ಕೇವಲ 15 ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಈ ಮ್ಯಾಜಿಕ್ ಡ್ರಿಂಕ್ ! ನಿತ್ಯ ಸೇವಿಸಿದರೆ ರಿಸಲ್ಟ್ ಗ್ಯಾರಂಟಿ !

ಕಳಪೆ ಜೀವನಶೈಲಿಯು ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೆಲವು ಸರಳ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.  

Written by - Ranjitha R K | Last Updated : Dec 15, 2023, 02:41 PM IST
  • ಅನೇಕರು ತೂಕ ಹೆಚ್ಚಳ ಮತ್ತು ಸಮಸ್ಯೆಯಿಂದ ಬಳಲುತ್ತಿದ್ದಾರೆ.
  • ತೂಕ ಇಳಿಸಿಕೊಳ್ಳಲು ಕೆಲವರು ಹಲವು ವಿಧಗಳನ್ನು ಅನುಸರಿಸುತ್ತಾರೆ.
  • ಮೆಂತ್ಯೆ ಮತ್ತು ಸೋಂಪು ನೀರು ಕುಡಿಯುವುದರಿಂದ ತೂಕ ಕಳೆದುಕೊಳ್ಳಬಹುದು
ಕೇವಲ 15 ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಈ ಮ್ಯಾಜಿಕ್ ಡ್ರಿಂಕ್ ! ನಿತ್ಯ ಸೇವಿಸಿದರೆ ರಿಸಲ್ಟ್ ಗ್ಯಾರಂಟಿ ! title=

ಬೆಂಗಳೂರು : ದೇಹದ ತೂಕ ಹೆಚ್ಚಾಗುವುದು ಅನೇಕ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ಅನೇಕ ರೀತಿಯ ದೈಹಿಕ ಸಮಸ್ಯೆಯ ಅಪಾಯವನ್ನು ಕೂಡಾ ತಂದೊಡ್ಡುತ್ತದೆ. ಅನಾರೋಗ್ಯಕರ ಆಹಾರ ಮತ್ತು ಕಳಪೆ ಜೀವನಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಯಾವಾಗ ಬೇಕು ಆಗ ತಿನ್ನುವುದು, ಗೊತ್ತು ಗುರಿ ಇಲ್ಲದ ಸಮಯದಲ್ಲಿ ಮಲಗುವುದು ಹೀಗೆ ಬೇಕಾ ಬಿಟ್ಟಿ  ದಿನಚರಿ ಅನುಸರಿಸಿಕೊಂಡು ಬದುಕುವುದರಿಂದ ಅನೇಕ ಜನರ ತೂಕ ಹೆಚ್ಚುತ್ತಾ ಹೋಗುತ್ತದೆ. ಕಳಪೆ ಜೀವನಶೈಲಿಯು ಆರೋಗ್ಯದ ಮೇಲೆ ಪ್ರಮುಖವಾಗಿ  ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. 

ಅನೇಕ ಜನರು ತೂಕ ಹೆಚ್ಚಳ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹದಂಥಹ  ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಅತಿರೇಕಕ್ಕೆ ಹೋಗಿ ಶಸ್ತ್ರಚಿಕಿತ್ಸೆಗೆ ಕೂಡಾ ಒಳಗಾಗುತ್ತಾರೆ. ಏನೇ ಮಾಡಿದರೂ ಕೆಲವೊಮ್ಮೆ ಇವುಗಳು ನಿಷ್ಪರಿಣಾಮಕಾರಿಯಾಗುತ್ತವೆ. ಇಂಥ ಸಂದರ್ಭದಲ್ಲಿ ಕೆಲವು ಸರಳ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.  

ಇದನ್ನೂ  ಓದಿ : ತೆಂಗಿನೆಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ವಾರಕ್ಕೆ ಎರಡು ಬಾರಿ ಹಚ್ಚಿದರೆ ಬುಡದಿಂದಲೇ ಕಪ್ಪಾಗುವುದು ಬಿಳಿ ಕೂದಲು !

