SRH CEO: RCB ಯ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಫುಲ್ ಸೈಲೆಂಟ್!

‌Kavya Maran Reaction During Match: ಸತತ ಸೋಲಿನಿಂದ ಕಂಗೆಟ್ಟಿದ್ದ RCB ನಿನ್ನೆಯಷ್ಟೇ ಹೈದರಾಬಾದ್‌ ವಿರುದ್ಧ ಗೆದ್ದು ಬೀಗಿದೆ.. ಪಂದ್ಯದ ವೇಳೆ ಸನ್‌ರೈಸರ್ಸ್‌ ತಂಡದ ಆಟಗಾರರು ಔಟಾಗುತ್ತಿದ್ದಂತೆ ಎಸ್‌ಆರ್‌ಎಚ್‌ ಸಿಇಒ ಕಾವ್ಯ ಮಾರನ್‌ ಫುಲ್‌ ಶಾಕ್‌ ಆಗಿದ್ದಾರೆ..   

Written by - Savita M B | Last Updated : Apr 26, 2024, 10:42 AM IST
  • ಹೈದರಾಬಾದ್ ಸನ್ ರೈಸರ್ಸ್ ತಂಡದ ಓನರ್ ಕಾವ್ಯಾ ಮಾರನ್ ಅವರ ರಿಯಾಕ್ಷನ್‌ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.
  • ಎಕ್ಸ್ ಪೇಜ್ ನಲ್ಲಿ ಕಾವ್ಯಾ ಮಾರನ್ ಪ್ರತಿಕ್ರಿಯೆಗೆ ಹಲವರು ಟ್ರೋಲ್ ಮಾಡುತ್ತಿದ್ದಾರೆ.
SRH CEO: RCB ಯ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಫುಲ್ ಸೈಲೆಂಟ್!  title=

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ 41 ನೇ ಲೀಗ್ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಿತು. ಇದರಲ್ಲಿ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಸೇರಿಸಿತು. ಇದರಲ್ಲಿ ವಿರಾಟ್ ಕೊಹ್ಲಿ ಗರಿಷ್ಠ 51 ರನ್ ಮತ್ತು ರಜತ್ ಪಾಟಿದಾರ್ 50 ರನ್ ಗಳಿಸಿದರು.

ನಂತರ 207 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್‌ನಲ್ಲಿ ಹೆಡ್ ಒಂದು ರನ್‌ಗೆ ಔಟಾದರು. ನಂತರ ಅಭಿಷೇಕ್ ಶರ್ಮಾ 31 ರನ್, ಏಡೆನ್ ಮಾರ್ಕ್ರಾಮ್ 7 ರನ್ ಮತ್ತು ಹೆನ್ರಿಚ್ ಕ್ಲಾಸೆನ್ 7 ರನ್ ಗಳಿಸಿ ಔಟಾದರು. ಈ ಮೂಲಕ ಸನ್ ರೈಸರ್ಸ್ 6 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತು. ನಿತೀಶ್ ಕುಮಾರ್ ರೆಡ್ಡಿ 13, ಅಬ್ದುಲ್ ಸಮದ್ ತಲಾ 10 ರನ್ ಗಳಿಸಿ ಔಟಾದರು. ಇದಾದ ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ ಆಟ ಆರಂಭಿಸಿದರು. 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 31 ರನ್ ಗಳಿಸಿ ಔಟಾದರು.

ಇದನ್ನೂ ಓದಿ-IPL 2024: ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ಐದು ತಂಡಗಳಿವು!!

ಭುವನೇಶ್ವರ್ ಕುಮಾರ್ 13 ರನ್ ಗಳಿಸಿ ಔಟಾದರೆ, ಶಹಬಾಜ್ ಅಹ್ಮದ್ 37 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಜಯದೇವ್ 8 ರನ್ ಗಳಿಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 171 ರನ್ ಗಳಿಸಿ 35 ರನ್ ಗಳಿಂದ ಸೋತಿತು. ತವರಿನಲ್ಲಿ ಇಲ್ಲಿಯವರೆಗೆ ಹೈದರಾಬಾದ್ ಸೋಲನುಭವಿಸದಿದ್ದರೂ, ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ಇದುವರೆಗೆ ಪ್ರತಿ ಪಂದ್ಯದಲ್ಲೂ ಸಿಕ್ಸರ್, ಬೌಂಡರಿ ಸಿಡಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಈ ಪಂದ್ಯದಲ್ಲಿ ಸತತ ವಿಕೆಟ್ ಕಳೆದುಕೊಂಡು ಮುಗ್ಗರಿಸಿದರು. ಅಲ್ಲದೆ, ತಮ್ಮ ಆಕ್ಷನ್‌ಗೆ ಹೆಸರಾದ ಹೆಡ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅಲ್ಪ ರನ್‌ಗಳಿಗೆ ಔಟಾದರು. ಇದನ್ನು ನೋಡಿದ ತಂಡದ ಒಡತಿ ಕಾವ್ಯಾ ಮಾರನ್ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ ಪೇಜ್ ನಲ್ಲಿ ಕಾವ್ಯಾ ಮಾರನ್ ಪ್ರತಿಕ್ರಿಯೆಗೆ ಹಲವರು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ-KL Rahul: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ತಂದೆ-ತಾಯಿ ಯಾರು? ‌ಏನ್‌ ಕೆಲಸ ಮಾಡ್ತಾರೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News