ಉದ್ಯೋಗ-ವ್ಯವಹಾರದಲ್ಲಿ ಯಾವುದೇ ಪ್ರಗತಿಯಿಲ್ಲವೇ?: ತುಳಸಿ ನೀರಿನಿಂದ ಸಿಗಲಿದೆ ಪರಿಹಾರ

ತುಳಸಿಯನ್ನು ಪೂಜಿಸುವ ಮತ್ತು ನಿಯಮಿತವಾಗಿ ಆರೈಕೆ ಮಾಡುವ ಮನೆಗಳಲ್ಲಿ ಯಾವಾಗಲೂ ಸುಖ-ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Nov 24, 2021, 05:41 PM IST
  • ತುಳಸಿ ಎಲೆಗಳಿಂದ ತಯಾರಿಸಿದ ನೀರನ್ನು ಅತ್ಯಂತ ಪವಿತ್ರವೆಂದು ನಂಬಲಾಗಿದೆ
  • ಮನೆ ತುಂಬಾ ತುಳಸಿ ನೀರು ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ
  • ತುಳಸಿ ನೀರನ್ನು ಸೇವಿಸುವುದರಿಂದ ಮನೆಯಲ್ಲಿ ಸುಖ-ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ
ಉದ್ಯೋಗ-ವ್ಯವಹಾರದಲ್ಲಿ ಯಾವುದೇ ಪ್ರಗತಿಯಿಲ್ಲವೇ?: ತುಳಸಿ ನೀರಿನಿಂದ ಸಿಗಲಿದೆ ಪರಿಹಾರ    title=
ತುಳಸಿ ನೀರಿನ ಪ್ರಯೋಜನಗಳು

ನವದೆಹಲಿ: ತುಳಸಿ ಸನಾತನ ಧರ್ಮದ ಸಾರವಾಗಿದೆ. ಪ್ರತಿಯೊಬ್ಬ ಹಿಂದೂ ಧರ್ಮದವರ ಮನೆಯಲ್ಲಿ ತುಳಸಿಯ ವಾಸಸ್ಥಾನವನ್ನು ನೀವು ಕಾಣಬಹುದು. ತುಳಸಿ ಅತ್ಯಂತ ಗೌರವಾನ್ವಿತ ಸಸ್ಯ ಮಾತ್ರವಲ್ಲ, ಇದರಿಂದ ಅನೇಕ ಪ್ರಯೋಜನ(Tulsi Benefits)ವಿದೆ. ಇದರಿಂದ ಯಾವಾಗಲೂ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವಿರುತ್ತದೆ. ತುಳಸಿಯನ್ನು ಪೂಜಿಸುವ ಮತ್ತು ನಿಯಮಿತವಾಗಿ ಆರೈಕೆ ಮಾಡುವ ಮನೆಗಳಲ್ಲಿ ಯಾವಾಗಲೂ ಸುಖ-ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ.

ತುಳಸಿಯಂತೆ ಇದರ ನೀರು(Tulsi Water) ಕೂಡ ಹಲವಾರು ಪ್ರಯೋಜನಗಳನ್ನು ಹೊಂದಿದೆ. ತುಳಸಿ ಎಲೆಗಳನ್ನು ಸೇರಿಸಿ ತಯಾರಿಸಿದ ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿ ನೀರನ್ನು ಸೇವಿಸುವುದರಿಂದ ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ತುಳಸಿ ನೀರಿಗೆ ಸಂಬಂಧಿಸಿದ ಆ ವಿಶೇಷ ಪ್ರಯೋಜನಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಶ್ರೀಕೃಷ್ಣನಿಗೆ ತುಳಸಿ ನೀರಿನಿಂದ ಸ್ನಾನ ಮಾಡಿಸಿ.

ಇದನ್ನೂ ಓದಿ: Vastu Tips For Home: ಬಡತನದಿಂದ ಹೊರಬರಲು ನಿಮ್ಮ ಮನೆಯ ಸುತ್ತ ಈ ಗಿಡಗಳನ್ನು ತೆಗೆದುಹಾಕಿ

ತುಳಸಿ ಶ್ರೀಕೃಷ್ಣನಿಗೆ ಬಹಳ ಪ್ರಿಯ. ತುಳಸಿ ನೀರಿನಿಂದ(Benefits Of Tulsi Water) ಬಾಲ ಕೃಷ್ಣನಿಗೆ ಸ್ನಾನ ಮಾಡಿಸಿದರೆ ಆತ ತುಂಬಾ ಸಂತೋಷಪಡುತ್ತಾನೆ ಮತ್ತು ಭಕ್ತರಿಗೆ ಶ್ರೀಕೃಷ್ಣ ತನ್ನ ಆಶೀರ್ವಾದವ ನೀಡುತ್ತಾನೆ. ನಿಮಗೂ ಶ್ರೀಕೃಷ್ಣನ ಆಶೀರ್ವಾದ ಬೇಕಾದರೆ ತುಳಸಿ ನೀರಿನಿಂದ ಸ್ನಾನ ಮಾಡಿಸುವುದನ್ನು ಮರೆಯಬೇಡಿ.

