ವಾರಕ್ಕೊಮ್ಮೆ ಈ ಬೀಜವನ್ನು ಅರೆದು ಕೂದಲಿಗೆ ಹಚ್ಚಿ ! 4 ಬಾರಿ ಬಳಸುವುದರೊಳಗೆ ನಿಂತೇ ಹೋಗುವುದು ಕೂದಲು ಉದುರುವ ಸಮಸ್ಯೆ

ಫೋಲಿಕ್ ಆಸಿಡ್, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಸಿಯಮ್, ಕಬ್ಬಿಣ, ಆಂಟಿಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಲ್ಲಿ ಸಮೃದ್ಧವಾಗಿರುವ ಮೆಂತ್ಯೆ ಬೀಜಗಳನ್ನು ಕೂದಲಿನ ಬೆಳವಣಿಗೆಗೆ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲನ್ನು ಬಲಪಡಿಸಲು ಮೆಂತ್ಯೆ ಬೀಜವನ್ನು ಬಳಸಲಾಗುತ್ತದೆ.   

Written by - Ranjitha R K | Last Updated : Oct 9, 2023, 02:39 PM IST
  • ಮೆಂತ್ಯೆ ಬೀಜಗಳು ಸಾಮಾನ್ಯವಾಗಿ ಎಲ್ಲಾ ಅಡುಗೆಮನೆಯಲ್ಲಿ ಕಂಡು ಬರುವ ಪದಾರ್ಥವಾಗಿದೆ.
  • ಇದನ್ನು ಮಸಾಲೆಯ ರೂಪದಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ.
  • ಮೆಂತ್ಯೆ ಬೀಜಗಳನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಚ್ಚಬಹುದು.
ವಾರಕ್ಕೊಮ್ಮೆ ಈ ಬೀಜವನ್ನು ಅರೆದು ಕೂದಲಿಗೆ ಹಚ್ಚಿ ! 4 ಬಾರಿ ಬಳಸುವುದರೊಳಗೆ ನಿಂತೇ ಹೋಗುವುದು ಕೂದಲು ಉದುರುವ ಸಮಸ್ಯೆ  title=

ಬೆಂಗಳೂರು : ಮೆಂತ್ಯೆ ಬೀಜಗಳು ಸಾಮಾನ್ಯವಾಗಿ ಎಲ್ಲಾ ಅಡುಗೆಮನೆಯಲ್ಲಿ ಕಂಡು ಬರುವ ಪದಾರ್ಥವಾಗಿದೆ. ಇದನ್ನು ಮಸಾಲೆಯ ರೂಪದಲ್ಲಿ ಅಡುಗೆಯಲ್ಲಿ ಬಳಸಲಾಗುತ್ತದೆ. ಮೆಂತ್ಯೆ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೆ, ಚರ್ಮ ಮತ್ತು ಕೂದಲಿಗೆ  ಅತ್ಯಂತ ಪ್ರಯೋಜನಕಾರಿಯಾಗಿದೆ. ಮೆಂತ್ಯೆ ಬೀಜಗಳನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಚ್ಚಬಹುದು. ಫೋಲಿಕ್ ಆಸಿಡ್, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಸಿಯಮ್, ಕಬ್ಬಿಣ, ಆಂಟಿಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಲ್ಲಿ ಸಮೃದ್ಧವಾಗಿರುವ ಮೆಂತ್ಯೆ ಬೀಜಗಳನ್ನು ಕೂದಲಿನ ಬೆಳವಣಿಗೆಗೆ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲನ್ನು ಬಲಪಡಿಸಲು  ಬಳಸಲಾಗುತ್ತದೆ. 

ಮೆಂತ್ಯೆ ಬೀಜಗಳನ್ನು ಕೂದಲಿಗೆ ಹಚ್ಚುವುದು ಹೇಗೆ ? : 
ತಲೆಹೊಟ್ಟು ಹೋಗಲಾಡಿಸಲು, ಕೂದಲು ಉದುರುವಿಕೆಯನ್ನು ತಡೆಯಲು, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮೆಂತ್ಯೆ ಬೀಜಗಳನ್ನು ಬಳಸಲಾಗುತ್ತದೆ.  ಕೂದಲನ್ನು ದಪ್ಪ ಮತ್ತು ಸುಂದರವಾಗಿಸಲು ಮೆಂತ್ಯೆ ಬೀಜಗಳನ್ನು ಬಳಸಬಹುದು. ಮೆಂತ್ಯೆ ಬೀಜಗಳು ಆಂಟಿ-ಆಕ್ಸಿಡೆಂಟ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು  ಹೊಂದಿದ್ದು, ಇದನ್ನೂ ಕೂದಲಿಗೆ ಹಚ್ಚುವುದರಿಂದ ಹಲವಾರು ವಿಧಗಳಲ್ಲಿ ಪ್ರಯೋಜನವಾಗುವುದು. 

