Garuda Purana: ವ್ಯಕ್ತಿಯ ಈ ಅಭ್ಯಾಸಗಳೇ ಬಡತನಕ್ಕೆ ಮೂಲ ಕಾರಣ

                                               

Garuda Purana For Wealth: ಗರುಡ ಪುರಾಣದಲ್ಲಿ ಜೀವನದ ಹಲವು ಅಂಶಗಳ ಬಗ್ಗೆ ವಿವರಿಸಲಾಗಿದೆ. ಅದರಲ್ಲಿ  ವ್ಯಕ್ತಿಯ ಅವನತಿಗೆ ಕಾರಣವಾದ ಕೆಲವು ಅಂಶಗಳ ಬಗ್ಗೆಯೂ ವಿವರಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಗರುಡ ಪುರಾಣದ ಪ್ರಕಾರ, ಯಾವುದೇ ವ್ಯಕ್ತಿಯ ಕೆಲವು ಅಭ್ಯಾಸಗಳೇ ಆತನ ಅವನತಿಗೆ ಬಹಳ ಮುಖ್ಯ ಕಾರಣಗಳಾಗಿದ್ದು, ಈ ದುರಭ್ಯಾಸಗಳನ್ನು ಬಿಡದೆ ಇದ್ದರೆ ಅವು ಆತನ ಬಡತನಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಅಂತಹ ಅಭ್ಯಾಸಗಳೆಂದರೆ...

2 /5

ಯಾವುದೇ ವಿಷಯದಲ್ಲೂ ಕೂಡ ದುರಾಸೆ ಒಳ್ಳೆಯದಲ್ಲ. ಗರುಡ ಪುರಾಣದ ಪ್ರಕಾರ, ದುರಾಸೆಯುಳ್ಳ ವ್ಯಕ್ತಿ, ಹಣ ಗಳಿಕೆಗಾಗಿ ಕೆಟ್ಟ ದಾರಿಯನ್ನು ಹಿಡಿರುವ ವ್ಯಕ್ತಿಯ ಬಳಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸುವುದಿಲ್ಲ. ಅವರ ಕೈಯಲ್ಲಿ ಎಂದಿಗೂ ಹಣ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

3 /5

ಜೀವನದಲ್ಲಿ ನಮ್ಮ ಬಳಿ ಏನೇ ಇದ್ದರೂ ಕೂಡ ಅದು ದೇವರ ಆಶೀರ್ವಾದದಿಂದ ಪ್ರಾಪ್ತಿಯಾಗಿರುತ್ತದೆ. ಆದರೆ, ವ್ಯಕ್ತಿ ತನ್ನ ಬಳಿ ಇರುವ ಸಂಪತ್ತಿನ ಅಹಂಕಾರದಿಂದ ಎಂದಿಗೂ ವರ್ತಿಸಬಾರದು. ಈ ರೀತಿಯ ಅಹಂಕಾರ ವ್ಯಕ್ತಿಯನ್ನು ಅವನತಿಯತ್ತ ಕೊಂಡೊಯ್ಯುತ್ತದೆ ಎನ್ನಲಾಗುತ್ತದೆ. 

4 /5

ಗರುಡ ಪುರಾಣದ ಪ್ರಕಾರ, ನಾವು ಯಾವುದೇ ವಿಚಾರದಲ್ಲಿ ಬಲಾಢ್ಯರಾಗಿದ್ದರೂ ಕೂಡ ಕೈಲಾಗದವರನ್ನು, ಶ್ರಮ ಜೀವಿಗಳನ್ನು ಎಂದಿಗೂ ಶೋಷಿಸಬಾರದು. ಬಡವರು ಮತ್ತು ನಿರ್ಗತಿಕರನ್ನು ಶೋಷಿಸಿ ಸಂಪಾದಿಸಿದ ಹಣ ಹೆಚ್ಚು ಸಮಯ ಉಳಿಯುವುದಿಲ್ಲ. 

5 /5

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯು ಎಂದಿಗೂ ಕೂಡ ಕೊಳಕನ್ನು ಸಹಿಸುವುದಿಲ್ಲ. ಕೊಳಕು, ಗಲೀಜು ಇರುವ ಜಾಗದಲ್ಲಿ ಕ್ಷಣ ಕಾಲವೂ ನಿಲ್ಲಲು ಬಯಸುವುದಿಲ್ಲ. ಹಾಗಾಗಿ, ಶುಚಿಯಾಗಿಲ್ಲದ, ಮನೆಯನ್ನು ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡದ ಮನೆಯಲ್ಲಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಇದು ವ್ಯಕ್ತಿಯ ಬಡತನಕ್ಕೆ ಕಾರಣವಾಗುತ್ತದೆ.  ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.