IPL 2023: ಅಂದೊಮ್ಮೆ ಟೀಂ ಇಂಡಿಯಾದಲ್ಲಿ ಅಬ್ಬರಿಸಿದ್ದ ಈ ಆಟಗಾರನ ವೃತ್ತಿಜೀವನ ಇಂದು ಕೊನೆ!

Harshal Patel Cricket: ಟೀಮ್ ಇಂಡಿಯಾದಿಂದ ಕೈಬಿಟ್ಟ ನಂತರ, ಈಗ ಈ ಆಟಗಾರ ಐಪಿಎಲ್ 2023 ರಲ್ಲೂ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾನೆ. ಭಾರತದ ಈ ಆಟಗಾರನು ಐಪಿಎಲ್ 2023 ರಲ್ಲಿ ಪಡೆಯುತ್ತಿರುವ ಸುವರ್ಣಾವಕಾಶಗಳನ್ನು ಕೆಟ್ಟದಾಗಿ ವ್ಯರ್ಥ ಮಾಡುತ್ತಿದ್ದಾನೆ. ಇದೇ ಕಾರಣದಿಂದ ಈ ಆಟಗಾರನ ವೃತ್ತಿಜೀವನವು ಕೊನೆಗೊಳ್ಳುವ ಅಂಚಿನಲ್ಲಿದೆ.

Written by - Bhavishya Shetty | Last Updated : May 10, 2023, 12:13 PM IST
    • ಕಳಪೆ ಪ್ರದರ್ಶನ ತೋರಿದ ಕಾರಣ ಈ ಆಟಗಾರನನ್ನು ಭಾರತೀಯ ಕ್ರಿಕೆಟ್ ತಂಡದಿಂದ ಕೈಬಿಡಲಾಗಿತ್ತು.
    • ಐಪಿಎಲ್ 2023 ರಲ್ಲಿಯೂ ಸಹ, ಈ ಕ್ರಿಕೆಟಿಗ ತನ್ನದೇ ತಂಡಕ್ಕೆ ದೊಡ್ಡ ಮುಳುವಾದಂತೆ ತೋರುತ್ತಿದ್ದಾನೆ
    • ಇವರು ಐಪಿಎಲ್ 2023 ರ ನಂತರ ನಿವೃತ್ತಿ ಘೋಷಿಸಿದರೂ ಸಹ ಆಶ್ಚರ್ಯವೇನಿಲ್ಲ.
IPL 2023: ಅಂದೊಮ್ಮೆ ಟೀಂ ಇಂಡಿಯಾದಲ್ಲಿ ಅಬ್ಬರಿಸಿದ್ದ ಈ ಆಟಗಾರನ ವೃತ್ತಿಜೀವನ ಇಂದು ಕೊನೆ!  title=
Harshal Patel

IPL 2023: ಭಾರತೀಯ ಆಟಗಾರನ ಐಪಿಎಲ್ ವೃತ್ತಿಜೀವನ ಬಹುತೇಕ ಮುಗಿದಿದೆ. ಅಷ್ಟೇ ಅಲ್ಲದೆ, ಈಗ ಈ ಆಟಗಾರ ಟೀಮ್ ಇಂಡಿಯಾಕ್ಕೆ ಮರಳುವುದು ಅಸಾಧ್ಯವೆಂದು ತೋರುತ್ತಿದೆ. ಇದಕ್ಕೆ ಕಾರಣ ದೀರ್ಘಕಾಲದಿಂದ ಈ ಆಟಗಾರ ಕಳಪೆ ಪ್ರದರ್ಶನ ನೀಡುತ್ತಿರುವುದು. ಈ ಹಿಂದೆಯೂ ಸಹ ಕಳಪೆ ಪ್ರದರ್ಶನ ತೋರಿದ ಕಾರಣ ಈ ಆಟಗಾರನನ್ನು ಭಾರತೀಯ ಕ್ರಿಕೆಟ್ ತಂಡದಿಂದ ಕೈಬಿಡಲಾಗಿತ್ತು. ಈಗ ಐಪಿಎಲ್ 2023 ರಲ್ಲಿಯೂ ಸಹ, ಈ ಕ್ರಿಕೆಟಿಗ ತನ್ನದೇ ತಂಡಕ್ಕೆ ದೊಡ್ಡ ಮುಳುವಾದಂತೆ ತೋರುತ್ತಿದ್ದಾನೆ.