ಇದನ್ನೂ ಓದಿ : ಒಂದೇ ವಾರದಲ್ಲಿ 2 ಕೆಜಿ ತೂಕ ಇಳಿಸಲು ಇಂದಿನಿಂದಲೇ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವಿಸಲು ಆರಂಭಿಸಿ!

ಕೂದಲ ಬೆಳವಣಿಗೆಗೆ : ಕೂದಲು ಉದುರಿ ತೆಳ್ಳಗಾಗಿದ್ದರೆ ಮೆಂತ್ಯೆ ಬೀಜಗಳನ್ನು ಈ ರೀತಿ ಕೂದಲಿಗೆ ಹಚ್ಚಿ. ಇದಕ್ಕಾಗಿ ಅರ್ಧ ಕಪ್ ತೆಂಗಿನ ಎಣ್ಣೆಯಲ್ಲಿ ಎರಡು ಚಮಚ ಮೆಂತ್ಯೆ ಬೀಜಗಳನ್ನು ಹಾಕಿ ಕುದಿಸಿ. ನಂತರ ಈ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಈ ಎಣ್ಣೆ ತಣ್ಣಗಾದ ನಂತರ ಇದನ್ನು  ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಬಹುದು. ಇದರಿಂದ ಕೂದಲು ದಟ್ಟವಾಗಿ ಮತ್ತು  ಸದೃಢವಾಗಿ ಬೆಳೆಯುವುದು.  

ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ :  ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಎರಡು ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಹೀಗೆ ನೆನೆಸಿಟ್ಟ ಮೆಂತ್ಯೆ ಬೀಜಗಳನ್ನು ಮಾರನೆಯ ದಿನ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಅರ್ಧ ಗಂಟೆ ಬಿಟ್ಟು ನಂತರ ನಿಮ್ಮ ಕೂದಲನ್ನು ತೊಳೆಯಿರಿ.  ವಾರದಲ್ಲಿ ಎರಡು ದಿನ ಈ ಪರಿಹಾರವನ್ನು ಪ್ರಯತ್ನಿಸಬಹುದು.

ಇದನ್ನೂ ಓದಿ :  ಈ 4 ಹಸಿರು ಜ್ಯೂಸ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಇಂದೇ ಕೂದಲುದುರುವಿಕೆಗೆ ಗುಡ್ ಬೈ ಹೇಳಿ!

ಒಣ ಕೂದಲಿಗೆ ಪರಿಹಾರ : ಮೆಂತ್ಯೆ ಬೀಜಗಳ ಹೇರ್ ಮಾಸ್ಕ್ ಒಣ ಕೂದಲನ್ನು ಮೃದುಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಒಂದು ಬಟ್ಟಲಿನಲ್ಲಿ ಎರಡು ಚಮಚ ಮೊಸರನ್ನು ತೆಗೆದುಕೊಂಡು ಅದಕ್ಕೆ ಮೆಂತ್ಯೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ತೆಂಗಿನೆಣ್ಣೆಯನ್ನೂ ಸೇರಿಸಿ. ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಕೂದಲು ಮೃದುವಾಗಿರುತ್ತದೆ.

ತಲೆಹೊಟ್ಟು ನಿವಾರಣೆ : ಮೆಂತ್ಯೆಯನ್ನು  ನಿಂಬೆ ರಸದೊಂದಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ಹೇರ್ ಮಾಸ್ಕ್‌ನೊಂದಿಗೆ,  ತಲೆಹೊಟ್ಟಿನ ಸಮಸ್ಯೆ ಬುಡದಿಂದಲೇ ಮಾಯವಾಗುತ್ತದೆ.

ತೆಂಗಿನೆಣ್ಣೆ ಜೊತೆ ಈ ಗಿಡದ ಎಲೆಯನ್ನು ಬೆರೆಸಿ ತಲೆಗೆ ಹಚ್ಚಿ… ನಿಮಿಷಗಳಲ್ಲಿ ಶಾಶ್ವತವಾಗಿ ಕಪ್ಪಾಗುವುದು ಬಿಳಿಕೂದಲು!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News