ನರೇಂದ್ರ ಮೋದಿ ಆಕಾಶ; ಆಕಾಶಕ್ಕೆ ಉಗುಳೋ ಕೃತ್ಯ ಮಾಡ್ತಿದ್ದಾರೆ ಕಾಂಗ್ರೆಸ್ಸಿಗರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೇ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಹೇಳಿದರು.

Written by - Prashobh Devanahalli | Last Updated : May 5, 2024, 08:28 PM IST
    • ಕಾಂಗ್ರೆಸ್ಸಿಗರು ಆಕಾಶಕ್ಕೆ ಉಗುಳೋ ಕೃತ್ಯ ಮಾಡುತ್ತಿದ್ದಾರೆ
    • ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ
    • ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ
ನರೇಂದ್ರ ಮೋದಿ ಆಕಾಶ; ಆಕಾಶಕ್ಕೆ ಉಗುಳೋ ಕೃತ್ಯ ಮಾಡ್ತಿದ್ದಾರೆ ಕಾಂಗ್ರೆಸ್ಸಿಗರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ title=
File Photo

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಆಕಾಶ ಇದ್ದ ಹಾಗೆ. ಕಾಂಗ್ರೆಸ್ಸಿಗರು ಆಕಾಶಕ್ಕೆ ಉಗುಳೋ ಕೃತ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದರು.

ಇದನ್ನೂ ಓದಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ವಿರೋಧಿ ಅಲೆ ಎದ್ದಿದೆ: ಸಿದ್ದರಾಮಯ್ಯ

ಕಲಘಟಗಿಯಲ್ಲಿ ಭಾನುವಾರ ಬೃಹತ್ ರೋಡ್ ಶೋ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಅಬ್ಬರಿಸಿದ ಜೋಶಿ, ಆಕಾಶಕ್ಕೆ ಮುಖ ಮಾಡಿ ಉಗುಳಿದರೆ ಅದು ತಮ್ಮ ಮುಖಕ್ಕೇ ಸಿಡಿಯುತ್ತದೆ ಎಂಬುದನ್ನು ಅರಿತುಕೊಳ್ಳಲಿ ಎಂದು ಹೇಳಿದರು.

ಸಂತೋಷ ಲಾಡ್ ಮೋದಿಗೆ ಬೈದರೆ ತಾವು ದೊಡ್ಡ ವ್ಯಕ್ತಿ ಆಗಬಹುದು ಎಂದುಕೊಂಡಿದ್ದಾರೆ. ಹಾಗಾಗಿ ಲಾಡ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ರೂ ಮೋದಿ ವಿರುದ್ಧ ಗುಡುಗುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಧೂಳಿಪಟ: ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. 2014ರಲ್ಲಿ 44 ಕ್ಷೇತ್ರ ಹಾಗೂ 2019ರಲ್ಲಿ 52 ಸೀಟುಗಳನ್ನಷ್ಟೇ ಗೆದ್ದುಕೊಂಡ ರಾಹುಲ್ ಗಾಂಧಿಗೆ ಅಧಿಕೃತ ವಿರೋಧ ಪಕ್ಷವಾಗಲೂ ಶಕ್ತವಾಗಲಿಲ್ಲ ಎಂದು ಹೇಳಿದರು.

ಆಸ್ತಿ ಸರ್ವೆ ಏಕೆ:? ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಸರ್ವೇ ಪ್ರಕಟಿಸಿದೆ. ಅರ್ಧದಷ್ಟು ಆಸ್ತಿಯನ್ನು ವಶಕ್ಕೆ ಪಡೆದು ಹೆಚ್ಚು ಮಕ್ಕಳಿರುವ ಮುಸ್ಲಿಂರಿಗೆ ಹಂಚಲಿದೆ. ಈಗಲೇ ಎಚ್ಚರ ವಹಿಸಿ ಎಂದು ಹೇಳಿದರು.

ಇದನ್ನೂ ಓದಿ: "ಭಾರತ 2025ರ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಬರದೇ ಹೋದರೆ...", ಪಾಕ್ ಆಟಗಾರನ ಧಮ್ಕಿ!

 2014ರಿಂದ ಮೋದಿ ನೇತೃತ್ವದಲ್ಲಿ ಆದ ದೇಶದ ಅಭಿವೃದ್ಧಿಯನ್ನು ಜಗತ್ತೇ ಗಮನಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ  ಅಭಿವೃದ್ಧಿ ಏನೆಂಬುದೂ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News