ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆ

The Lord of the Rings The Rings of Power: ಅತ್ಯಂತ ಜನಪ್ರಿಯ ಸಿರೀಸ್‌ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ನ ಎರಡನೇ ಸೀಸನ್‌ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ.  

Written by - YASHODHA POOJARI | Last Updated : May 15, 2024, 08:56 AM IST
  • ಅತ್ಯಂತ ಜನಪ್ರಿಯ ಸಿರೀಸ್‌ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌
  • ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ನ ಎರಡನೇ ಸೀಸನ್‌ ಟೀಸರ್
  • ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ
ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆ  title=

The Lord of the Rings The Rings of Power: ಅತ್ಯಂತ ಜನಪ್ರಿಯ ಸಿರೀಸ್‌ ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ನ ಎರಡನೇ ಸೀಸನ್‌ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ.  ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ ಮತ್ತು ಪ್ರೈಮ್ ವೀಡಿಯೋದ ಅತ್ಯುನ್ನತ ಒರಿಜಿನಲ್ ಸಿರೀಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಕಂಡಿದೆ.

2024 ಆಗಸ್ಟ್‌ 29 ರಂದು ಎರಡನೇ ಸೀಸನ್‌ ಜಾಗತಿಕವಾಗಿ ಅನಾವರಣಗೊಳ್ಳಲಿದೆ ಎಂದು ಪ್ರೈಮ್ ವೀಡಿಯೋ ಘೋಷಿಸಿದೆ. ಇದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಹಲವು ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದೆ. ಅದ್ಭುತ ಹೊಸ ಸೀಸನ್‌ನ ಟೀಸರ್ ಇಂದು ಅನಾವರಣಗೊಳಿಸಲಾಯಿತು. ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್‌ ಪಾತ್ರದಲ್ಲಿ ಚಾರ್ಲಿ ವಿಕರ್ಸ್‌ ವಾಪಸ್ ಬರುವುದನ್ನು ಇದು ಚಿತ್ರಿಸಿದೆ.  ಅವರು ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 50 ಎಲ್ಐಸಿ ಪಾಲಿಸಿಗಳು, 7 ಕೆ‌ಜಿ ಚಿನ್ನಾಭರಣ... ಕಂಗನಾ ರನೌತ್ ಬಳಿಯಿರುವ ಆಸ್ತಿ ಎಷ್ಟು ಗೊತ್ತಾ?

ಈ ಟೀಸರ್  ಪ್ರೇಕ್ಷಕರನ್ನು ಹೊಸ ಪಯಣವೊಂದಕ್ಕೆ ಕರೆದೊಯ್ಯಲಿದೆ. ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿಯನ್ನು ಇದು ಪ್ರತಿಫಲಿಸಲಿದೆ. ದೃಶ್ಯ ವೈಭವಕ್ಕೆ ಹೆಸರಾಗಿರುವ ಈ ಸಿರೀಸ್‌, ಅತ್ಯಂತ ಜನಪ್ರಿಯವಾದ ಹಲವು ಪಾತ್ರಗಳನ್ನು ಒಳಗೊಳ್ಳಲಿದೆ. ಗ್ಯಾಲಾಡ್ರಿಯೆಲ್‌, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್‌ ಅವರನ್ನು ಇದು ಒಳಗೊಳ್ಳಲಿದ್ದು,ಇನ್ನಷ್ಟು ನಿರೀಕ್ಷೆಗಳನ್ನು ಈ ಫಸ್ಟ್ ಲುಕ್ ಒಳಗೊಳ್ಳಲಿದೆ.

ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್‌ ಆಫ್ ಪವರ್ ಎರಡನೇ ಸೀಸನ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರೈಮ್ ವೀಡಿಯೋದಲ್ಲಿ ಲಭ್ಯವಿರಲಿದೆ
ದಿ ಲಾರ್ಡ್‌ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ ಎರಡನೇ ಸೀಸನ್‌ನ ಟೀಸರ್ ಟ್ರೇಲರ್ ಮತ್ತು ಕೀ ಆರ್ಟ್ ಅಸೆಟ್‌ಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಹಾಗೂ ಹೆಚ್ಚುವರಿ ಸಿರೀಸ್ ಮಾಹಿತಿಗಾಗಿ, ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಪ್ರೆಸ್ ಸೈಟ್‌ಗೆ ಭೇಟಿ ನೀಡಿ.

ಇದನ್ನೂ ಓದಿ:Ragini Dwivedi : ಬ್ಲ್ಯಾಕ್ ಡ್ರೆಸ್ ನಲ್ಲಿ ತುಪ್ಪದ ಬೆಡಗಿಯ ಹಾಟ್ ಫೋಟೋಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News