ಆರೋಗ್ಯಕ್ಕೆ ಮಾವಿನ ಹಣ್ಣು ಮಾತ್ರವಲ್ಲ ಮಾವಿನ ವಾಟೆಯೂ ತುಂಬಾ ಪ್ರಯೋಜನಕಾರಿ

                                    

Mango Seed Benefits: ಹಣ್ಣುಗಳ ರಾಜ ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಸಾಮಾನ್ಯವಾಗಿ ನಾವು ಮಾವಿನ ಹಣ್ಣನ್ನು ತಿಂದು ಅದರ ವಾಟೆಯನ್ನು ಎಂದರೆ ಬೀಜವನ್ನು ಎಸೆಯುತ್ತೇವೆ. ಆದರೆ, ಉತ್ತಮ ಆರೋಗ್ಯಕ್ಕೆ ಮಾವಿನ ವಾಟೆಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಎಂದಿಗೂ ಕೂಡ ಮಾವಿನ ಬೀಜವನ್ನು ಎಸೆಯುವುದಿಲ್ಲ. ಹಾಗಿದ್ದರೆ, ಮಾವಿನ ವಾಟೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ರುಚಿಯಲ್ಲಿ ಸಿಹಿ ಮಾತ್ರವಲ್ಲ, ಅದು ಆರೋಗ್ಯಕ್ಕೂ ಕೂಡ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ವಾಟೆ ಎಂದರೆ ಅದರ ಬೀಜವೂ ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಮಾವಿನ ಬೀಜವನ್ನು ಪುಡಿ ಅಥವಾ ಪೇಸ್ಟ್ ರೂಪದಲ್ಲಿ ಸೇವಿಸಬಹುದು. ಇದರ ಪ್ರಯೋಜನಗಳೆಂದರೆ... 

2 /6

ಮಾವಿನ ಬೀಜವನ್ನು ಪುಡಿ ಮಾಡಿ ನಿತ್ಯ ಸ್ವಲ್ಪ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.

3 /6

ಮಾವಿನ ವಾಟೆಯನ್ನು ಅತ್ಯುತ್ತಮ ಮಾಯಿಶ್ಚರೈಸರ್ ಎನ್ನಲಾಗುತ್ತದೆ. ಬೀಜದಿಂದ ಪಡೆದ ಜಿಡ್ಡಿನ ಅಂಶವು ಚರ್ಮಕ್ಕೆ ಉತ್ತಮ ಲೋಷನ್‌ ಆಗಿ ಕಾರ್ಯನಿರ್ವಹಿಸುತ್ತದೆ. 

4 /6

ಮಾವಿನ ಬೀಜಗಳು ಅಗತ್ಯವಾದ ಕೊಬ್ಬಿನಾಮ್ಲಗಳು, ಖನಿಜಗಳು ಮತ್ತು ಜೀವಸತ್ವಗಳ ಸಮೃದ್ಧ ಮೂಲಗಳಾಗಿವೆ. ಇದರ ಹೊರ ಪದರವನ್ನು ತೆಗೆದು ಅದನ್ನು ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಇಲ್ಲವೇ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ ಕನಿಷ್ಠ ಒಂದು ವಾರದವರೆಗೆ ಬಿಸಿಲಿನಲ್ಲಿ ಇರಿಸಿ. ನಂತರ ಇದನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. 

5 /6

ಮಾವಿನ ವಾಟೆಯ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. 

6 /6

ಮಾವಿನ ವಾಟೆಯಲ್ಲಿ ಫೀನಾಲ್ ಮತ್ತು ಫೀನಾಲಿಕ್ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಹಾಗಾಗಿ, ಅಸಿಡಿದಿ ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಇದನ್ನು ಅತ್ಯುತ್ತಮ ಮನೆಮದ್ದು ಎಂದು ಹೇಳಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.