Diabetes Control Tips: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ನಿಮ್ಮ ಡಯಟ್ನಲ್ಲಿರಲಿ ಈ 4 ಮಸಾಲೆಗಳು

Diabetes Control Tips: ಆಯುರ್ವೇದ ಪ್ರಕಾರ, ನಾವು ನಮ್ಮ ದೈನಂದಿನ ಆಹಾರದಲ್ಲಿ ಬಳಸುವ ಮಸಾಲೆ ಪದಾರ್ಥಗಳು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಅವುಗಳಲ್ಲಿ ಕೆಲವು ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಎಂದು ಹೇಳಲಾಗುತ್ತದೆ. ಆ ಮಸಾಲೆಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Oct 5, 2023, 07:21 AM IST
  • ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು
  • ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು 4 ಮಸಾಲ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
  • ಆ ಮಸಾಲ ಪದಾರ್ಥಗಳು ಯಾವುವು? ಮಧುಮೇಹಿಗಳಿಗೆ ಆ ಮಸಾಲೆಗಳಿಂದ ಆಗುವ ಪ್ರಯೋಜನಗಳೇನು ತಿಳಿಯೋಣ
Diabetes Control Tips: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ನಿಮ್ಮ ಡಯಟ್ನಲ್ಲಿರಲಿ ಈ 4 ಮಸಾಲೆಗಳು  title=

Diabetes Control Tips: ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಮಸಾಲೆಗಳಿಗೆ ವಿಶ್ವದಾದ್ಯಂತ ಬಲು ಬೇಡಿಕೆ ಇದೆ. ಈ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಆರೋಗ್ಯಕಾರಕಗಳು ಹೌದು. ಆಯುರ್ವೇದದ ಪ್ರಕಾರ, ಕೆಲವು ಮಸಾಲೆಗಳು ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಮಧುಮೇಹ ರೋಗಿಗಳಿಗೆ ಅವುಗಳನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 

ಹೌದು, ಆಯುರ್ವೇದ ತಜ್ಞರ ಪ್ರಕಾರ, ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ ಅವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿ ಆಗಿವೆ. ಹಾಗಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಧುಮೇಹಿಗಳು ಯಾವ ಮಸಾಲೆ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಎಂದು ತಿಳಿಯೋಣ... 

ಮಧುಮೇಹ: ಈ ಮಸಾಲೆಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು 
ಅರಿಶಿನ: 

ನಿಮಗೆಲ್ಲರಿಗೂ ತಿಳಿದಿರುವಂತೆ ಅರಿಶಿನದಲ್ಲಿ ಕರ್ಕ್ಯುಮೀನ್ ಎಂಬ ಸಂಯುಕ್ತ ಕಂಡು ಬರುತ್ತದೆ. ಇದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ವೃದ್ಧಿಸುತ್ತದೆ. ಹಾಗಾಗಿ, ಮಧುಮೆಹಿಗಳಿಗೆ ಅರಿಶಿನವನ್ನು ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. 

ಇದನ್ನೂ ಓದಿ- ಗರ್ಭಿಣಿ ಸೇರಿದಂತೆ ಈ ಸಮಸ್ಯೆ ಇರುವವರು ಮೂಲಂಗಿ ಸೇವಿಸಬಾರದು ! ಯಾಕೆ ಗೊತ್ತಾ ?

ಮೆಂತ್ಯ ಬೀಜಗಳು: 
ಮೆಂತ್ಯ ಬೀಜಗಳು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ. ಮೆಂತ್ಯದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಕಂಡು ಬರುವುದರಿಂದ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ದೇಹವು ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಒಂದು ಚಮಚ ಮೆಂತ್ಯವನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಶೋಧಿಸಿ ಕುಡಿಯಿರಿ. ಈ ರೀತಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 

ಕೊತ್ತಂಬರಿ ಬೀಜ/ದನಿಯಾ: 
ಕೊತ್ತಂಬರಿ ಬೀಜ ಅಥವಾ ದನಿಯಾ ಬಳಕೆಯು ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಂಡು ಬರುವ ಕಾರ್ಬೋಹೈಡ್ರೇಟ್‌ಗಳು ದೇಹದ ಚಯಾಪಚಯ ಮತ್ತು ಹೈಪೊಗ್ಲಿಸಿಮಿಕ್ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಹಲವು ಸಂಶೋಧನೆಗಳ ಪ್ರಕಾರ, ಕೊತ್ತಂಬರಿ ಬೀಜಗಳ ಬಳಕೆಯಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವಲ್ಲಿಯೂ ತುಂಬಾ ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- ರೋಗಗಳಿಂದ ರಕ್ಷಣೆಗಾಗಿ ವಿಟಮಿನ್ ಸಿ ಸಮೃದ್ಧ ಈ ತರಕಾರಿಗಳನ್ನು ತಪ್ಪದೇ ಸೇವಿಸಿ

ದಾಲ್ಚಿನ್ನಿ:
ಭಾರತೀಯ ಖಾದ್ಯಗಳಲ್ಲಿ ಪ್ರಮುಖ ಮಸಾಲೆಯಾಗಿ ಬಳಸಲ್ಪಡುವ ದಾಲ್ಚಿನ್ನಿಯು ಮಧುಮೇಹಿಗಳಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಇದು ಡಯಾಬಿಟಿಸ್ ಅನ್ನು ನಿಯಂತ್ರಿಸುವುದಲ್ಲದೆ ದೆಯದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ರಕ್ತದಲ್ಲಿ ಸಂಗ್ರಹಿಸಲು ಅನುಮತಿಸುವುದಿಲ್ಲ. ಇದನ್ನು ಪುಡಿ ಮಾಡಿ ಒಂದು ಲೋಟ ಬಿಸಿ ಹಾಲಿನಲ್ಲಿ ಚಿಟಿಕೆ ದಾಲ್ಚಿನ್ನಿಯನ್ನು ಬೆರೆಸಿ ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News