ಸಾವಿಗೂ ಒಂದು ಗಂಟೆ ಮುನ್ನ ಪ್ರತಿಯೊಬ್ಬರಿಗೂ ಸಿಗುತ್ತದೆಯಂತೆ ಈ ಸೂಚನೆ ! ಆಗುತ್ತದೆಯಂತೆ ಈ ಅನುಭವ

ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಸಮಯ ಕೂಡಾ ಮೊದಲೇ ನಿಗದಿಯಾಗಿರುತ್ತದೆಯಂತೆ.  ಆದರೆ ಈ ಸಮಯ ದೇವರಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ.  ಹೀಗಿದ್ದರೂ ವ್ಯಕ್ತಿ ಮರಣ ಹೊಂದುವ ಮೊದಲು, ಸಾವು ಸಮೀಪಿಸಿದೆ ಎಂದು ಸೂಚಿಸುವ ಅನೇಕ ಸೂಚನೆಗಳನ್ನೂ ಪಡೆಯುತ್ತಾನೆಯಂತೆ.    

Written by - Ranjitha R K | Last Updated : Aug 1, 2023, 02:38 PM IST
  • ಈ ಸೂಚನೆಗಳು ಸಾವಿಗೂ ಮುನ್ನ ಸಿಗುತ್ತದೆಯಂತೆ
  • ಗರುಡ ಪುರಾಣದಲ್ಲಿ ಎಲ್ಲವನ್ನೂ ವಿವರಿಸಲಾಗಿದೆ
  • ಹುಟ್ಟಿನಿಂದ ಸಾವಿನವರೆಗಿನ ಪ್ರಯಾಣವನ್ನು ತಿಳಿಸಲಾಗಿದೆ
ಸಾವಿಗೂ ಒಂದು ಗಂಟೆ ಮುನ್ನ ಪ್ರತಿಯೊಬ್ಬರಿಗೂ ಸಿಗುತ್ತದೆಯಂತೆ ಈ ಸೂಚನೆ ! ಆಗುತ್ತದೆಯಂತೆ ಈ  ಅನುಭವ  title=

ಬೆಂಗಳೂರು : ಹಿಂದೂ ಧರ್ಮದಲ್ಲಿ, ಗರುಡ ಪುರಾಣಕ್ಕೆ ಮಹಾಪುರಾಣದ ಸ್ಥಾನಮಾನವನ್ನು ನೀಡಲಾಗಿದೆ. ಏಕೆಂದರೆ ಗರುಡ ಪುರಾಣದಲ್ಲಿ, ಹುಟ್ಟಿನಿಂದ ಸಾವಿನವರೆಗೆ ಮತ್ತು ಸಾವಿನ ನಂತರ ಆತ್ಮದ ಪ್ರಯಾಣವನ್ನು ಸಹ ಹೇಳಲಾಗಿದೆ. ಗರುಡ ಪುರಾಣದಲ್ಲಿ ವಿಷ್ಣು ಮತ್ತು ಗರುಡರಾಜನ ಸಂಭಾಷಣೆಯನ್ನು ಕೂಡಾ ವಿವರಿಸಲಾಗಿದೆ. ಗರುಡ ಪುರಾಣದಲ್ಲಿ ಸಾವು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ? ಸಾವಿಗೂ ಮುನ್ನ ವ್ಯಕ್ತಿಗೆ ಸಿಗುವ ಮುನ್ಸೂಚನೆಗಳ ಬಗ್ಗೆ ವಿವರಿಸಲಾಗಿದೆ. ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆ ಸಾವು ಯಾವಾಗ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೆಯೇ ನಿರ್ಧಾರವಾಗಿರುತ್ತದೆಯಂತೆ. ಪ್ರತಿಯೊಬ್ಬ ವ್ಯಕ್ತಿಯ ಸಾವಿನ ಸಮಯ ಕೂಡಾ ಮೊದಲೇ ನಿಗದಿಯಾಗಿರುತ್ತದೆಯಂತೆ.  ಆದರೆ ಈ ಸಮಯ ದೇವರಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಲಾಗುತ್ತದೆ.  ಹೀಗಿದ್ದರೂ ವ್ಯಕ್ತಿ ಮರಣ ಹೊಂದುವ ಮೊದಲು, ಸಾವು ಸಮೀಪಿಸಿದೆ ಎಂದು ಸೂಚಿಸುವ ಅನೇಕ ಸೂಚನೆಗಳನ್ನೂ ಪಡೆಯುತ್ತಾನೆಯಂತೆ.  

ಈ  ಸೂಚನೆಗಳು ಸಾವಿಗೂ ಮುನ್ನ ಸಿಗುತ್ತದೆಯಂತೆ : 
ಸಾಯುವ ವ್ಯಕ್ತಿ ಸಾವಿನ ಮೊದಲು ಕೆಲವು  ಸೂಚನೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ. ಸಾಯುವವರು ತನ್ನ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿಯಾಗಬಹುದು ಮತ್ತು ಮಾತನಾಡಬಹುದು ಎನ್ನುವ ಕಾರಣದಿಂದ ಮತ್ತು ಯಾವುದೇ ಆಸೆ ಈಡೇರದೆ ಉಳಿದಿದ್ದರೆ, ಅದನ್ನು ಯಾರಿಗಾದರೂ ಹೇಳಬಹುದು ಎನ್ನುವ ಕಾರಣದಿಂದ ಈ ಸೂಚನೆಗಳು ಮನಸ್ಸಿನಲ್ಲಿ ಮೂಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : ಅರಿಶಿನದ ಈ ಉಪಾಯಗಳು ನಿಮ್ಮ ಮನೆಯಲ್ಲಿ ಹಣದ ಹೊಳೆ ಹರಿಸುವುದರ ಜೊತೆಗೆ ಸಾಲಬಾಧೆಯಿಂದ ಮುಕ್ತಿ ನೀಡುತ್ತವೆ!