ಇದನ್ನೂ ಓದಿ: ಅಂದು Team India ವಿಶ್ವಕಪ್ ಗೆಲ್ಲುತ್ತಿದ್ದಂತೆ ವಕೀಲರ ಪುತ್ರಿಯನ್ನೇ ಪಟಾಯಿಸಿ ಮದುವೆಯಾಗಿದ್ದ ಈ ಆರಂಭಿಕ ಆಟಗಾರ!

ಟೀಮ್ ಇಂಡಿಯಾದಿಂದ ಕೈಬಿಟ್ಟ ನಂತರ, ಈಗ ಈ ಆಟಗಾರ ಐಪಿಎಲ್ 2023 ರಲ್ಲೂ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾನೆ. ಭಾರತದ ಈ ಆಟಗಾರನು ಐಪಿಎಲ್ 2023 ರಲ್ಲಿ ಪಡೆಯುತ್ತಿರುವ ಸುವರ್ಣಾವಕಾಶಗಳನ್ನು ಕೆಟ್ಟದಾಗಿ ವ್ಯರ್ಥ ಮಾಡುತ್ತಿದ್ದಾನೆ. ಇದೇ ಕಾರಣದಿಂದ ಈ ಆಟಗಾರನ ವೃತ್ತಿಜೀವನವು ಕೊನೆಗೊಳ್ಳುವ ಅಂಚಿನಲ್ಲಿದೆ.

ನಾವಿಂದು ಮಾತನಾಡುತ್ತಿರುವುದು ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಬಗ್ಗೆ. ಇವರು ಐಪಿಎಲ್ 2023 ರ ನಂತರ ನಿವೃತ್ತಿ ಘೋಷಿಸಿದರೂ ಸಹ ಆಶ್ಚರ್ಯವೇನಿಲ್ಲ. ಇದೇ ರೀತಿ ಕಳಪೆ ಪ್ರದರ್ಶನ ಮುಂದುವರೆದರೆ, ಈ ಸೀಸನ್ ಹರ್ಷಲ್ ಪಟೇಲ್ ಅವರ ವೃತ್ತಿ ಜೀವನದ ಕೊನೆಯ ಐಪಿಎಲ್ ಸೀಸನ್ ಎಂದು ಹೇಳಬಹುದು.

ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಈಗಾಗಲೇ ಕೈಬಿಡಲಾಗಿದೆ. IPL 2023 ರ ಋತುವನ್ನು ಹರ್ಷಲ್ ಪಟೇಲ್‌ಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿತ್ತು, ಆದರೆ ಹರ್ಷಲ್ IPL 2023 ರ ಸೀಸನ್ ನಲ್ಲಿ 32.33 ರ ಕಳಪೆ ಬೌಲಿಂಗ್ ಸರಾಸರಿ ಮತ್ತು 9.95 ರ ಎಕಾನಮಿ ರೇಟ್ ನಲ್ಲಿ 388 ರನ್ ಗಳಿಸಿದ್ದಾರೆ. ಹರ್ಷಲ್ ಪಟೇಲ್ 10 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿರಬಹುದು, ಆದರೆ ಅದಕ್ಕಾಗಿ ಅವರು ಅತೀ ಹೆಚ್ಚು ರನ್ ಗಳನ್ನು ನೀರಿನಂತೆ ಚೆಲ್ಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್‌ ನಲ್ಲಿ ಹರ್ಷಲ್ ಪಟೇಲ್ ದುರ್ಬಲ ಎಂದು ಸಾಬೀತುಪಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ ಸಿ ಬಿ ತಂಡ ಮುಂದಿನ ವರ್ಷ ಅವರನ್ನು ತಂಡದಿಂದ ರಿಲೀಸ್  ಮಾಡಬಹುದು. ಇನ್ನು ಟೀಂ ಇಂಡಿಯಾದ ವಿಚಾರಕ್ಕೆ ಬಂದರೆ, ಮರಳುವುದು ಈಗ ಬಹುತೇಕ ಅಸಾಧ್ಯವಾಗಿದೆ.