ಮನೆಯಲ್ಲಿ ತುಳಸಿ ನೀರನ್ನು ಸಿಂಪಡಿಸಿ 

ತುಳಸಿ ಎಲೆ(Tulsi Leaves)ಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಪೂಜೆಯ ನಂತರ ಬೆಳಿಗ್ಗೆ ಮತ್ತು ಸಂಜೆ ಆ ನೀರನ್ನು ಇಡೀ ಮನೆಯಲ್ಲಿ ಸಿಂಪಡಿಸಿ. ಮನೆಯ ಯಾವುದೇ ಮೂಲೆಯನ್ನು ಬಿಡದೆ ತುಳಿಸಿ ನೀರನ್ನು ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರಹೋಗುತ್ತವೆ ಮತ್ತು ಧನಾತ್ಮಕ ಶಕ್ತಿಗಳು ಮನೆಯಲ್ಲಿ ನೆಲೆಸುತ್ತವೆ.

ಗುಣಪಡಿಸಲಾಗದ ಕಾಯಿಲೆಗಳಿಗೆ ಮುಕ್ತಿ

ಕುಟುಂಬದಲ್ಲಿ ಯಾರಾದರೂ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರೆ  ತುಳಸಿ ನೀರನ್ನು ಅವರ ಮೇಲೆ ಸಿಂಪಡಿಸಿ. ಸುಮಾರು 1 ವಾರಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಪೂಜೆಯ ನಂತರ ಈ ಸಿಂಪರಣೆ(Benefits of Tulsi) ಮಾಡಬೇಕು. ಹೀಗೆ ಮಾಡುವುದರಿಂದ ವಾಸಿಯಾಗದ ರೋಗಗಳಿಂದ ಮುಕ್ತಿ ಸಿಗಲಿದೆ. ವ್ಯಕ್ತಿಯು ಕ್ರಮೇಣ ಆರೋಗ್ಯವಂತನಾಗುತ್ತಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಈ ನಾಲ್ಕು ರಾಶಿಯ ಹುಡುಗರಲ್ಲಿ ಉತ್ತಮ ಜೀವನ ಸಂಗಾತಿಯ ಗುಣಗಳಿರುತ್ತವೆಯಂತೆ

ಉದ್ಯೋಗ-ವ್ಯವಹಾರದಲ್ಲಿ ಬಡ್ತಿ ಸಿಗುತ್ತದೆ

ಕಷ್ಟಪಟ್ಟು ಕೆಲಸ ಮಾಡಿದರೂ ವ್ಯಾಪಾರದಲ್ಲಿ ಪ್ರಗತಿ ಕಾಣದಿದ್ದರೆ ತುಳಸಿ ಎಲೆ(Uses of Tulsi)ಗಳನ್ನು ನೀರಿನಲ್ಲಿ 3 ದಿನ ನೆನೆಸಿಡಿ. ಇದರ ನಂತರ ಬೆಳಿಗ್ಗೆ ಮತ್ತು ಸಂಜೆ ಪೂಜೆಯ ನಂತರ ಆ ನೀರನ್ನು ನಿಮ್ಮ ಕಚೇರಿ, ಅಂಗಡಿ ಅಥವಾ ಕಾರ್ಖಾನೆಯಲ್ಲಿ ಸಿಂಪಡಿಸಿ. ಇದು ವ್ಯಾಪಾರದ ಬೆಳವಣಿಗೆಗೆ ದಾರಿ ತೋರಿಸುತ್ತದೆ. ಕೆಲಸದ ಸ್ಥಳದಲ್ಲಿ ಈ ಪವಿತ್ರ ನೀರನ್ನು ಚಿಮುಕಿಸುವ ಮೂಲಕ ನೀವು ಪ್ರಗತಿಯ ಹಾದಿಯನ್ನು ಕಂಡುಕೊಳ್ಳಬಹುದು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News