T20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗಿಲ್ಲ ಸ್ಥಾನ! ಹಾಗಾದ್ರೆ ಆಲ್ ರೌಂಡರ್ ಸ್ಥಾನ ತುಂಬೋದು ಯಾರು?

T20 World Cup 2024 India squad: ತಂಡದ ಆಯ್ಕೆಯಲ್ಲಿ ಐಪಿಎಲ್ ಪ್ರದರ್ಶನ ಮುಖ್ಯವಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅದು ಅಸಾಧ್ಯ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಹೆಚ್ಚು ಅನುಭವವಿಲ್ಲದ ಆಟಗಾರರನ್ನು ಕಣಕ್ಕಿಳಿಸಲು ಸಮಿತಿ ಸಿದ್ಧವಿಲ್ಲವಂತೆ.

Written by - Bhavishya Shetty | Last Updated : Apr 29, 2024, 07:43 PM IST
    • T20 ವಿಶ್ವಕಪ್‌’ಗೆ ಭಾರತ ತಂಡ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ
    • ಬಿಸಿಸಿಐ ಆಯ್ಕೆ ಸಮಿತಿಯಿಂದ ತಂಡದ ಬಗ್ಗೆ ನಿರಂತರವಾಗಿ ವಿಚಾರ ಮಂಥನ
    • ಸಂಜು ಸ್ಯಾಮ್ಸನ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
T20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗಿಲ್ಲ ಸ್ಥಾನ! ಹಾಗಾದ್ರೆ ಆಲ್ ರೌಂಡರ್ ಸ್ಥಾನ ತುಂಬೋದು ಯಾರು? title=
Hardik Pandya

T20 World Cup 2024 India squad: T20 ವಿಶ್ವಕಪ್‌’ಗೆ ಭಾರತ ತಂಡ ಇನ್ನೆರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ತಂಡದ ಬಗ್ಗೆ ನಿರಂತರವಾಗಿ ವಿಚಾರ ಮಂಥನ ನಡೆಸುತ್ತಿದೆ.

ಇನ್ನು ತಂಡದ ಆಯ್ಕೆಯಲ್ಲಿ ಐಪಿಎಲ್ ಪ್ರದರ್ಶನ ಮುಖ್ಯವಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಅದು ಅಸಾಧ್ಯ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಹೆಚ್ಚು ಅನುಭವವಿಲ್ಲದ ಆಟಗಾರರನ್ನು ಕಣಕ್ಕಿಳಿಸಲು ಸಮಿತಿ ಸಿದ್ಧವಿಲ್ಲವಂತೆ.

ಇದನ್ನೂ ಓದಿ: ಮೋದಿಯವರು ಮುಂದಿನ ಐದು ವರ್ಷದಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ: ಬಸವರಾಜ ಬೊಮ್ಮಾಯಿ

ESPN cricinfo ಪ್ರಕಾರ, ಐಪಿಎಲ್ 2024ರಲ್ಲಿ ತನ್ನ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದ ಏಕೈಕ ಆಟಗಾರ ಎಂದರೆ ಲಕ್ನೋ ಸೂಪರ್ ಜೈಂಟ್ಸ್‌’ನ ಮಯಾಂಕ್ ಯಾದವ್. ವೇಗ ಮತ್ತು ನಿಖರತೆ ಹೊಂದಿದ್ದರೂ ಸಹ, ಫಿಟ್ನೆಸ್ ಸಮಸ್ಯೆ ವಿಷಯದಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಎಂಟ್ರಿ ಪಡೆಯೋದು ಕಷ್ಟವೇ.

ಇನ್ನು ಹಾರ್ದಿಕ್ ಪಾಂಡ್ಯ ಅವರದ್ದು ವಿಭಿನ್ನ ಸಾಮರ್ಥ್ಯ. ವೇಗದ ಬೌಲಿಂಗ್ ಜೊತೆಗೆ ಪವರ್ ಹಿಟ್ಟಿಂಗ್ ಕೂಡ ಮಾಡಬಲ್ಲರು. ಆದರೆ, ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಅನುಭವಿಸಿದ ಗಾಯದಿಂದ ತಂಡದಿಂದ ಹೊರಗುಳಿದಿದ್ದರು. ಅದಾದ ನಂತರ ಕಂಬ್ಯಾಕ್ ಮಾಡಿದರೂ, ಹಾರ್ದಿಕ್ ಫಾರ್ಮ್’ಗೆ ಬರಲು ಹೆಣಗಾಡುತ್ತಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ ತಂಡದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ.

ಇನ್ನು ವಿಕೆಟ್ ಕೀಪಿಂಗ್‌ ವಿಚಾರಕ್ಕೆ ಬಂದರೆ, ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್ ಮೊದಲ ಆಯ್ಕೆಯಲ್ಲವೆಂದು ಕೆಲ ಮೂಲಗಳು ಹೇಳುತ್ತಿವೆ. ಇವರಿಬ್ಬರ ಹೊರತಾಗಿ ಸಂಜು ಸ್ಯಾಮ್ಸನ್ ಈ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ: ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ-NDA ನಿಲುವೇನು? ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ

ಅಂದಹಾಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂದಹಾಗೆ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಟಾಪ್-4 ರಲ್ಲಿ ಬಹುತೇಕ ಅಂತಿಮಗೊಂಡಿದ್ದಾರೆ. ರಾಹುಲ್ ಅಥವಾ ಪಂತ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವ ಸಂಭವವಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News