ಚಿರತೆ ದಾಳಿಗೆ ಬೆಚ್ಚಿಬಿದ್ದ ಯಾದಗಿರಿ ಜನತೆ

Leopard Attack: ಜಮೀನಿನಲ್ಲಿ ಜಾನುವಾರುಗಳನ್ನು ಕಟ್ಟಿ ರಾತ್ರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದ ರೈತರು ಈಗ ಚಿರತೆ ದಾಳಿಯಿಂದ ಭಯಗೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ನಂತರ ಸಂಜೆಯೊಳಗೆ ಜಾನುವಾರುಗಳ ಸಮೇತ ಮನೆಗೆ ಸೇರುತ್ತಿದ್ದಾರೆ. ಚಿರತೆ ಭಯದಿಂದಾಗಿ  ರೈತರು ಜಾನುವಾರುಗಳನ್ನು ಜಮೀನಿನಲ್ಲಿ ಕಟ್ಟುತ್ತಿಲ್ಲ.

Written by - Yashaswini V | Last Updated : Feb 3, 2023, 08:13 AM IST
  • ನಾಲ್ಕೈದು ದಿನಗಳ ಅಂತರದಲ್ಲಿ ಜಮೀನಿನಲ್ಲಿ ಕಟ್ಟಿದ ಜಾನುವಾರುಗಳ ಮೇಲೆ ಚಿರತೆಯು ದಾಳಿ ಮಾಡಿ ಜಾನುವಾರುಗಳನ್ನು ಸಾಯಿಸಿದೆ.
  • ಗ್ರಾಮದ ನಾಗೇಂದ್ರರೆಡ್ಡಿ ಹಾಗೂ ಮಲ್ಲಿಕಾರ್ಜುನ ಎಂಬ ರೈತರಿಗೆ ಸೇರಿದ ನಾಲ್ಕು ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ.
  • ಜಾನುವಾರುಗಳ ರಕ್ಷಣೆಗೆ ಮುಂದಾಗಿದ್ದ ಎರಡು ಶ್ವಾನಗಳ ಮೇಲೆ ಚಿರತೆಯು ದಾಳಿ ಮಾಡಿ ಶ್ವಾನಗಳನ್ನು ಬಲಿ ಪಡೆದಿದೆ.
ಚಿರತೆ ದಾಳಿಗೆ ಬೆಚ್ಚಿಬಿದ್ದ ಯಾದಗಿರಿ ಜನತೆ title=
Leopard Attack

Leopard Attack: ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ರಾತ್ರಿ ಹೊತ್ತು ರೈತರ ಜಮೀನಿಗೆ ನುಗ್ಗಿ ಚಿರತೆಯು ಜಾನುವಾರುಗಳ ಮೇಲೆ  ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆದಿದೆ. 

ನಾಲ್ಕೈದು ದಿನಗಳ ಅಂತರದಲ್ಲಿ ಜಮೀನಿನಲ್ಲಿ ಕಟ್ಟಿದ  ಜಾನುವಾರುಗಳ ಮೇಲೆ ಚಿರತೆಯು ದಾಳಿ ಮಾಡಿ ಜಾನುವಾರುಗಳನ್ನು ಸಾಯಿಸಿದೆ. ಗ್ರಾಮದ ನಾಗೇಂದ್ರರೆಡ್ಡಿ ಹಾಗೂ ಮಲ್ಲಿಕಾರ್ಜುನ ಎಂಬ ರೈತರಿಗೆ ಸೇರಿದ  ನಾಲ್ಕು ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ. ಜಾನುವಾರುಗಳ ರಕ್ಷಣೆಗೆ ಮುಂದಾಗಿದ್ದ ಎರಡು ಶ್ವಾನಗಳ ಮೇಲೆ ಚಿರತೆಯು ದಾಳಿ ಮಾಡಿ ಶ್ವಾನಗಳನ್ನು ಬಲಿ ಪಡೆದಿದೆ. 

ಇದನ್ನೂ ಓದಿ- ಶೀಲ ಶಂಕೆ.. ಡಂಬಲ್ಸ್ ನಿಂದ ಹೊಡೆದು ಹೆಂಡತಿಯನ್ನು ಕೊಂದ ಗಂಡ

ಜಮೀನಿನಲ್ಲಿ ಜಾನುವಾರುಗಳನ್ನು ಕಟ್ಟಿ ರಾತ್ರಿ ಜಮೀನಿನಲ್ಲಿ ವಾಸ ಮಾಡುತ್ತಿದ್ದ ರೈತರು ಈಗ ಚಿರತೆ ದಾಳಿಯಿಂದ ಭಯಗೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ನಂತರ ಸಂಜೆಯೊಳಗೆ ಜಾನುವಾರುಗಳ ಸಮೇತ ಮನೆಗೆ ಸೇರುತ್ತಿದ್ದಾರೆ. ಚಿರತೆ ಭಯದಿಂದಾಗಿ  ರೈತರು ಜಾನುವಾರುಗಳನ್ನು ಜಮೀನಿನಲ್ಲಿ ಕಟ್ಟುತ್ತಿಲ್ಲ.

ರಾತ್ರಿ ಹೊತ್ತು ಐಪಿಸೆಟ್ ಗಳಿಗೆ ತ್ರಿಫೇಸ್  ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಶೇಂಗಾ, ತರಕಾರಿ ಬೆಳೆಗೆ ರಾತ್ರಿ ನೀರು ಹರಿಸಬೇಕೆಂದರೆ ಚಿರತೆ ಭಯದಿಂದ ರೈತರು ಬೆಳೆಗಳಿಗೆ ನೀರು ಹರಿಸುತ್ತಿಲ್ಲ. ರೈತರು ಈಗ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೋನ್ ಅಳವಡಿಕೆ ಮಾಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ. 

ಇದನ್ನೂ ಓದಿ- ಕೇವಲ ಗೃಹಿಣಿಯರ ಕಣ್ಣಲ್ಲಿ ಮಾತ್ರವಲ್ಲ ರೈತರ ಕಣ್ಣಲ್ಲೂ ನೀರು ತರಿಸುತ್ತಿದೆ ಈರುಳ್ಳಿ

ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ ಅವರು ಮಾತನಾಡಿ, ಯಾದಗಿರಿ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಬೋನ್ ಹಾಗೂ ಕ್ಯಾಮರಾ ಟ್ರಾಪಿಂಗ್ ಸೌಲಭ್ಯವಿಲ್ಲ. ಬೋನ್ ಪೂರೈಕೆ ಮಾಡಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಲಬುರಗಿಯಿಂದ ಬೋನ್ ತರಿಸಿ ಬೋನ್ ಹಾಕಲಾಗುತ್ತದೆ. ಚಿರತೆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು. ಇದೇ ವೇಳೆ ಚಿರತೆ ದಾಳಿಯಿಂದ ಜಾನುವಾರುಗಳು ಮೃತಪಟ್ಟರೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಹ ಅವರು ಮಾಹಿತಿ ನೀಡಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News