲ್ಲಾ ಯೋಜನೆಯನ್ನು ಚೆನ್ನೈ ಮಾಡುತ್ತಿದೆ.
CSK vs MI IPL 2023: ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್ ನಲ್ಲಿ ಅಂತಿಮವಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 2023 ರ 49 ನೇ ಪಂದ್ಯದಲ್ಲಿ ದೀಪಕ್ ಚಹಾರ್ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಅವರು 18 ರನ್ ನೀಡಿ 2 ವಿಕೆಟ್ ಪಡೆದರು. ಇದಕ್ಕೂ ಮೊದಲು, ಐಪಿಎಲ್ 2021 ರ ಫೈನಲ್ ನಲ್ಲಿ ದೀಪಕ್ ಚಹಾರ್ ಒಂದು ವಿಕೆಟ್ ಪಡೆದಿದ್ದರು.
ಇಲ್ಲಿನ ಸವಾಯಿ ಮಾನ್ಯಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವು 32 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
RR vs CSK Playing 11: ಸತತ 3 ಗೆಲುವುಗಳು ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ವರವಾಗಿ ಕಾಣಿಸಿಕೊಂಡಿದೆ. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್’ನಲ್ಲಿ ಹಿಡಿತ ಸಾಧಿಸಿರುವ ಚೆನ್ನೈ ಇಂದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಸತತ ಎರಡು ಪಂದ್ಯಗಳಲ್ಲಿನ ಸೋಲಿನೊಂದಿಗೆ, ರಾಜಸ್ಥಾನವು ತಮ್ಮ ತಂಡದ ಅಭಿಯಾನವನ್ನು ಮರಳಿ ಟ್ರ್ಯಾಕ್ ಗೆ ತರಲು ಕಾಯುತ್ತಿದೆ.
IPL Cricketer: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಈ ಕ್ರಿಕೆಟಿಗ ಒಂದು ಕಾಲದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನೆಚ್ಚಿನ ಬೌಲರ್ ಜೊತೆಗೆ ಮ್ಯಾಚ್ ವಿನ್ನರ್ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ಅವರು ಇಂದು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ
Shivam Dubey: ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟಿಂಗ್ ಶೈಲಿಯಲ್ಲಿ ಸ್ವಲ್ಪಮಟ್ಟಿಗೆ ಯುವರಾಜ್ ಸಿಂಗ್ ಅವರಂತೆಯೇ ಇರುವ ಬ್ಯಾಟ್ಸ್ಮನ್ ಒಬ್ಬನಿದ್ದಾನೆ. ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಈ ಬ್ಯಾಟ್ಸ್ಮನ್ ಎಲ್ಲರನ್ನೂ ಶಾಕ್’ಗೆ ಒಳಗಾಗುವಂತೆ ಮಾಡಿದ್ದು ಸುಳ್ಳಲ್ಲ.
ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
IPL 2023, CSK vs SRH: ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇಯಿಂಗ್ XI ನಲ್ಲಿ ಓರ್ವ ಅತ್ಯಂತ ಅಪಾಯಕಾರಿ ಆಟಗಾರ ಸ್ಥಾನ ಪಡೆಯಲಿದ್ದಾನೆ ಎಂದು ತಿಳಿದುಬಂದಿದೆ. ಬೆನ್ ಸ್ಟೋಕ್ಸ್ ಕಾಲಿನ ಗಾಯದಿಂದಾಗಿ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು, ಆದರೆ ಇದೀಗ ಅವರು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಾಗಿರುವುದು ಚೆನ್ನೈಗೆ ಸಮಾಧಾನ ತಂದಿದೆ.
