IND vs NZ: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆ, 2ನೇ ಪಂದ್ಯಕ್ಕೆ ಈ ಆಟಗಾರ ಹೊರಕ್ಕೆ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯವು ನವೆಂಬರ್ 25ರಂದು ನಡೆಯಲಿದೆ. ಈ ಪಂದ್ಯದ ಆಡುವ 11 ಆಟಗಾರರಲ್ಲಿ ನಾಯಕ ಶಿಖರ್ ಧವನ್ ದೊಡ್ಡ ಬದಲಾವಣೆಗಳನ್ನು ಮಾಡಬಹುದು ಎಂದು ಹೇಳಲಾಗಿದೆ.

Written by - Puttaraj K Alur | Last Updated : Nov 26, 2022, 06:54 AM IST
  • ನ್ಯೂಜಿಲ್ಯಾಂಡ್ ವಿರುದ್ಧದ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ
  • ಕಳಪೆ ಪ್ರದರ್ಶನ ನೀಡಿದ ಬೌಲರ್‍ಗಳಿಗೆ ಗೇಟ್‍ಪಾಸ್ ನೀಡ್ತಾರಾ ಕ್ಯಾಪ್ಟನ್ ಶಿಖರ್ ಧವನ್?
  • ಯುಜುವೇಂದ್ರ ಚಹಾಲ್‌ ಬದಲು ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್ ಬದಲು ಚಹಾರ್‍ಗೆ ಅವಕಾಶ?
IND vs NZ: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಬದಲಾವಣೆ, 2ನೇ ಪಂದ್ಯಕ್ಕೆ ಈ ಆಟಗಾರ ಹೊರಕ್ಕೆ! title=
2ನೇ ಪಂದ್ಯಕ್ಕೆ ದೊಡ್ಡ ಬದಲಾವಣೆ?

ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಏಕದಿನ ಪಂದ್ಯ ನವೆಂಬರ್ 27ರಂದು ಹ್ಯಾಮಿಲ್ಟನ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದರ ನಂತರ ನಾಯಕ ಶಿಖರ್ ಧವನ್ 2ನೇ ಪಂದ್ಯವನ್ನು ಆಡುವ 11 ಆಟಗಾರರಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಅನೇಕ ಸ್ಟಾರ್ ಆಟಗಾರರನ್ನು ಪ್ಲೇಯಿಂಗ್ 11ರಿಂದ ಕೈಬಿಡಬಹುದು ಎನ್ನಲಾಗಿದೆ. ಕಳಪೆ ಪ್ರದರ್ಶನ ತೋರಿದ ಆಟಗಾರರ ಬಗ್ಗೆ ತಿಳಿಯಿರಿ.

ಈ ಸ್ಪಿನ್ನರ್ ಫಾರ್ಮ್‍ನಲ್ಲಿಲ್ಲ

ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಸ್ಪಿನ್ನರ್ ಯುಜುವೇಂದ್ರ ಚಹಾಲ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಲಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಸಾಕಷ್ಟು ರನ್ ಗಳಿಸಿದ್ದರಿಂದ ಟೀಂ ಇಂಡಿಯಾ ಸೋಲಬೇಕಾಯಿತು. ಕಿವೀಸ್ ತಂಡದ ವಿರುದ್ಧ 10 ಓವರ್‌ ಬೌಲಿಂಗ್ ಮಾಡಿದ ಚಹಾಲ್ 68 ರನ್‌ಗಳನ್ನು ನೀಡಿದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ 2ನೇ ಏಕದಿನ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ಚಹಾಲ್‍ಗೆ ಬೆಂಚ್ ಕಾಯಿಸಬಹುದು. ಯುಜ್ವೇಂದ್ರ ಚಹಾಲ್ ಬದಲಿಗೆ ಕುಲದೀಪ್ ಯಾದವ್‌ಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Umran Malik : ಮೊದಲ ODI ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಬೌಲರ್ ಉಮ್ರಾನ್ ಮಲಿಕ್ 

ಈ ಆಲ್‍ರೌಂಡರ್ ನಿರಾಸೆ ಮೂಡಿಸಿದರು

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಕಳಪೆ ಬೌಲಿಂಗ್ ಮಾಡಿದರು. ಈ ಆಟಗಾರ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಅವರು ಕೇವಲ 1 ರನ್ ಗಳಿಸಿದರು. ಅದೇ ರೀತಿ ಬೌಲಿಂಗ್ನಲ್ಲಿ ದುಬಾರಿ ಎನಿಸಿದರು. 9 ಓವರ್‌ಗಳಲ್ಲಿ 63 ರನ್ ನೀಡಿ 1 ವಿಕೆಟ್ ಪಡೆದರು. ಹೀಗಾಗಿ 2ನೇ ಏಕದಿನ ಪಂದ್ಯದಲ್ಲಿ ಠಾಕೂರ್ ಬದಲು ದೀಪಕ್ ಚಹಾರ್ ಅವರಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ.

ದೀಪಕ್ ಚಹಾರ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಭಾರತಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಟೀಂ ಇಂಡಿಯಾ ಪರ 9 ಏಕದಿನ ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಅದೇ ರೀತಿ ಅವರು 2 ಅರ್ಧ ಶತಕ ಒಳಗೊಂಡಂತೆ 180 ರನ್ ಗಳಿಸಿದ್ದಾರೆ.

ಇದನ್ನೂ ಓದಿ: Video : ಟೀಂ ಇಂಡಿಯಾಗೆ ಮರಳಲು ಟ್ರೈನಿಂಗ್ ಆರಂಭಿಸಿದ ಈ ಸ್ಟಾರ್ ಬೌಲರ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News