ಕೆ.ಶಿವರಾಂ ಆರೋಗ್ಯ ಸ್ಥಿತಿ ಚಿಂತಾಜನಕ; ಹೆಲ್ತ್‌ ಅಪ್‌ಡೇಟ್‌ ನೀಡಿದ ಅಳಿಯ ಪ್ರದೀಪ್

K Shivaram's health condition: ಸದ್ಯ ನಮ್ಮ ಮಾವನವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಬಿಪಿ ಕಂಟ್ರೋಲ್‌ಗೆ ಬರುತ್ತಿಲ್ಲ. ಬಿಪಿ ಒಂದು ಸಲ ಜಾಸ್ತಿಯಾದ್ರೆ, ಮತ್ತೊಂದು ಸಲ ಕಡಿಮೆಯಾಗುತ್ತಿದೆʼ ಎಂದು ನಟ ಪ್ರದೀಪ್ ಹೇಳಿದ್ದಾರೆ. ​

Written by - Puttaraj K Alur | Last Updated : Feb 28, 2024, 10:53 PM IST
  • ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟ ಕೆ.ಶಿವರಾಂಗೆ ಹೃದಯಾಘಾತ
  • ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿರುವ ಶಿವರಾಂ ಆರೋಗ್ಯ ಸ್ಥಿತಿ ಚಿಂತಾಜನಕ
  • ಬೇಗ ಗುಣವಾಗಲಿ ಎಂದು ಪ್ರಾರ್ಥಿಸುವಂತೆ ನಟ ಪ್ರದೀಪ್‌ ಅಭಿಮಾನಿಗಳಲ್ಲಿ ಮನವಿ
ಕೆ.ಶಿವರಾಂ ಆರೋಗ್ಯ ಸ್ಥಿತಿ ಚಿಂತಾಜನಕ; ಹೆಲ್ತ್‌ ಅಪ್‌ಡೇಟ್‌ ನೀಡಿದ ಅಳಿಯ ಪ್ರದೀಪ್ title=
ಕೆ.ಶಿವರಾಂ ಆರೋಗ್ಯ ಸ್ಥಿತಿ ಚಿಂತಾಜನಕ!

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟ ಕೆ.ಶಿವರಾಂ ಅವರಿಗೆ ಹೃದಯಾಘಾತವಾದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದು,  ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಶಿವರಾಂರಿಗೆ ಹೃದಯಾಘಾತವಾಗಿರುವ ಸುದ್ದಿ ತಿಳಿದು ಅವರ ನೂರಾರು ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಅವರ ಅಳಿಯ, ನಟ ಪ್ರದೀಪ್ ಸಹ ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಭೇಟಿ ಮಾಡಿದ್ದಾರೆ. 

ಫೆ.3ರಂದು ಆಸ್ಪತ್ರೆಗೆ ದಾಖಲು

ಕೆ.ಶಿವರಾಂ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿರುವ ನಟ ಪ್ರದೀಪ್, ʼಕನ್ನಡದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದು IAS ಅಧಿಕಾರಿಯಾಗಿ ಸಾಧನೆ ಮಾಡಿರುವ ನಮ್ಮ ಮಾವನವರು ಅನಾರೋಗ್ಯದ ಕಾರಣ ಫೆ.3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಬಾರಿ ಅವರಿಗೆ ಸಣ್ಣ ಶಸ್ತ್ರಚಿಕಿತ್ಸೆ ಆಗಿತ್ತು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರಿಗೆ ಲೋ ಬಿಪಿ ಸಮಸ್ಯೆ ಶುರುವಾಗಿದೆ. ನಾರ್ಮಲ್‌ ವಾರ್ಡ್‌ನಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರುʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತದಾರರಿಗೆ ಬ್ರ್ಯಾಂಡ್ ಕಾಂಡೋಮ್ ಉಡುಗೂರೆ..! ವಿಡಿಯೋ ವೈರಲ್‌

ʼಕಳೆದ 5-6 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೃದಯಾಘಾತವಾಗಿದೆ. ಅಲ್ಲಿಂದ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ. ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬಿಪಿ ಕಂಟ್ರೋಲ್‌ಗೆ ಬರುತ್ತಿಲ್ಲ. ಬಿಪಿ ಒಂದು ಸಲ ಜಾಸ್ತಿಯಾದ್ರೆ, ಮತ್ತೊಂದು ಸಲ ಕಡಿಮೆಯಾಗುತ್ತಿದೆʼ ಎಂದು ಪ್ರದೀಪ್ ಹೇಳಿದ್ದಾರೆ. 

ʼನಮ್ಮ ಮಾವನವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಪೈಕಿ ಅವರ ಸಿನಿಮಾ ನೋಡಿ ಮತ್ತು ಜಿಲ್ಲಾಧಿಕಾರಿಯಾಗಿದ್ದಾಗ ಅವರ ಸೇವೆ ನೋಡಿ ಇಷ್ಟಪಟ್ಟವರು ಇರಬಹುದು. ನಮ್ಮ ಮಾವನವರು ಮುಂದೆ ರಾಜಕಾರಣದಲ್ಲಿ ಮುಂದುವರಿಯಬೇಕು ಅಂತಾ ಅಂದುಕೊಂಡಿದ್ದರು. ನಾನು ಸದ್ಯಕ್ಕೆ ಕೇಳಿಕೊಳ್ಳುವು ಇಷ್ಟೇ... ನಮ್ಮ ಮಾವನವರ ಪರಿಸ್ಥಿತಿ ಗಂಭೀರವಾಗಿದೆ. ಆದಷ್ಟು ಬೇಗ ಅವರು ಗುಣವಾಗಲಿ ಎಂದು ಎಲ್ಲರೂ ಪ್ರಾರ್ಥಿಸಿ. ಯಾರೂ ಆಸ್ಪತ್ರೆ ಬಳಿ ಬರಬೇಡಿ" ಅಂತಾ ಅವರು ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಮಾರ್ಚ್ 11ರಿಂದ ಬೆಂಗಳೂರು - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ

ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದ ಕೆ.ಶಿವರಾಂ ಅವರು ʼಬಾ ನಲ್ಲೆ ಮಧುಚಂದ್ರಕೆʼ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಮನಗರ ಮೂಲದ ಅವರು ಚಲವಾದಿ ಮಹಾಸಭಾದ ಮುಖಂಡರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಬಿಜೆಪಿ ಮುಖಂಡರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News