Watermelon: ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಈ Summer Superfruit ಭಾರತವನ್ನು ತಲುಪಿದ್ದು ಹೇಗೆ?

Summer Superfruit Watermelon: ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ.. 

Written by - Savita M B | Last Updated : Apr 29, 2024, 04:09 PM IST
  • ರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ವಿಪರೀತ ತಾಪಮಾನವಿದೆ..
  • ಬಿಸಿಲ ಬೇಗೆ ಹೆಚ್ಚಾದಂತೆ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದ್ದಾರೆ.
Watermelon: ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಈ Summer Superfruit ಭಾರತವನ್ನು ತಲುಪಿದ್ದು ಹೇಗೆ? title=

Watermelon:  ರಾಜಧಾನಿ ದೆಹಲಿ ಸೇರಿದಂತೆ ದೇಶದೆಲ್ಲೆಡೆ ವಿಪರೀತ ತಾಪಮಾನವಿದೆ.. ಬಿಸಿಲ ಬೇಗೆ ಹೆಚ್ಚಾದಂತೆ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಸಹ ಸೇವಿಸುತ್ತಿದ್ದಾರೆ. ಆದರೆ ಕಲ್ಲಂಗಡಿಯನ್ನು ಮೊದಲು ಎಲ್ಲಿ ಬೆಳೆಯಲಾಯಿತು ಎಂದು ನಿಮಗೆ ತಿಳಿದಿದೆಯೇ?  

ಬೇಸಿಗೆಯಲ್ಲಿ ಹೆಚ್ಚು ಜನರು ಕಲ್ಲಂಗಡಿ ತಿನ್ನಲು ಇಷ್ಟಪಡುತ್ತಾರೆ. ಕಲ್ಲಂಗಡಿಯಲ್ಲಿ ಬಹಳಷ್ಟು ನೀರಿನಂಶ ಇರುವುದರಿಂದ, ಇದನ್ನು ತಿನ್ನುವುದು ನಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಾಮಾಡುತ್ತದೆ.. ಅಲ್ಲದೇ ಅದರಲ್ಲಿ ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪು ಕಲ್ಲಂಗಡಿ ಹೊರತುಪಡಿಸಿ ಹಳದಿ ಕಲ್ಲಂಗಡಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ..

ಇದನ್ನೂ ಓದಿ-White Hair Remedy: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಈ ಒಂದು ಎಣ್ಣೆ ಬಳಸಿ ಸಾಕು, ಸಿಗುತ್ತವೆ ಹಲವು ಲಾಭಗಳು!

ಸಂಶೋಧನೆಯ ಪ್ರಕಾರ ಕಲ್ಲಂಗಡಿ ಹಣ್ಣನ್ನು ಮೊದಲು ಬೆಳೆದಿದ್ದು ಈಜಿಪ್ಟ್ ನಲ್ಲಿ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನ ಅಧ್ಯಯನವು ಕಲ್ಲಂಗಡಿ ಮೂಲದ ಕಥೆಯನ್ನು ವಿವರಿಸುತ್ತದೆ.. ವಿಜ್ಞಾನಿಗಳು ನೂರಾರು ಜಾತಿಯ ಕಲ್ಲಂಗಡಿಗಳ ಡಿಎನ್ಎ ಅಧ್ಯಯನ ಮಾಡಿದರು ಮತ್ತು ಈ ಹಣ್ಣುಗಳು ಈಶಾನ್ಯ ಆಫ್ರಿಕಾದ ಕಾಡು ಬೆಳೆಯಿಂದ ಬಂದವು ಎಂದು ಗುರುತಿಸಿದರು.. ಈ ಅಧ್ಯಯನದ ಮೊದಲು, ಕಲ್ಲಂಗಡಿಗಳು ದಕ್ಷಿಣ ಆಫ್ರಿಕಾದ ಸಿಟ್ರಾನ್ ಕಲ್ಲಂಗಡಿಗಳ ವರ್ಗದಲ್ಲಿ ಬಂದವು ಎಂದು ಹೇಳಲಾಗಿದೆ. 

ಇದನ್ನೂ ಓದಿ-ತಲೆದಿಂಬು ಇಲ್ಲದೆ ಮಲಗುವುದರಿಂದ ಇವೆ ಈ 4 ಪ್ರಯೋಜನಗಳು..!

ವಾಷಿಂಗ್ಟನ್ ಆರ್ಟ್ಸ್ ಅಂಡ್ ಸೈನ್ಸಸ್ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಪ್ರಾಧ್ಯಾಪಕರಾದ ಸುಝೇನ್ ಎಸ್. ರೆನ್ನರ್ ಪ್ರಕಾರ, ಡಿಎನ್ಎ ಆಧಾರದ ಮೇಲೆ, ಅಸ್ತಿತ್ವದಲ್ಲಿರುವ ಕೆಂಪು ಕಲ್ಲಂಗಡಿಗಳು ಪಶ್ಚಿಮ ಮತ್ತು ಈಶಾನ್ಯ ಆಫ್ರಿಕಾದ ಕಾಡು ಕರಬೂಜಗಳ ವರ್ಗವಾಗಿವೆ ಎಂದು ಗುರುತಿಸಿದ್ದಾರೆ.. 

ಕಲ್ಲಂಗಡಿ ಹೆಸರು ಹೇಳಿದಾಗ ಮೊದಲು ಕಣ್ಣು ಮುಂದೆ ಬರುವ ಮೊದಲ ಬಣ್ಣ ಕೆಂಪು. ಆದರೆ ಈಗ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಎರಡೂ ಕಲ್ಲಂಗಡಿಗಳು ಲಭ್ಯವಿವೆ. ಮಾಹಿತಿಯ ಪ್ರಕಾರ, ಕಲ್ಲಂಗಡಿಗಳಲ್ಲಿನ ರಾಸಾಯನಿಕದಿಂದಾಗಿ, ಅವುಗಳ ಬಣ್ಣವು ಕೆಂಪು ಅಥವಾ ಹಳದಿಯಾಗಿರುತ್ತದೆ ಎನ್ನಲಾಗುತ್ತಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News