Lakshmi nivasa serial: ಲಕ್ಷ್ಮೀ ನಿವಾಸ ಸೈಕೋ ಕ್ಯಾರೆಕ್ಟರ್‌ ಜಯಂತ್ ರಿಯಲ್ ಲೈಫ್ ಕಥೆ ಕೇಳಿದ್ರೆ ಶಾಕ್ ಆಗ್ತೀರಾ..! ಈತ ಬರೀ ನಟನಲ್ಲ!!

Lakshmi nivasa Kannada serial Jayanth: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಕಷ್ಟು ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. 

1 /5

ಜನಪ್ರಿಯ ಧಾರವಾಹಿ ಲಕ್ಷ್ಮೀ ನಿವಾಸದಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಿ ವಿಭಿನ್ನವಾಗಿ ಮೂಡಿ ಬರುವಂತೆ ಮಾಡಲಾಗಿದೆ.. ಈ ಸಿರೀಯಲ್‌ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ..   

2 /5

ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ಇತ್ತೀಚೆಗೆ ಗಮನ ಸೆಳೆದಿರುವ ಕ್ಯಾರೆಕ್ಟರ್‌ ಎಂದರೇ ಅದು ಜಯಂತ್..‌ ಸೈಕೋ ಜಯಂತ್‌ ಎಂದೇ ಫೇಮಸ್‌ ಆಗುತ್ತಿರುವ ಈ ಪಾತ್ರವನ್ನು ನೋಡಿ ಪ್ರೇಕ್ಷಕರು ಕಂಗಾಲಾಗಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ದೊಡ್ಡ ಚರ್ಚೆ ಶುರುವಾಗಿದೆ..   

3 /5

ಹೌದು ಜಾಹ್ನವಿಯನ್ನು ಮದುವೆಯಾಗಿ ಅತೀಯಾಗಿ ಪ್ರೀತಿ ತೋರಿಸುವ ಭರದಲ್ಲಿ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಕಾರಣವಾದ ಜಯಂತ್ ಪಾತ್ರ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ ಎಂದರೇ ತಪ್ಪಾಗುವುದಿಲ್ಲ.. ಹಾಗಾದ್ರೆ ಈ ಪಾತ್ರದಲ್ಲಿ ಮಿಂಚುತ್ತಿರುವ ಪಾತ್ರಧಾರಿಯ ರಿಯಲ್‌ ಲೈಪ್‌ ಹೇಗಿದೆ? ಅವರು ನಿಜಕ್ಕೂ ಯಾರು ಎನ್ನುವುದನ್ನು ಇದೀಗ ತಿಳಿಯೋಣ..   

4 /5

ಜಯಂತ್‌ ಪಾತ್ರಧಾರಿಯ ನಿಜವಾದ ಹೆಸರು ದೀಪಕ್‌ ಸುಬ್ರಮಣ್ಯ.. ಧಾರವಾಹಿಯಲ್ಲಿ ಸಣ್ಣ ಪಾತ್ರದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಇವರು ಈ ಹಿಂದೆ ದಾಸ ಪುರಂದರ ಸಿರೀಯಲ್‌ನಲ್ಲಿ ಕಾಣಿಸಿಕೊಂಡಿದ್ದರು..   

5 /5

ಇವರು ಈಗಾಗಲೇ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.. ಅಷ್ಟೇ ಅಲ್ಲ ಈ ಶಿಕ್ಷಣದಲ್ಲಿಯೂ ಮುಂದಿದ್ದು electronic communication engineering ಓದಿದ್ದಾರೆ.. ಸಾಕಷ್ಟು ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ತಮ್ಮದೇ ಆದ ಪ್ರೊಡಕ್ಷನ್‌ ಹೌಸ್‌ವೊಂದನ್ನು ಆರಂಭಿಸಿದ್ದಾರೆ.