ಟೀಂ ಇಂಡಿಯಾ ಪರ ಹರ್ಷಲ್ ಪಟೇಲ್ ಇದುವರೆಗೆ 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ 29 ವಿಕೆಟ್ ಪಡೆದಿದ್ದಾರೆ. ಹರ್ಷಲ್ ಪಟೇಲ್ ತಮ್ಮ ಕೊನೆಯ 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಬಾರಿ 40ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ದೌರ್ಬಲ್ಯದಿಂದಾಗಿ ಹರ್ಷಲ್ ಪಟೇಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹೆಣಗಾಡುವಂತಾಗಿದೆ.

ಆರ್ ಸಿ ಬಿ ವಿರುದ್ಧ ಮುಂಬೈಗೆ ಗೆಲುವು!

ಸೂರ್ಯಕುಮಾರ್ ಯಾದವ್ ಮತ್ತು ನೆಹಾಲ್ ವಧೇರಾ ಅವರ ಅರ್ಧಶತಕಗಳು ಮತ್ತು ಇಬ್ಬರ ನಡುವಿನ ಮೂರನೇ ವಿಕೆಟ್ ಶತಕದ ಜೊತೆಯಾಟದೊಂದಿಗೆ, ಮುಂಬೈ ಇಂಡಿಯನ್ಸ್ ಮಂಗಳವಾರ ಐಪಿಎಲ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆರು ವಿಕೆಟ್‌ ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಆರ್‌ ಸಿ ಬಿ ನೀಡಿದ್ದ 200 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಸೂರ್ಯಕುಮಾರ್ (35 ಎಸೆತಗಳಲ್ಲಿ 83, 7 ಬೌಂಡರಿ, 6 ಸಿಕ್ಸರ್) ಮತ್ತು ವಧೇರಾ (34 ಎಸೆತಗಳಲ್ಲಿ 52, 4 ಬೌಂಡರಿ, 3 ಸಿಕ್ಸರ್) ಜೊತೆಯಾಟದ ಸಹಾಯದಿಂದ ಭರ್ಜರಿ ಗೆಲುವು ಸಾಧಿಸಿತು, ಇವರು 66 ಎಸೆತಗಳಲ್ಲಿ 140 ರನ್ ಗಳಿಸುವ ಮೂಲಕ 21 ಎಸೆತಗಳು ಬಾಕಿ ಇರುವಂತೆಯೇ ಆರ್‌ ಸಿ ಬಿಗೆ ಸೋಲಿನ ರುಚಿ ತೋರಿಸಿದ್ದರು. ಇನ್ನುಳಿದಂತೆ ಆರಂಭಿಕ ಆಟಗಾರ ಇಶಾನ್ ಕಿಶನ್ (21 ಎಸೆತಗಳಲ್ಲಿ 42 ರನ್, ನಾಲ್ಕು ಬೌಂಡರಿ, 4 ಸಿಕ್ಸರ್) ಕೂಡ ಚುರುಕಿನ ಇನಿಂಗ್ಸ್ ಆಡಿದರು.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೆಎಲ್ ರಾಹುಲ್ ಬದಲಿಗೆ ಇಶಾನ್ ಕಿಶನ್ ಗೆ ಸ್ಥಾನ

ಮೂರನೇ ಸ್ಥಾನಕ್ಕೆ ತಲುಪಿದ ಮುಂಬೈ ಇಂಡಿಯನ್ಸ್:

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ 12 ಅಂಕ ಗಳಿಸಿದ್ದು, ಮೂರನೇ ಸ್ಥಾನಕ್ಕೆ ತಲುಪಿದೆ. ಆರ್‌ ಸಿ ಬಿ ತಂಡ 11 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇ-ಆಫ್‌ ಗೆ ಪ್ರವೇಶಿಸುವ ಹಾದಿ ಕಷ್ಟಕರವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News