ರೋಹಿತ್ ಶರ್ಮಾ ಮುಂಬೈ ಬಿಟ್ಟು ಈ ತಂಡದಲ್ಲಿ ಆಡೋದು ಕನ್ಫರ್ಮ್! ಶಾಕಿಂಗ್ ಹೇಳಿಕೆ ನೀಡಿದ ಕೋಚ್

IPL 2024: ಐಪಿಎಲ್ 2025 ರಲ್ಲಿ ಮೆಗಾ ಹರಾಜು ನಡೆಯಲಿದೆ. ರೋಹಿತ್ ಶರ್ಮಾ ಮುಂಬೈ ತೊರೆದು ಹರಾಜಿಗೆ ಪ್ರವೇಶಿಸಿದರೆ, ಪ್ರತಿ ತಂಡವೂ ಅವರಿಗಾಗಿ ಪೈಪೋಟಿ ಮಾಡೋದು ಖಚಿತ. ಏಕೆಂದರೆ ಕಳೆದ 11 ವರ್ಷಗಳಲ್ಲಿ ಮುಂಬೈ ತಂಡದ ನಾಯಕರಾಗಿದ್ದಾಗ ಅವರು 5 ಬಾರಿ ಟ್ರೋಫಿ ಗೆದ್ದಿದ್ದಾರೆ.

Written by - Bhavishya Shetty | Last Updated : Apr 10, 2024, 09:06 PM IST
    • ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಪ್ರಶಸ್ತಿ ಜಯಿಸುವಂತೆ ಮಾಡಿದ್ದ ನಾಯಕ ರೋಹಿತ್ ಶರ್ಮಾ
    • ಲಕ್ನೋ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದಾರೆ
    • ಐಪಿಎಲ್ 2025 ರಲ್ಲಿ ಮೆಗಾ ಹರಾಜು ನಡೆಯಲಿದೆ
ರೋಹಿತ್ ಶರ್ಮಾ ಮುಂಬೈ ಬಿಟ್ಟು ಈ ತಂಡದಲ್ಲಿ ಆಡೋದು ಕನ್ಫರ್ಮ್! ಶಾಕಿಂಗ್ ಹೇಳಿಕೆ ನೀಡಿದ ಕೋಚ್ title=
Justin Langer-Rohit Sharma

IPL 2024: ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಪ್ರಶಸ್ತಿ ಜಯಿಸುವಂತೆ ಮಾಡಿದ್ದ ನಾಯಕ ರೋಹಿತ್ ಶರ್ಮಾ. ಆದರೆ ಐಪಿಎಲ್ 2024ರ ಆರಂಭಕ್ಕೂ ಮುನ್ನ, ಫ್ರಾಂಚೈಸಿ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದು, ಹಾರ್ದಿಕ್ ಪಾಂಡ್ಯಗೆ ಆ ಸ್ಥಾನವನ್ನು ಹಸ್ತಾಂತರಿಸಿತು.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡವು ಕೆಟ್ಟ ಆರಂಭವನ್ನು ಹೊಂದಿದ್ದರೂ ಸಹ, ಕಳೆದ ಪಂದ್ಯದಲ್ಲಿ ಗೆಲುವು ಕಂಡಿತ್ತು. ಇನ್ನು ಇದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಮುಂಬೈ ತಂಡ ತೊರೆದಿರುವ ಸುದ್ದಿ ಎಲ್ಲೆಡೆ ಹರಿದಾಡತೊಡಗಿತು. ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ಸೇರುತ್ತಾರೆ ಎಂದೆಲ್ಲಾ ಹೇಳಲಾಯಿತು. ಇದೀಗ ಈ ಬಗ್ಗೆ ಲಕ್ನೋ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಈ ಒಣಹಣ್ಣು ಸಾಕು… ಬೆಳಗ್ಗೆ ಎದ್ದಂತೇ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೊಬ್ಬು ಕೇವಲ 5 ದಿನದಲ್ಲಿ ಇಳಿಯುತ್ತೆ!

ಐಪಿಎಲ್ 2025 ರಲ್ಲಿ ಮೆಗಾ ಹರಾಜು ನಡೆಯಲಿದೆ. ರೋಹಿತ್ ಶರ್ಮಾ ಮುಂಬೈ ತೊರೆದು ಹರಾಜಿಗೆ ಪ್ರವೇಶಿಸಿದರೆ, ಪ್ರತಿ ತಂಡವೂ ಅವರಿಗಾಗಿ ಪೈಪೋಟಿ ಮಾಡೋದು ಖಚಿತ. ಏಕೆಂದರೆ ಕಳೆದ 11 ವರ್ಷಗಳಲ್ಲಿ ಮುಂಬೈ ತಂಡದ ನಾಯಕರಾಗಿದ್ದಾಗ ಅವರು 5 ಬಾರಿ ಟ್ರೋಫಿ ಗೆದ್ದಿದ್ದಾರೆ. ಹೀಗಿರುವಾಗ, ತಂಡಗಳು ಖಂಡಿತವಾಗಿಯೂ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಿದೆ.

ಇನ್ನೊಂದೆಡೆ ಮೆಗಾ ಹರಾಜಿನ ಕುರಿತು LSG ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಸಂದರ್ಶಕರೊಬ್ಬರು ಪ್ರಶ್ನೆಯನ್ನು ಕೇಳಿದರು. “ಮೆಗಾ ಹರಾಜು ನಡೆದಾಗ ಎಲ್ಲರೂ ಹಾಜರಿರುತ್ತಾರೆ, ಆಗ ನೀವು ಯಾರನ್ನು ಆಯ್ಕೆ ಮಾಡಲು ಬಯಸುತ್ತೀರಿ?”

ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿಗೆ ಇದೆಯೇ ಸ್ಥಾನ? ಅಜಿತ್ ಅಗರ್ಕರ್ ಹೇಳಿದ್ದು ಹೀಗೆ…

ಲ್ಯಾಂಗರ್ ಉತ್ತರ:

ಸಂದರ್ಶಕರ ಪ್ರಶ್ನೆಗೆ ಜಸ್ಟಿನ್ ಲ್ಯಾಂಗರ್ ಉತ್ತರಿಸಿದ್ದು, 'ನಾನು ಯಾರನ್ನಾದರೂ ಕರೆದುಕೊಂಡು ಹೋಗಬಹುದು. ರೋಹಿತ್ ಶರ್ಮಾ ಅವರನ್ನು ಮುಂಬೈನಿಂದ ಕರೆತರಲಿದ್ದೇವೆ. ನೀವು ಸಂಧಾನಕಾರರಾದರೆ ಉತ್ತಮ” ಎಂದು ತುಸು ನಕ್ಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News