Virat Kohli Hugs MS Dhoni: ಆರ್ ಸಿ ಬಿ ಮತ್ತು ಸಿ ಎಸ್ ಕೆ ನಡುವಿನ ಬ್ಲಾಕ್ ಬಸ್ಟರ್ ಹಣಾಹಣಿಗೂ ಮುನ್ನ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ತರಬೇತಿ ಅವಧಿಯಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. 2011ರ ವಿಶ್ವಕಪ್ ಗೆದ್ದ ಭಾರತದ ಮಾಜಿ ನಾಯಕನನ್ನು ಸ್ಟಾರ್ ಬ್ಯಾಟರ್ ಕೊಹ್ಲಿ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ.
RCB vs CSK Playing 11 Prediction: ಇಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಿಚ್ ಬ್ಯಾಟರ್’ಗಳಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ. ಆಡಿದ ನಾಲ್ಕೂ ಪಂದ್ಯಗಳಲ್ಲಿ ತಂಡಗಳು 170ರ ಗಡಿ ದಾಟಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು (CSK vs RCB) ನಡುವಿನ ಪಂದ್ಯದಲ್ಲಿ ಹೆಚ್ಚಿನ ಸ್ಕೋರಿಂಗ್ ಕಲೆ ಹಾಕುವ ಸಾಧ್ಯತೆ ಇದೆ.
Ben Stokes Injury Update: ಚೆನ್ನೈ ತಂಡ ಐಪಿಎಲ್-2023ರಲ್ಲಿ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿದ್ದರೆ ಎರಡು ಪಂದ್ಯಗಳು ಸೋತಿವೆ. ಚೆನ್ನೈ ತನ್ನ ತವರು ನೆಲ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿತ್ತು. ಈಗ ತಂಡವು ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 17 ರಂದು ಆಡಬೇಕಾಗಿದೆ.
Indian Premier League, CSK Team: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK), ಈ ಋತುವಿನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದರೆ ಎರಡರಲ್ಲಿ ಸೋತಿದೆ. ಈ ತಂಡದ ಆಟಗಾರನೊಬ್ಬ ತನ್ನ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾನೆ.
R Ashwin allegation against umpire: ಬುಧವಾರ ರಾತ್ರಿ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಸಾಕಷ್ಟು ಇಬ್ಬನಿ ಬಿದ್ದಿದ್ದು, ಈ ಕಾರಣದಿಂದ ಸ್ವತಃ ಅಂಪೈರ್’ಗಳೇ ಎರಡನೇ ಇನ್ನಿಂಗ್ಸ್ನಲ್ಲಿ ಚೆಂಡನ್ನು ಬದಲಾಯಿಸಿದ್ದು ಅಶ್ವಿನ್’ಗೆ ಅಚ್ಚರಿ ಮೂಡಿಸಿದೆ. ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ 25 ರನ್ಗಳಿಗೆ ಎರಡು ವಿಕೆಟ್ ಪಡೆದರು. ಈ ಪಂದ್ಯವನ್ನು ರಾಜಸ್ಥಾನ ಮೂರು ರನ್ಗಳಿಂದ ಗೆದ್ದುಕೊಂಡಿತು
Chennai Super Kings, IPL 2023: ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯ ಏಪ್ರಿಲ್ 12 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿದೆ. ತಂಡದ ಇಬ್ಬರು ಆಟಗಾರರು ಗಾಯದ ಕಾರಣ ಮುಂದಿನ ಪಂದ್ಯದಲ್ಲಿ ಆಡುವುದು ಕಷ್ಟ ಎಂದು ಹೇಳಲಾಗುತ್ತಿದೆ.
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ನ 16 ನೇ ಸೀಸನ್ ನ ಉದ್ಘಾಟನಾ ಸಮಾರಂಭವು ಸಾಕಷ್ಟು ಅಬ್ಬರದಿಂದ ಕೂಡಿತ್ತು ಎನ್ನಬಹುದು. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೋಲು ಕಂಡಿದೆ. ಇದೀಗ ಈ ಸೋಲಿಗೆ ಕನ್ನಡ ಖ್ಯಾತ ನಟಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.