Garuda Purana: ಸ್ವರ್ಗ ಮತ್ತು ನರಕದ ಜನರನ್ನು ಹೇಗೆ ಗುರುತಿಸುವುದು ಗೊತ್ತೆ..?

ಗರುಡ ಪುರಾಣ ಬೋಧನೆ: ಗರುಡ ಪುರಾಣವು ಜನನ ಮತ್ತು ಮರಣದ ನಂತರ ಸಂಭವಿಸುವ ಘಟನೆಗಳ ಬಗ್ಗೆ ಹೇಳುತ್ತದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು ಯಾವ ವ್ಯಕ್ತಿಯು ಸ್ವರ್ಗದಿಂದ ಬಂದನು ಮತ್ತು ಯಾರು ನರಕದಿಂದ ಬಂದನು ಎಂಬುದನ್ನು ಅವನ ಸ್ವಭಾವದಿಂದ ನಿರ್ಧರಿಸಬಹುದು ಎಂದು ಹೇಳಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Jan 11, 2024, 10:10 PM IST
  • ಗರುಡ ಪುರಾಣವನ್ನು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಪ್ರಮುಖ ಗ್ರಂಥವೆಂದು ಪರಿಗಣಿಸಲಾಗಿದೆ
  • ಇದರಲ್ಲಿ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗಿನ ಜೀವನವನ್ನು ವಿವರವಾಗಿ ಉಲ್ಲೇಖಿಸಲಾಗಿದೆ
  • ಮನುಷ್ಯ ರೂಪ ಪಡೆದ ವ್ಯಕ್ತಿ ಮೋಕ್ಷ ಪಡೆಯಲು ಏನು ಮಾಡಬೇಕೆಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ
Garuda Purana: ಸ್ವರ್ಗ ಮತ್ತು ನರಕದ ಜನರನ್ನು ಹೇಗೆ ಗುರುತಿಸುವುದು ಗೊತ್ತೆ..?   title=
ಗರುಡ ಪುರಾಣ ಬೋಧನೆ

ಗರುಡ ಪುರಾಣ ಬೋಧನೆ: ಗರುಡ ಪುರಾಣವನ್ನು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಪ್ರಮುಖ ಗ್ರಂಥವೆಂದು ಪರಿಗಣಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗಿನ ಜೀವನವನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ಮರಣದ ನಂತರ ವ್ಯಕ್ತಿಯು ಸ್ವರ್ಗ ಅಥವಾ ನರಕಕ್ಕೆ ಹೋಗಬೇಕಾಗುತ್ತದೆ ಎಂದು ಸಹ ಉಲ್ಲೇಖಿಸುತ್ತದೆ. ಮನುಷ್ಯ ರೂಪ ಪಡೆದವನು ಮೋಕ್ಷವನ್ನು ಪಡೆಯಲು ಏನು ಮಾಡಬೇಕು ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.

ಧರ್ಮಗ್ರಂಥಗಳ ಪ್ರಕಾರ, ಗುರುಡ ಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಭಗವಾನ್ ವಿಷ್ಣುವು ತನ್ನ ವಾಹನವಾದ ಗರುಡನಿಗೆ ಹೇಳುತ್ತಾನೆ. ಮನುಷ್ಯನು ತನ್ನ ಜೀವನವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಮತ್ತು ಮೋಕ್ಷವನ್ನು ಪಡೆಯಬಹುದು ಎಂಬುದನ್ನು ಇದು ಹೇಳುತ್ತದೆ. ಅಷ್ಟೇ ಅಲ್ಲ, ಗರುಡ ಪುರಾಣವು ಒಬ್ಬ ವ್ಯಕ್ತಿಯನ್ನು ಗುರುತಿಸುವ ಬಗ್ಗೆಯೂ ಹೇಳುತ್ತದೆ. ಯಾವ ವ್ಯಕ್ತಿ ಸ್ವರ್ಗದಿಂದ ಬಂದಿದ್ದಾನೆ ಮತ್ತು ಯಾವ ವ್ಯಕ್ತಿಯು ನರಕದ ಹಿಂಸೆಯನ್ನು ಸಹಿಸಿಕೊಂಡಿದ್ದಾನೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

ಇದನ್ನೂ ಓದಿ: ಧೂಮಪಾನ ಮಾಡುವ ಸ್ಥಳಗಳಲ್ಲಿ ನೀವು ನಿಲ್ಲುತ್ತೀರಾ..? ಹಾಗಾದರೆ ಈ ಸ್ಟೋರಿ ನೋಡಿ...

ನರಕದಿಂದ ಬಂದ ಜನರ ಸ್ವಭಾವ ಹೀಗಿರುತ್ತದೆ:

ಇತರರನ್ನು ಟೀಕಿಸುವವರು, ಇತರರನ್ನು ಹಿಂಸಿಸುವವರು, ಇತರ ಜನರೊಂದಿಗೆ ಕಠೋರವಾಗಿ ವರ್ತಿಸುವವರು.. ಇಂತಹ ಜನರು ನರಕದಿಂದ ಬಂದವರು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಹೊಡೆದಾಡುವ, ಪರರ ಸಂಪತ್ತು, ಆಸ್ತಿ ಕಿತ್ತುಕೊಳ್ಳುವರು, ಮದ್ಯವನ್ನು ಸೇವಿಸುವವರು, ಇತರ ಜನರೊಂದಿಗೆ ಕೆಟ್ಟದಾಗಿ ವರ್ತಿಸುವವರು.. ಇಂತಹ ಜನರು ನರಕಯಾತನೆಗಳನ್ನು ಅನುಭವಿಸಿದ ನಂತರ ಮಾನವ ರೂಪದಲ್ಲಿ ಹುಟ್ಟುತ್ತಾರೆಂದು ಹೇಳಲಾಗಿದೆ.

ಸ್ವರ್ಗದಿಂದ ಬಂದ ವ್ಯಕ್ತಿಯನ್ನು ಗುರುತಿಸುವುದು ಹೀಗೆ:

ಗರುಡ ಪುರಾಣದ ಪ್ರಕಾರ, ಸದ್ಗುಣವನ್ನು ಹೊಂದಿರುವ ಜನರು ಇತರ ಜೀವಿಗಳನ್ನು ಪ್ರೀತಿಸುತ್ತಾರೆ. ಇತರರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ, ಸತ್ಯದ ಮಾರ್ಗವನ್ನು ಅನುಸರಿಸಿ, ಯಾವಾಗಲೂ ಇತರರ ಕಲ್ಯಾಣದ ಬಗ್ಗೆ ಯೋಚಿಸುವವರು. ಅಷ್ಟೇ ಅಲ್ಲ ಗುರುಗಳ ಆದೇಶ ಪಾಲಿಸುವವರು, ವೇದಾಧ್ಯಯನ ಮಾಡುವವರು ಇತ್ಯಾದಿ ಜನರು ಸ್ವರ್ಗದಿಂದ ಬಂದವರು. ಗರುಡ ಪುರಾಣದಲ್ಲಿ ಇಂತಹವರನ್ನು ಮಹಾಪುರುಷರೆಂದು ಕರೆಯಲಾಗಿದೆ.

ಇದನ್ನೂ ಓದಿ: Makar Sankranti 2024: ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಮಕರ ಸಂಕ್ರಾಂತಿ ಆಚರಣೆ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News