ವಿಶ್ವಕಪ್’ನಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಪತ್ನಿ ಭಾರತ ಮೂಲದ ಖ್ಯಾತ ವೈದ್ಯೆ! ಈ ಸುಂದರಿ ಯಾರೆಂದು ತಿಳಿಯಿತೇ?

Meet Glenn Maxwell wife Vini Raman: 2023ರ ಏಕದಿನ ವಿಶ್ವಕಪ್‌’ನ 39ನೇ ಪಂದ್ಯದಲ್ಲಿ 201 ರನ್‌’ಗಳ ಸ್ಫೋಟಕ ಇನ್ನಿಂಗ್ಸ್‌ ಆಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಜಗತ್ತೇ ಕೊಂಡಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಆಸ್ಟ್ರೇಲಿಯ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 291 ರನ್‌’ಗಳ ಗುರಿ ಪಡೆದಿತ್ತು. ಗುರಿ ಬೆನ್ನತ್ತಲು ಬಂದ ಕಾಂಗರೂ ತಂಡ ಆರಂಭದಿಂದಲೇ ಎಡವಿದ್ದು 20 ಓವರ್’ಗಳಲ್ಲಿ 100 ರನ್ ಗಳ ಅಂತರದಲ್ಲಿ 7 ವಿಕೆಟ್ ಪತನಗೊಂಡಿತ್ತು.

2 /7

ಇದಾದ ನಂತರ ಮ್ಯಾಕ್ಸ್‌’ವೆಲ್ ಇನ್ನಿಂಗ್ಸ್ ಕೈಗೆತ್ತಿಕೊಂಡು 201 ರನ್‌’ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌’ನಿಂದ ಮ್ಯಾಕ್ಸ್‌ವೆಲ್ ವಿಶ್ವಕಪ್‌’ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

3 /7

ಮ್ಯಾಕ್ಸ್‌ವೆಲ್ ಪತ್ನಿ ವಿನಿ ರಾಮನ್ ತಮ್ಮ ಪತಿಯ ಆಟ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮ್ಯಾಕ್ಸ್‌’ವೆಲ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.

4 /7

ವಿನಿ ರಾಮನ್ ಭಾರತೀಯ ಮೂಲದ ಮಹಿಳೆ. ತಮಿಳುನಾಡಿನ ಜೊತೆ ಸಂಬಂಧ ಹೊಂದಿದ್ದರೂ ಸಹ ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿಯೇ.

5 /7

ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ ಅವರು, ವೈದ್ಯೆಯಾಗಿ ಕೆಲಸ ಮಾಡಿದ್ದರು. ಇನ್ನು ಮ್ಯಾಕ್ಸ್’ವೆಲ್ ಅವರನ್ನು ವಿವಾಹವಾದ ವಿನಿ ಇದೀಗ ಕಂದಮ್ಮನಿಗೆ ಜನ್ಮ ನೀಡಿದ್ದಾರೆ.

6 /7

ಇನ್ನು ಮ್ಯಾಕ್ಸ್’ವೆಲ್ ಮತ್ತು ವಿನಿ ಅವರ ವಿವಾಹವು ಮೊದಲು ಕ್ರಿಶ್ಚಿಯನ್ ಧರ್ಮದ ಪ್ರಕಾರ ನಡೆದಿತ್ತು. ಆ ಬಳಿಕ ತಮಿಳು ಸಂಪ್ರದಾಯದಂತೆ ವಿವಾಹವಾದರು.

7 /7

2013ರಲ್ಲಿ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಮೊದಲು ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ವಿನಿ ಪ್ರೇಮದಲ್ಲಿ ಬಿದ್ದ ಮ್ಯಾಕ್ಸ್’ವೆಲ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ನಂತರ ಇಬ್ಬರೂ ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ವಿವಾಹವಾಗಿದ್ದಾರೆ.