RCB ಕೈಬಿಟ್ಟ ಈ ಆಟಗಾರನನ್ನು 11.75 ಕೋಟಿಗೆ ಖರೀದಿಸಿದ ಪಂಜಾಬ್: ಈತನಿರ್ತ್ತಿದ್ದರೆ ‘ಈ ಸಲ ಕಪ್ ನಮ್ದೆ’ ಆಗ್ತಿತ್ತು ಎಂದ ಫ್ಯಾನ್ಸ್

IPL 2024 Auction: ಹರ್ಷಲ್ ಪಟೇಲ್ ಕಳೆದ ವರ್ಷ RCB ಪರ ಆಡಿದ್ದರು. ಆದರೆ ಮುಂಬರುವ ಋತುವಿನ ಮೊದಲು ಅವರನ್ನು RCB ಬಿಡುಗಡೆ ಮಾಡಿದೆ. ಏಕೆಂದರೆ 2023 ರ ಋತುವಿನಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು

Written by - Bhavishya Shetty | Last Updated : Dec 19, 2023, 06:09 PM IST
    • ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಮೇಲೆ ಹಣದ ಸುರಿಮಳೆ
    • ಪಂಜಾಬ್ ಕಿಂಗ್ಸ್ ಹರ್ಷಲ್ ಅವರನ್ನು 11.75 ಕೋಟಿ ರೂ.ಗೆ ಖರೀದಿಸಿತು
    • ಹರ್ಷಲ್ ಪಟೇಲ್ ಕಳೆದ ವರ್ಷ RCB ಪರ ಆಡಿದ್ದರು
RCB ಕೈಬಿಟ್ಟ ಈ ಆಟಗಾರನನ್ನು 11.75 ಕೋಟಿಗೆ ಖರೀದಿಸಿದ ಪಂಜಾಬ್: ಈತನಿರ್ತ್ತಿದ್ದರೆ ‘ಈ ಸಲ ಕಪ್ ನಮ್ದೆ’ ಆಗ್ತಿತ್ತು ಎಂದ ಫ್ಯಾನ್ಸ್ title=
Harshal Patel

IPL 2024 Auction: ಮುಂಬರುವ IPL ಋತುವಿನ ಹರಾಜು ದುಬೈನಲ್ಲಿ ನಡೆಯುತ್ತಿದೆ. ಈ ಹರಾಜಿನಲ್ಲಿ ಒಟ್ಟು 333 ಆಟಗಾರರನ್ನು ಬಿಡ್ ಮಾಡಲಾಗುತ್ತಿದ್ದು, ಇದರಲ್ಲಿ 214 ಭಾರತೀಯ ಮತ್ತು 119 ವಿದೇಶಿ ಆಟಗಾರರು ಇದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯ ಹರಾಜಿನಲ್ಲೂ ಆಟಗಾರರ ಮೇಲೆ ಭಾರಿ ಹಣದ ಸುರಿಮಳೆಯಾಗುತ್ತಿದೆ.

ಇದನ್ನೂ ಓದಿ: ಪೋಸ್ಟ್ ಶೇರ್ ಮಾಡಿ “ಗುಡ್ ನ್ಯೂಸ್” ಎಂದ ಅನುಷ್ಕಾ: 2ನೇ ಮಗುವಿಗೆ ತಾಯಿಯಾಗ್ತಿರೋದು ಕನ್ಫರ್ಮ್!

ಇನ್ನು ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಮೇಲೂ ಹಣದ ಸುರಿಮಳೆಯಾಗಿದೆ. ಈ ಮೂಲಕ ಭಾರತದ ಐಪಿಎಲ್ 2024 ರ ಅತ್ಯಂತ ದುಬಾರಿ ಆಟಗಾರರಾದರು. ಅಂದಹಾಗೆ ಪಂಜಾಬ್ ಕಿಂಗ್ಸ್ ಹರ್ಷಲ್ ಅವರನ್ನು 11.75 ಕೋಟಿ ರೂ.ಗೆ ಖರೀದಿಸಿತು.

ಹರ್ಷಲ್ ಪಟೇಲ್ ಕಳೆದ ವರ್ಷ RCB ಪರ ಆಡಿದ್ದರು. ಆದರೆ ಮುಂಬರುವ ಋತುವಿನ ಮೊದಲು ಅವರನ್ನು RCB ಬಿಡುಗಡೆ ಮಾಡಿದೆ. ಏಕೆಂದರೆ 2023 ರ ಋತುವಿನಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಇಡೀ ಋತುವಿನಲ್ಲಿ 14 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

ಆದರೆ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದಕ್ಕೂ ಮುನ್ನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಹೀಗಿರುವಾಗ ಅವರಿಗೆ ಒಂದು ಅವಕಾಶ ನೀಡಿದ್ದರೆ, ಈ ಸಲ ಕಪ್ ಗೆಲ್ಲಲು ಆರ್ ಸಿಬಿಗೆ ಸಹಾಯ ಮಾಡುತ್ತಿದ್ದರು ಎಂಬುದು ಫ್ಯಾನ್ಸ್ ಅಭಿಪ್ರಾಯ.

  • ಹರ್ಷಲ್ ಮೂಲ ಬೆಲೆ- 2 ಕೋಟಿ
  • ಖರೀದಿಸಿದ ಮೊತ್ತ - 11.75 ಕೋಟಿ
  • ಖರೀದಿಸಿದ ತಂಡ - ಪಂಜಾಬ್ ಕಿಂಗ್ಸ್

ಇದನ್ನೂ ಓದಿ: “ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಸತ್ಯ ಬಾಯ್ಬಿಟ್ಟ ವಿನಯ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News