Prashanth Neel: NTR 31 ಪಕ್ಕಕಿಟ್ಟು, ಸೀಕ್ವೆಲ್‌ ಕೈಗೆತ್ತಿಕೊಂಡ ನೀಲ್:‌ ಸಲಾರ್‌/ ಕೆಜಿಎಫ್-3?

Salaar 2 Or KGF 3: ಚಂದನವನದ ಖ್ಯಾತ ನಿರ್ದೇಶಕ ಪ್ರಶಾಂತ್‌ ನೀಲ್‌ ಸದ್ಯ ಜ್ಯೂ.ಎನ್‌ಟಿಆರ್‌ 31 ಜೊತೆಗೆ ಸಿನಿಮಾ ಮಾಡುವ ಯೋಚನೆಯನ್ನು ಮುಂದೂಡಿ ಇದೀಗ, ಮತ್ತೊಂದು ಚಿತ್ರದ ಸೀಕ್ವೆಲ್‌ ಕೈಗೆತ್ತಿಕೊಂಡಿದ್ದಾರೆ. ಹಾಗಾದ್ರೇ ಅದು ಯಾವ ಸಿನಿಮಾ? ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Mar 13, 2024, 11:44 AM IST
  • ಪ್ರಶಾಂತ್‌ ನೀಲ್‌ 'ಉಗ್ರಂ', KGF ಸರಣಿ ಬಳಿಕ 'ಸಲಾರ್' ಸಿನಿಮಾದ ಮೂಲಕ ಯಶಸ್ಸು ಪಡೆದುಕೊಂಡಿದ್ದಾರೆ.
  • ಇದೀಗ ತಾರಕ್‌ ಬಾಲಿವುಡ್‌ ಕಡೆ ಮುಖ ಮಾಡಿದ್ದು, ಹೃತಿಕ್ ರೋಷನ್ ಜೊತೆಗೆ 'ವಾರ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ.
  • ಸದ್ಯ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ 'ಕಲ್ಕಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಇದೇ ಮೇ 9ಕ್ಕೆ ರಿಲೀಸ್‌ ಆಗಲಿದೆ.
Prashanth Neel: NTR 31 ಪಕ್ಕಕಿಟ್ಟು, ಸೀಕ್ವೆಲ್‌ ಕೈಗೆತ್ತಿಕೊಂಡ ನೀಲ್:‌ ಸಲಾರ್‌/ ಕೆಜಿಎಫ್-3? title=

Salaar 2 Shooting: ಸ್ಯಾಂಡಲ್‌ವುಡ್‌ ಕ್ರಿಯೇಟಿವ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ 'ಉಗ್ರಂ', KGF ಸರಣಿ ಬಳಿಕ 'ಸಲಾರ್' ಸಿನಿಮಾದ ಮೂಲಕ ಯಶಸ್ಸು ಪಡೆದುಕೊಂಡಿದ್ದಾರೆ.  ಪ್ರಶಾಂತ್‌ ನೀಲ್‌ ಸಲಾರ್‌ ಬೆನ್ನೆಲ್ಲೇ ಜ್ಯೂ. ಎನ್‌ಟಿಆರ್ ಜೊತೆಗೆ ತುಂಬಾ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲಿರುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಕೋವಿಡ್‌ ತೊಂದರೆ, ಮತ್ತೆ ಪ್ರಶಾಂತ್‌ ನೀಲ್‌ ಹಾಗೂ ಪ್ರಭಾಸ್‌ನ ಬೇರೆ ಬೇರೆ ಕಮಿಟ್‌ಮೆಂಟ್‌ಗಳಿಂದ ತಡವಾಗಿತ್ತು.

ಇದೀಗ ತಾರಕ್‌  ಬಾಲಿವುಡ್‌ ಕಡೆ ಮುಖ ಮಾಡಿದ್ದು, ಹೃತಿಕ್ ರೋಷನ್ ಜೊತೆಗೆ 'ವಾರ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರಲಿದೆ. ಈ ಕಾರಣಗಳಿಂದ ನಿರ್ದೇಶಕ ಪ್ರಶಾಂತ್‌ ನೀಲ್‌ ಸದ್ಯಕ್ಕೆ ಜ್ಯೂ. ಎನ್‌ಟಿಆರ್‌ ಚಿತ್ರ ಪಕ್ಕಕ್ಕಿಟ್ಟು, ಮೊದಲು ಸಲಾರ್‌ ಸೀಕ್ವೆಲ್ ಮುಗಿಸುವ ಆಲೋಚನೆಯಲ್ಲಿದ್ದಾರೆ. ಮೂರು ತಿಂಗಳ ನಂತರ ಜೂನ್‌ ವೇಳೆ ಸಲಾರ್‌ ಶೂಟಿಂಗ್‌ ಪ್ರಾರಂಭವಾಗಲಿದೆ.

ಇದನ್ನೂ ಓದಿ: Toxic: ಶೂಟಿಂಗ್‌ ಪ್ರಾರಂಭವಾಗುವ ಮುನ್ನವೇ ಟಾಕ್ಸಿಕ್‌ ರಿಲೀಸ್‌ ಡೇಟ್‌ ಫಿಕ್ಸ್‌!

ಟಾಲಿವುಡ್‌ ಸ್ಟಾರ್‌ ನಟ ತಾರಕ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ 'ಸಲಾರ್-2' ಕಂಪ್ಲೀಟ್‌ ಮಾಡಲು ತೀರ್ಮಾನಿಸಿದ್ದಾರೆ. 'ಸಲಾರ್' ಡಿಸೆಂಬರ್ 22 2023 ರಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದ್ದು, ಸದ್ಯ ಚಿತ್ರದ ಮುಂದುವರೆದ ಭಾಗದ ಶೂಟಿಂಗ್‌  ಶೀಘ್ರದಲ್ಲೇ ಶುರುವಾಗಲಿದೆ. ಇತ್ತೀಚೆಗೆ ನಟ ಪೃಥ್ವಿರಾಜ್ ಕೂಡ ಸಿನಿಮಾ ಚಿತ್ರೀಕರಣದ ಬೇಗ  ಆರಂಭವಾಗುತ್ತದೆ ಎಂದಿದ್ದರು. ಮೊದಲು ಪೃಥ್ವಿರಾಜ್ ಹಾಗೂ ಬೇರೆ ಕಲಾವಿದರ ಶಾಟ್‌ಗಳ ಶೂಟಿಂಗ್‌ ಮುಗಿಸಿದ ನಂತರ ಪ್ರಭಾಸ್ ತಂಡವನ್ನು ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ. 

ಸದ್ಯ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ 'ಕಲ್ಕಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಇದೇ ಮೇ 9ಕ್ಕೆ ರಿಲೀಸ್‌ ಆಗಲಿದೆ. ಈ ಚಿತ್ರದ ಪ್ರಮೋಷನ್, ರಿಲೀಸ್ ಎಲ್ಲಾ ಮುಗಿದ ಬಳಿಕ ಪ್ರಭಾಸ್‌ 'ಸಲಾರ್' ಆಗಿ ಮತ್ತೆ ಅಬ್ಬರಿಸಲಿದ್ದಾರೆ. ಇದೀಗ 'ಸಲಾರ್‌'-2 ಚಿತ್ರದ ಕೆಲವು ದೃಶ್ಯಗಳ ಶೂಟಿಂಗ್‌ ಕೂಡ ನಡೆದಿದ್ದು, ಆದರಿಂದ ಮಿಕ್ಕ ಸನ್ನಿವೇಶಗಳನ್ನು ಸೆರೆಹಿಡಿದು ಬೇಗ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News