Chardham Yatra 2023: ನಾಲ್ಕು ಧಾಮಗಳ ಯಾತ್ರೆಗೆ 17 ಲಕ್ಷ ಭಕ್ತಾದಿಗಳ ಹೆಸರು ನೋಂದಣಿ, ಸಿದ್ಧತೆ ಹೇಗಿದೆ ಇಲ್ಲಿ ತಿಳಿದುಕೊಳ್ಳಿ

Kedarnath Yatra 2023: ಗಂಗೋತ್ರಿ-ಯಮುನೋತ್ರಿ ಕಪಾಟಗಳು ಏಪ್ರಿಲ್ 22 ರಂದು ತೆರೆದುಕೊಂಡರೆ, ಕೇದಾರನಾಥ ಧಾಮದ ಕಪಾಟಗಳು ಏಪ್ರಿಲ್ 25 ರಂದು ತೆರೆದುಕೊಳ್ಳಲಿವೆ. ಬದರಿನಾಥ ಕಪಾಟಗಳು ಏಪ್ರಿಲ್ 27 ರಂದು ತೆರೆದುಕೊಳ್ಳಲಿವೆ.  

Written by - Nitin Tabib | Last Updated : Apr 23, 2023, 04:18 PM IST
  • ಕಳೆದ ಹಲವು ತಿಂಗಳಿನಿಂದ ಯಾತ್ರೆಗಾಗಿ ಆಡಳಿತ ಮಂಡಳಿ ಸಿದ್ಧತೆಗಳನ್ನು ನಡೆಸುತ್ತಿದೆ.
  • ಯಾತ್ರೆಯ ಬಗ್ಗೆ ಭಕ್ತರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದೆ.
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಚಾರ್ಧಾಮ್ ಯಾತ್ರೆಯ ನೋಂದಣಿಯನ್ನು ಮಾಡಬಹುದು.
Chardham Yatra 2023: ನಾಲ್ಕು ಧಾಮಗಳ ಯಾತ್ರೆಗೆ 17 ಲಕ್ಷ ಭಕ್ತಾದಿಗಳ ಹೆಸರು ನೋಂದಣಿ, ಸಿದ್ಧತೆ ಹೇಗಿದೆ ಇಲ್ಲಿ ತಿಳಿದುಕೊಳ್ಳಿ title=

Chardham Yatra 2023: ಹಿಂದೂಗಳ ಪ್ರಮುಖ ಯಾತ್ರೆಯಾದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ.  ಇದರಿಂದ ಭಕ್ತಾದಿಗಳು ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಭೇಟಿ ನೀಡಲು ಸಾಧ್ಯವಾಗಲಿದೆ. ಈ ಬಾರಿಯೂ ಇಲ್ಲಿಗೆ ದಾಖಲೆ ಪ್ರಮಾಣದಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಯಾತ್ರೆಗೆ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕೇದಾರನಾಥ ಧಾಮದ ಬಾಗಿಲು ತೆರೆಯುವ ಮುನ್ನವೇ ಸುಮಾರು 17 ಲಕ್ಷ ಭಕ್ತರು ಚಾರ್ ಧಾಮ್ ಯಾತ್ರೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ. ಏಪ್ರಿಲ್ 22 ರಂದು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲು ತೆರೆಯಲಾಗುತ್ತಿದೆ, ಕೇದಾರನಾಥ ಧಾಮದ ಬಾಗಿಲು ಏಪ್ರಿಲ್ 25 ರಂದು ತೆರೆದುಕೊಳ್ಳಲಿವೆ, ಬದರಿನಾಥದ ಬಾಗಿಲು ಏಪ್ರಿಲ್ 27 ರಂದು ತೆರೆಯಲಿವೆ. ಚಾರ್ ಧಾಮ್ ಯಾತ್ರೆಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಪ್ರಯಾಣದ ಮಾರ್ಗಗಳಲ್ಲಿ ವೈದ್ಯಕೀಯ ಪರಿಹಾರ ಪೋಸ್ಟ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ-Amrit Pal Singh ಬಂಧನ, 'ಇದು ಸರೆಂಡರ್ ಅಲ್ಲ', DGP ಮಹತ್ವದ ಹೇಳಿಕೆ

ಕಳೆದ ಹಲವು ತಿಂಗಳಿನಿಂದ ಯಾತ್ರೆಗಾಗಿ ಆಡಳಿತ ಮಂಡಳಿ ಸಿದ್ಧತೆಗಳನ್ನು ನಡೆಸುತ್ತಿದೆ. ಯಾತ್ರೆಯ ಬಗ್ಗೆ ಭಕ್ತರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಚಾರ್ಧಾಮ್ ಯಾತ್ರೆಯ ನೋಂದಣಿಯನ್ನು ಮಾಡಬಹುದು. ನೋಂದಣಿಗಾಗಿ, ಮೊದಲು ನೋಂದಣಿ ವೆಬ್ಸೈಟ್ ಆಗಿರುವ andtouristcare.uk.gov.in ಗೆ ನೀವು ಭೇಟಿ ನೀಡಬೇಕು. ಅಲ್ಲಿ ನಿಮಗೆ ಒಂದು ಫಾರ್ಮ್ ಸಿಗಲಿದೆ. ಅದರಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇದಾದ ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಬೇಕು. ವರ್ಷದಲ್ಲಿ 6 ತಿಂಗಳವರೆಗೆ ಪ್ರಯಾಣವನ್ನು ಸ್ಥಗಿತಗೊಳಿಸಲಾಗುತ್ತದೆ. 

ಇದನ್ನೂ ಓದಿ-CM Shinde ವಿರುದ್ಧ ನಡೆಯಲಿದೆಯೇ ಗೇಮ್! ಭಾರಿ ಸಂಚಲನಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

ಹಿಮಪಾತದ ಸಮಸ್ಯೆ
ಇನ್ನೊಂದೆಡೆ ಪ್ರಯಾಣದ ಆರಂಭದ ನಡುವೆ ಕೇದಾರನಾಥ ಧಾಮದಲ್ಲಿ ಹವಾಮಾನದ ಪ್ರಭಾವವೂ ಇರಲಿದೆ. ಅಲ್ಲಿ ಭಾರೀ ಹಿಮಪಾತವಾಗಿದೆ. ಬದರಿನಾಥ ಧಾಮದಲ್ಲೂ ಹಿಮಪಾತವಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸ್ಥಳೀಯ ಆಡಳಿತದಿಂದ ಹಿಮ ತೆಗೆದು ದಾರಿ ಮಾಡಿಕೊಡಲಾಗುತ್ತಿದೆ. ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಧಮಿ ಸರ್ಕಾರದ ಸಂಪೂರ್ಣ ಗಮನವು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದು. ಅದರಲ್ಲೂ ಸರ್ಕಾರ ಆರೋಗ್ಯ ಸೌಲಭ್ಯಗಳತ್ತ ಹೆಚ್ಚಿನ ಗಮನಹರಿಸಿದೆ. ಕೇದಾರನಾಥ ಯಾತ್ರೆ ಮಾರ್ಗದಲ್ಲಿ 10 ವೈದ್ಯಕೀಯ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News