“ನಾನು ಬಿಗ್ ಬಾಸ್’ಗೆ ಹೋಗೋಕೆ ಕಾರಣ ಅವರು”- ಕಡೆಗೂ ‘ಆ’ ವ್ಯಕ್ತಿ ಯಾರೆಂದು ಸತ್ಯ ಬಾಯ್ಬಿಟ್ಟ ಸಂಗೀತಾ ಶೃಂಗೇರಿ

Sangeetha Sringeri: ಜೀ ಕನ್ನಡ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಸಂಗೀತಾ ಮಾತನಾಡಿದ್ದಾರೆ. ಬಿಗ್ ಬಾಸ್’ಗೆ ಬರಲು ಕಾರಣ ಏನೆಂಬುದನ್ನು ಬಿಚ್ಚಿಟ್ಟ ಚಾರ್ಲಿ ಬೆಡಗಿ, ತನ್ನ ಯಶಸ್ಸಿನ ಜೊತೆ ನಿಂತ ಆ ವ್ಯಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Written by - Bhavishya Shetty | Last Updated : Feb 6, 2024, 04:40 PM IST
    • ಜೀ ಕನ್ನಡ ನ್ಯೂಸ್ ನಡೆಸಿದ ಸಂದರ್ಶನ
    • ಬಿಗ್ ಬಾಸ್’ಗೆ ಬರಲು ಕಾರಣ ಏನೆಂಬುದನ್ನು ಬಿಚ್ಚಿಟ್ಟ ಚಾರ್ಲಿ ಬೆಡಗಿ
    • ತನ್ನ ಯಶಸ್ಸಿನ ಜೊತೆ ನಿಂತ ಆ ವ್ಯಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
“ನಾನು ಬಿಗ್ ಬಾಸ್’ಗೆ ಹೋಗೋಕೆ ಕಾರಣ ಅವರು”- ಕಡೆಗೂ ‘ಆ’ ವ್ಯಕ್ತಿ ಯಾರೆಂದು ಸತ್ಯ ಬಾಯ್ಬಿಟ್ಟ ಸಂಗೀತಾ ಶೃಂಗೇರಿ title=
Sangeetha Sringeri

Sangeetha Sringeri: ಸಂಗೀತಾ ಶೃಂಗೇರಿ… ಹೆಸರು ಕೇಳುತ್ತಿದ್ದಂತೆ ನೆನಪಾಗೋದು ಆ ಮುದ್ದು ಮುಖ, ಡೇರಿಂಗ್ ಗರ್ಲ್, ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್ ಎಂದು. ಆದರೆ ಇವರ ಈ ಸಕ್ಸಸ್ ಹಿಂದೆ ಒಬ್ಬ ವ್ಯಕ್ತಿಯ ಕೈವಾಡ ಇದೆ ಎಂದು ಸಂಗೀತಾ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Thalapathy Vijay: ಏನೇ ಆದ್ರೂ ನಾನು ವಿಜಯ್’ಗೆ ಓಟು ಹಾಕಲ್ಲ! ಮುಲಾಜಿಲ್ಲದೆ ಬಹಿರಂಗ ಹೇಳಿಕೆ ಕೊಟ್ಟ ಆ ಸ್ಟಾರ್ ನಟ ಯಾರು?

ಜೀ ಕನ್ನಡ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಸಂಗೀತಾ ಮಾತನಾಡಿದ್ದಾರೆ. ಬಿಗ್ ಬಾಸ್’ಗೆ ಬರಲು ಕಾರಣ ಏನೆಂಬುದನ್ನು ಬಿಚ್ಚಿಟ್ಟ ಚಾರ್ಲಿ ಬೆಡಗಿ, ತನ್ನ ಯಶಸ್ಸಿನ ಜೊತೆ ನಿಂತ ಆ ವ್ಯಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬಿಗ್ ಬಾಸ್’ನಲ್ಲಿ ಸಖತ್ ಸ್ಟ್ರಾಂಗ್ ಆಗಿ ಆಟವಾಡಿದ್ದ ಸಂಗೀತಾ ಶೃಂಗೇರಿ, ಈ ಹಿಂದೆ ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆದರೆ ದೊಡ್ಮನೆಯೊಳಗೆ ನೀನು ಹೋಗಬೇಕು, ನಿನ್ನಂತ ವ್ಯಕ್ತಿತ್ವ ನಮ್ಮ ಇಂಡಸ್ಟ್ರಿಗೆ ಬೇಕು, ಹೋಗು ಎಂದು ಹುರಿದುಂಬಿಸಿದ್ದರಂತೆ ಒಬ್ಬ ವ್ಯಕ್ತಿ.

ಇದನ್ನೂ ಓದಿ: ವಿರಾಟ್ ಟೀಂ ಇಂಡಿಯಾಗೆ ಮತ್ತೆ ಬರೋದು ಯಾವಾಗ?- ಪತ್ರಕರ್ತರ ಪ್ರಶ್ನೆಗೆ ಕೋಚ್ ದ್ರಾವಿಡ್ ಹೇಳಿದ್ದೇನು

ಅಷ್ಟಕ್ಕೂ ಆ ವ್ಯಕ್ತಿ ಬೇರಾರು ಅಲ್ಲ, ಸಂಗೀತಾ ಅವರ ಅತ್ತಿಗೆ ಸುಚಿ. ಅತ್ತಿಗೆಗಿಂತ ಹೆಚ್ಚಾಗಿ ಫ್ರೆಂಡ್ ರೀತಿ ಇರುವ ಇವರಿಬ್ಬರು ಸಖತ್ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಆಗಿ ಇರು ಎಂದು ಸಂಗೀತಾ ಅವರನ್ನು ಹುರಿದುಂಬಿಸಿದ್ದೇ ಸುಚಿ. ಇದೀಗ ಸ್ವತಃ ಸಂಗೀತಾ ಅವರೇ, “ನಾನು ಬಿಗ್ ಬಾಸ್’ಗೆ ಬರಲು ಸುಚಿಯೇ ಕಾರಣ” ಎಂದು ಹೇಳಿಕೆ ನೀಡಿದ್ದಾರೆ.

 

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News