Health Tips: ಮಕ್ಕಳ ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿ ರಾಮಬಾಣ

Tulsi Health Benefits: ತುಳಸಿ ಮಕ್ಕಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ. ನಿಯಮಿತವಾಗಿ ತುಳಸಿಯನ್ನು ಮಕ್ಕಳಿಗೆ ನೀಡುತ್ತಾ ಬಂದರೆ ಹಲವಾರು ರೋಗಗಳಿಂದ ಮುಕ್ತಿ ಪಡೆಯಹುದು.

Tulsi Health Benefits: ಇಂದು ಮಕ್ಕಳು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಿಗೆ ಕೆಮ್ಮು, ನೆಗಡಿ, ಅಸ್ತಮಾ, ಜ್ವರ, ಕಿವಿ ನೋವು ಸೇರಿದಂತೆ ಹಲವಾರು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಮಕ್ಕಳ ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುಳಸಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /5

ಮಕ್ಕಳಿಗೆ ಕಿವಿ ಸೋರುತ್ತಿದ್ದರೆ ತುಳಸಿ ಮತ್ತು ಬೇವಿನ ಎಲೆಯ ರಸದಲ್ಲಿ ಜೇನುತುಪ್ಪ ಸೇರಿಸಿ ಕಿವಿಯಲ್ಲಿ ಹಾಕಬೇಕು. ತುಳಸಿ ಎಲೆಗಳನ್ನು ತುಸು ಬೆಚ್ಚಗೆ ಮಾಡಿ ಮಕ್ಕಳ ಕಿವಿಗೆ ಹಾಕುವುದರಿಂದ ಕಿವಿನೋವು ಶಾಂತವಾಗುತ್ತದೆ.

2 /5

ತುಳಸಿಯ ಹೂವನ್ನು ಹಸಿಶುಂಠಿಯ ರಸದಲ್ಲಿ ಅರೆದು ನೆಕ್ಕುತ್ತಾ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ನಿತ್ಯವೂ ಮಕ್ಕಳಿಗೆ ತುಳಸಿ ರಸ ನೀಡುತ್ತಿದ್ರೆ ಜ್ವರ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

3 /5

ಮಕ್ಕಳಿಗೆ ಕಫ-ಕೆಮ್ಮು ಇದ್ದರೆ 1 ಚಮಚ ತುಳಸಿ ರಸವನ್ನು 2-3 ಸಲ ನೀಡಬೇಕು. ಮಕ್ಕಳು ಶೀತದ ತೊಂದರೆ ಅನುಭವಿಸುತ್ತಿದ್ದರೆ ನಿತ್ಯ ಒಂದೆರಡು ತುಳಸಿ ಎಲೆ ಸೇವಿಸಿದ್ರೆ ಕಡಿಮೆಯಾಗುತ್ತದೆ.

4 /5

ತುಳಸಿಯ ರಸವನ್ನು ಜೇನುತುಪ್ಪ ಸೇರಿಸಿ ಮಕ್ಕಳಲ್ಲಿ ಸೇವಿಸಲು ನೀಡಿದ್ರೆ ವಾಂತಿ ತೊಂದರೆ ನಿವಾರಣೆಯಾಗುತ್ತದೆ. ತುಳಸಿಬೀಜವನ್ನು ಅರೆದು ಹಾಲಿನಲ್ಲಿ ಸೇರಿಸಿ ಮಕ್ಕಳಿಗೆ ನೀಡಿದರೆ ವಾಂತಿ ತೊಂದರೆ ಬರುವುದಿಲ್ಲ.

5 /5

ಮಕ್ಕಳಿಗೆ ಅಸ್ತಮಾ ರೋಗದ ತೊಂದರೆ ಇದ್ದರೆ ತುಳಸಿ ಹಾಗೂ ಹಸಿ ಶುಂಠಿಯ ರಸ ನೀಡಬೇಕು. ಹಾಲಿನಲ್ಲಿ 5 ತುಳಸಿ ಎಲೆ ಮತ್ತು ಲವಂಗ ಹಾಕಿ ಬಿಸಿ ಮಾಡಿ ಮಕ್ಕಳಿಗೆ ಕೊಡುವುದರಿಂದ ಜ್ವರ ನಿಲ್ಲುತ್ತದೆ.