ಸಾವಿಗೂ ಮುನ್ನ ಸಿಗುತ್ತದೆ ಈ ಸೂಚನೆಗಳು : 
- ಒಬ್ಬ ವ್ಯಕ್ತಿಯ ಮರಣ ಸಮೀಪಿಸುತ್ತಿದ್ದಂತೆಯೇ ತನ್ನ ಪೂರ್ವಜರು ಅಥವಾ ಸತ್ತ ಸಂಬಂಧಿಕರು ಕಾಣಿಸಲು ಶುರುವಾಗುತ್ತಾರೆ. ಮಾತ್ರವಲ್ಲ ಸತ್ತ ಆತ್ಮೀಯರು ಎದುರಿಗೆ ಬಂದು ನಿಂತಂತೆ ಕಾಣುತ್ತದೆಯಂತೆ .  

- ಸಾವಿನ ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯು ತನ್ನ ಸುತ್ತಲೂ ಕೆಲವು ನೆರಳಿನ  ರೂಪಗಳನ್ನು ಕಾಣಲು ಆರಂಭಿಸುತ್ತಾನೆ. 

- ಸಾವಿಗೆ ಸ್ವಲ್ಪ ಮೊದಲು, ವ್ಯಕ್ತಿಯು ನರಗಳಾಗಲು ಪ್ರಾರಂಭಿಸುತ್ತಾನೆ. ಅವನ ಧ್ವನಿ ತೊದಲಲು ಪ್ರಾರಂಭವಾಗುತ್ತದೆ. ಎಷ್ಟೇ ಪ್ರಯತ್ನಿದರೂ  ಮಾತನಾಡಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಯಮದೂತ ಕಾಣಲು ಆರಂಭಿಸುತ್ತಾನೆಯಂತೆ.  ಆಗ ಅವರು ಮಾತನ್ನೇ ನಿಲ್ಲಿಸುತ್ತಾರೆ ಎಂದು ಪುರಾಣದಲ್ಲಿ ಹೇಳಲಾಗಿದೆ.   

ಇದನ್ನೂ ಓದಿ : ರಾತ್ರೋರಾತ್ರಿ ಅದೃಷ್ಟ ಬದಲಾಗಲು ತುಳಸಿ ಕಟ್ಟೆಯ ಮೇಲಿರಲಿ ಈ ಶುಭ ಚಿಹ್ನೆಗಳು!

- ಸಾವಿಗೂ ಮುನ್ನ ಸುತ್ತಲೂ ಬೆಳಕಿದ್ದರೂ ಆ ವ್ಯಕ್ತಿಗೆ ಏನೂ ಕಾಣಿಸುವುದಿಲ್ಲವಂತೆ. ತನ್ನ ಪಕ್ಕದಲ್ಲಿಯೇ ಏನಿದೆ ಎನ್ನುವುದು ಕೂಡಾ ಗೋಚರಿಸುವುದಿಲ್ಲವಂತೆ. ಒಂದು ರೀತಿಯ ಕತ್ತಲೆ ಆ ವ್ಯಕ್ತಿಯ ಸುತ್ತ ಆವರಿಸಿ ಬಿಡುತ್ತದೆಯಂತೆ.   

ಸಾವಿಗೆ ಸ್ವಲ್ಪ ಮೊದಲು, ವ್ಯಕ್ತಿಯ ನೆರಳು ಕೂಡಾ ಆತನ ಬಳಿಯಿಂದ ದೂರ ಸಾಗಿದಂತೆ ಗೋಚರಿಸುತ್ತದೆಯಂತೆ. ಆ ವ್ಯಕ್ತಿ ಕನ್ನಡಿ, ಎಣ್ಣೆ ಅಥವಾ ನೀರಿನಲ್ಲಿ  ತನ್ನನ್ನು ತಾನು ನೋಡಿಕೊಂಡರೆ ಪ್ರತಿಬಿಂಬ ಕಾಣಿಸುವುದಿಲ್ಲವಂತೆ. 

ಸಾವಿಗೂ ಮುನ್ನ ವ್ಯಕ್ತಿಯು ತಾನು ಮಾಡಿದ ಕೆಲಸಗಳ ಬಗ್ಗೆ ಯೋಚನೆ ಮಾಡಲು ಆರಂಭಿಸುತ್ತಾನೆ. ಇಡೀ ಜೀವನವು ಅವನ ಕಣ್ಣುಗಳ ಮುಂದೆ ಚಲನಚಿತ್ರದಂತೆ  ಸುಳಿದಾಡಿ ಬಿಡುತ್ತದೆಯಂತೆ. ತಾನು ಮಾಡಿರುವ ಕೆಟ್ಟ ಕೆಲಸ ಮತ್ತು ಆ ಕೆಲಸಕ್ಕೆ ಯಾವ ಶಿಕ್ಷೆಯಾಗಬಹುದು ಎನ್ನುವ ಆಲೋಚನೆ ಮನದಲ್ಲಿ ಮೂಡಲು ಶುರುವಾಗುತ್ತದೆಯಂತೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News