ನಿತ್ಯ ದಾಳಿಂಬೆ ಸೇವಿಸಿದರೆ ಕೊಲೆಸ್ಟ್ರಾಲ್ , ಡಯಾಬಿಟೀಸ್ ನಂಥಹ ರೋಗಗಳಿಂದ ಪಡೆಯಬಹುದು ಮುಕ್ತಿ

ದಾಳಿಂಬೆಯನ್ನು ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ಕಾಳುಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಪ್ರತಿದಿನ ಕುಡಿಯಬಹುದು. ಹೀಗೆ ಮಾಡುವುದರಿಂದ ಹೃದಯವನ್ನು  ಆರೋಗ್ಯಕರವಾಗಿರಿಸಿಕೊಳ್ಳಬಹುದು. 

Written by - Ranjitha R K | Last Updated : Feb 2, 2022, 12:14 PM IST
  • ದಾಳಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿ
  • ಪ್ರತಿದಿನ ದಾಳಿಂಬೆ ರಸವನ್ನು ಕುಡಿದರೆ ಸಿಗಲಿದೆ ಪ್ರಯೋಜನ
  • ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ
ನಿತ್ಯ ದಾಳಿಂಬೆ ಸೇವಿಸಿದರೆ ಕೊಲೆಸ್ಟ್ರಾಲ್ , ಡಯಾಬಿಟೀಸ್ ನಂಥಹ ರೋಗಗಳಿಂದ ಪಡೆಯಬಹುದು ಮುಕ್ತಿ  title=
ಈ ಸಮಸ್ಯೆಗಳಿದ್ದರೆ ನಿತ್ಯ ಸೇವಿಸಿ ದಾಳಿಂಬೆ (file photo)

ನವದೆಹಲಿ : ದಾಳಿಂಬೆಯು Antioxidant ಮತ್ತು ಪಾಲಿಫಿನಾಲ್‌ಗಳ ಭಂಡಾರವಾಗಿದೆ.  ಆಕ್ಸಿಡೇಟಿವ್ ಒತ್ತಡವನ್ನು (Oxidative stress) ಕಡಿಮೆ ಮಾಡುವ ಮೂಲಕ ಮತ್ತು ಫ್ರೀ ರಾಡಿಕಲ್‌ಗಳ (Free Radical) ಪರಿಣಾಮಗಳನ್ನು ತೆಗೆದುಹಾಕುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಪ್ರತಿದಿನ ಸೇವಿಸಿ ದಾಳಿಂಬೆ ರಸ : 
ದಾಳಿಂಬೆಯನ್ನು (Pomegranate) ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ, ಅದರ ಕಾಳುಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ ಪ್ರತಿದಿನ ಕುಡಿಯಬಹುದು. ಹೀಗೆ ಮಾಡುವುದರಿಂದ ಹೃದಯವನ್ನು  ಆರೋಗ್ಯಕರವಾಗಿರಿಸಿಕೊಳ್ಳಬಹುದು. 

ಇದನ್ನೂ ಓದಿ : ನೆನಪಿರಲಿ, ಕೇವಲ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ

ರಕ್ತದೊತ್ತಡ ನಿಯಂತ್ರಣ : 
ಇತ್ತೀಚಿನ ದಿನಗಳಲ್ಲಿ,  Hypertension ಮತ್ತು ಅಧಿಕ ರಕ್ತದೊತ್ತಡ (High Blood Pressure) ಯುವಕರಲ್ಲಿಯೇ ಕಾಣಿಸಿಕೊಳ್ಳುತ್ತದೆ. ಒಂದು ಗ್ಲಾಸ್ ದಾಳಿಂಬೆ ರಸವು, ಸಿಸ್ಟೊಲಿಕ್ ರಕ್ತದೊತ್ತಡವನ್ನು (Systolic Blood Pressure) ನಿಯಂತ್ರಿಸಿ, ಅಪಧಮನಿಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ :
ದಾಳಿಂಬೆ ರಸವು (Pomegranate Juice) LDL (Low Density Lipoprotein) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.  ಮತ್ತು HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.  ಮತ್ತು ಹೃದಯರಕ್ತನಾಳದ ಕಾಯಿಲೆಯ (Cardiovascular Disease) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ.

ಇದನ್ನೂ ಓದಿ : Fenugreek Benefits : ಮೆಂತ್ಯ ಬೀಜದ 6 ಆಯುರ್ವೇದ ಆರೋಗ್ಯ ಪ್ರಯೋಜನಗಳು : ಇಂದೇ ಸೇವಿಸಲು ಆರಂಭಿಸಿ!

ಮಧುಮೇಹದಿಂದ ದೂರವಿರಲು ದಾಳಿಂಬೆಯನ್ನು ಸೇವಿಸಿ :
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಮತ್ತು ಹೃದ್ರೋಗಗಳು (Heart Disease) ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಹೃದಯದ ಆರೋಗ್ಯವನ್ನು ಕಾಪಾಡಲು ದಾಳಿಂಬೆ ಜ್ಯೂಸ್ (Pomegranate Juice) ಕುಡಿಯುವುದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.  ಏಕೆಂದರೆ ದಾಳಿಂಬೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್ (Antioxidant) ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News