White Mango : ಬಿಳಿ ಮಾವಿನ ಹಣ್ಣು ನೋಡಿದ್ದೀರಾ? ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು

White Mango Benefits: ಬಿಳಿ ಮಾವಿನ ಹಣ್ಣನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರಲ್ಲಿರುವ ಅಂಶಗಳು ತೀವ್ರವಾದ ದೀರ್ಘಕಾಲದ ಕಾಯಿಲೆಗಳನ್ನು ಸಹ ನಿವಾರಿಸುತ್ತದೆ.

Written by - Chetana Devarmani | Last Updated : Jun 7, 2023, 08:46 PM IST
  • ನೀವು ಎಂದಾದರೂ ಬಿಳಿ ಮಾವಿನ ಹಣ್ಣು ನೋಡಿದ್ದೀರಾ?
  • ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸುತ್ತದೆ ಈ ಮಾವು
  • ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು
White Mango : ಬಿಳಿ ಮಾವಿನ ಹಣ್ಣು ನೋಡಿದ್ದೀರಾ? ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು    title=
White Mango

White Mango Benefits: ಹಣ್ಣುಗಳ ರಾಜ ಮಾವು. ಬೇಸಿಗೆಯಲ್ಲಿ ಇದರ ಸೀಸನ್‌ ಶುರುವಾಗುತ್ತೆ. ಅಬ್ಬಾ.. ಬಾಯಲ್ಲಿ ನೀರೂರಿಸುವ ಇದರ ರುಚಿಗೆ ಸರಿಸಾಟಿಯಿಲ್ಲ. ಅನೇಕ ಜನರು ಇಷ್ಟಪಟ್ಟು ಮಾವಿನ ಹಣ್ಣನ್ನು ತಿನ್ನುತ್ತಾರೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ವೆರೈಟಿ ಮಾವಿನ ತಳಿಗಳು ಸಿಗುತ್ತವೆ. ಹಲವು ಬಗೆಯ ಮಾವಿನ ಹಣ್ಣುಗಳ ರುಚಿ ಸವಿಯವಹುದು. ಸಾಮಾನ್ಯವಾಗಿ ಮಾವಿನ ಹಣ್ಣಿನ ಬಣ್ಣ ಗಾಢ ಹಳದಿ, ಕೊಂಚ ಗುಲಾಬಿ ಮೋಡಿ ಅಥವಾ ಹಸಿರು ಬಣ್ಣ ಮಿಶ್ರಿತವಾಗಿರುವುದನ್ನು ನೋಡಿದ್ದೀರಿ. ನೀವು ಎಂದಾದರೂ ಬಿಳಿ ಬಣ್ಣದ ಮಾವಿನ ಹಣ್ಣನ್ನು ನೋಡಿದ್ದೀರಾ? ಭಾರತೀಯ ಮಾರುಕಟ್ಟೆಯಲ್ಲಿ ಬಿಳಿ ಮಾವಿನ ಹಣ್ಣುಗಳು ಸಹ ಲಭ್ಯವಿದೆ. 

ಭಾರತೀಯ ಮಾರುಕಟ್ಟೆಯಲ್ಲಿ ಬಿಳಿ ಮಾವಿನ ಹಣ್ಣುಗಳು ಸಹ ಲಭ್ಯವಿದೆ. ಇವುಗಳನ್ನು ತಿಂದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯನ್ನು ಸಹ ತೊಲಗಿಸುವ ಶಕ್ತಿ ಈ ಬಿಳಿ ಮಾವಿನಲ್ಲಿ ಇರುತ್ತದೆಯಂತೆ. ಬಿಳಿ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ?

ಬಿಳಿ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು:

1. ಫ್ರೀ ರಾಡಿಕಲ್ಸ್, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಪ್ರತಿದಿನ ಬಿಳಿ ಮಾವಿನ ಹಣ್ಣು ತಿನ್ನುವುದರಿಂದ ಸುಲಭವಾಗಿ ಪರಿಹಾರ ಪಡೆಯಬಹುದು. ಬಿಳಿ ಮಾವಿನ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುತ್ತವೆ. ಹಾಗಾಗಿ ದೀರ್ಘಕಾಲದ ಕಾಯಿಲೆಗಳಿಗೂ ಸುಲಭವಾಗಿ ಪರಿಹಾರ ದೊರೆಯುತ್ತದೆ ಎನ್ನುತ್ತಾರೆ ತಜ್ಞರು. 

2. ಬಿಳಿ ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ, ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಜಲಸಂಚಯನ ಸಮಸ್ಯೆಯಿದ್ದರೆ, ಬಿಳಿ ಮಾವಿನ ಹಣ್ಣಿನಿಂದ ಸುಲಭವಾಗಿ ನಿವಾರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

3. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಳಿ ಮಾವಿನಕಾಯಿಯನ್ನು ಸೇವಿಸಬೇಕು. ಇದರಲ್ಲಿ ನಾರಿನಂಶ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

4. ಬಿಳಿ ಮಾವಿನ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಇರುವ ಕಾರಣ ಕಣ್ಣುಗಳು ಕೂಡ ಆರೋಗ್ಯವಾಗಿರುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.  

ಇದನ್ನೂ ಓದಿ: ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿಯೇ ಇರುವ ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು

5. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಅಸ್ಥಿಸಂಧಿವಾತದ ಲಕ್ಷಣಗಳನ್ನು ಸಹ ನಿವಾರಿಸುತ್ತೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳನ್ನು ಸಹ ತಡೆಗಟ್ಟಬಹುದು. 

6. ಬಿಳಿ ಮಾವಿನ ಹಣ್ಣನ್ನು ತಿನ್ನುವುದರಿಂದ ಶ್ವಾಸಕೋಶದ ಸಾಮರ್ಥ್ಯ ಜಾಸ್ತಿಯಾಗುವುದು. ಇದರಿಂದ ಉಸಿರಾಟದ ತೊಂದರೆ ಇದ್ದವರು ಬಿಳಿ ಮಾವಿನ ಹಣ್ಣನ್ನು ಸೇವಿಸಬೇಕು.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News