ಪ್ರತಿದಿನ ಬೆಳಿಗ್ಗೆ ಮೆಂತ್ಯೆ ಮತ್ತು ಸೋಂಪು ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಈ ಎರಡು ಮಸಾಲೆಗಳಿಂದ ತಯಾರಿಸಿದ ನೀರು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದಕ್ಕೆ ಸಂಬಂಧಿಸಿದ ಪ್ರಯೋಜನಗಳು ಮತ್ತು ಈ ನೀರನ್ನು ತಯಾರಿಸುವ ವಿಧಾನ ಯಾವುದು ನೋಡೋಣ. 

ತೂಕ ನಷ್ಟಕ್ಕೆ  ಈ ಮ್ಯಾಜಿಕ್ ಡ್ರಿಂಕ್ : 
- ರಾತ್ರಿ 1 ಕಪ್ ನೀರಿನಲ್ಲಿ 1 ಚಮಚ ಶುಂಠಿ ಮತ್ತು 1 ಚಮಚ ಮೆಂತ್ಯೆಯನ್ನು ಹಾಕಿ  ನೆನೆಸಿಡಿ.
- ಬೆಳಿಗ್ಗೆ ಎದ್ದ ನಂತರ ಇದನ್ನು ಫಿಲ್ಟರ್ ಮಾಡಿ ಉಳಿದ ನೀರನ್ನು ಮಾತ್ರ ಕುಡಿಯಬೇಕು.
- ಈ ನೀರು ಕಹಿಯಾಗಿದ್ದರೆ, ಇದಕ್ಕೆ ಜೇನುತುಪ್ಪವನ್ನು ಸೇರಿಸಬಹುದು.
- ನೀರು ಕುಡಿದ ನಂತರ, ಈ ನೆನೆಸಿದ ಬೀಜಗಳನ್ನು ಅಗಿದು ತಿನ್ನಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ  ಓದಿ : Winter Care: ಚಳಿಗಾಲದಲ್ಲಿ ಕಪ್ಪು ಎಳ್ಳು ಯಾಕೆ ತಿನ್ನಬೇಕು ಗೊತ್ತಾ..?

ಮೆಂತ್ಯೆ ಮತ್ತು ಸೋಂಪು ನೀರಿನ ಪ್ರಯೋಜನಗಳು : 
ಡಿಟಾಕ್ಸಿಫೈಯರ್ : 
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ಮತ್ತು ಮೆಂತ್ಯೆ ನೀರನ್ನು ಕುಡಿಯುವುದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ದೇಹದಿಂದ ಎಲ್ಲಾ ರೀತಿಯ ತ್ಯಾಜ್ಯಗಳು ಕ್ರಮೇಣ ಹೊರಹಾಕಲ್ಪಡುತ್ತವೆ. ಆದರೆ, ಈ ನೀರನ್ನು ನಿರಂತರವಾಗಿ 15 ದಿನಗಳಿಗಿಂತ ಹೆಚ್ಚು ಕಾಲ ಕುಡಿಯಬಾರದು ಎನ್ನುವುದು ನೆನಪಿನಲ್ಲಿರಲಿ. 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಮೆಂತ್ಯೆ  ಮತ್ತು ಸೋಂಪು ಎರಡೂ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ದವಾಗಿವೆ.  ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆಂತ್ಯೆ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಜೀರ್ಣಾಂಗ ವ್ಯವಸ್ಥೆ : ಮೆಂತ್ಯೆ  ಮತ್ತು ಸೋಂಪು ನೀರು ಜೀರ್ಣಾಂಗ ವ್ಯವಸ್ಥೆಗೆ ರಾಮಬಾಣವಾಗಿದೆ. ಇದು ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದನ್ನು ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿ ಮತ್ತು  ಗ್ಯಾಸ್ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. 

ತೂಕ ನಷ್ಟದಲ್ಲಿ ಉಪಯುಕ್ತ : ನಿಯಮಿತವಾಗಿ ಮೆಂತ್ಯೆ  ಮತ್ತು ಸೋಂಪು ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಇದು ತೂಕ ನಷ್ಟ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಉತ್ತಮ ಫಲಿತಾಂಶಗಳಿಗಾಗಿ ಇದರ ಬೀಜಗಳನ್ನು ಅಗಿಯಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News