ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್

Keerthy Suresh Bollywood Movies : ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ.

Written by - Chetana Devarmani | Last Updated : May 14, 2024, 10:36 AM IST
  • ಕೀರ್ತಿ ಸುರೇಶ್ ತೆಲುಗು ಸೌತ್‌ ಸಿನಿರಂಗದ ಸ್ಟಾರ್ ನಟಿ
  • ತೆಲುಗಿನಲ್ಲಿ ಗುರುತಿಸಿಕೊಂಡಿದ್ದ ಕೀರ್ತಿ ಸುರೇಶ್
  • ಬಾಲಿವುಡ್ ನಲ್ಲಿ ಮತ್ತೊಂದು ಬಂಪರ್ ಆಫರ್
ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್  title=

Keerthy Suresh Movies : ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆಯಂತಹ ಅನೇಕ ಯುವ ನಟಿಯರು ತೆಲುಗು, ತಮಿಳು ಚಿತ್ರಗಳ ಜೊತೆಗೆ ಹಿಂದಿಯಲ್ಲೂ ನಟಿಸಿದ್ದಾರೆ. ಬಾಲಿವುಡ್‌ನ ಸುಂದರಿಯರು ಸಹ ಸೌತ್ ಸಿನಿಮಾ ಮಾಡುತ್ತಿದ್ದಾರೆ. ಈ ಮಧ್ಯೆ‌ ಜವಾನ್ ಚಿತ್ರದ ಮೂಲಕ ನಯನತಾರಾ ಬಾವಲಿವುಡ್‌ನಲ್ಲಿ ಉತ್ತಮ ಯಶಸ್ಸನ್ನು ಪಡೆದರು. ಜೊತೆಗೆ ತ್ರಿಷಾ ಕೂಡ ಸದ್ಯದಲ್ಲೇ ಹಿಂದಿಯಲ್ಲೂ ಸಿನಿಮಾ ಮಾಡಲಿದ್ದಾರಂತೆ. ಇದೀಗ ಈ ಸಾಲಿನಲ್ಲಿ ಮತ್ತೊಬ್ಬ ಯುವ ನಟಿ ಬಾಲಿವುಡ್‌ನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕೀರ್ತಿ ಸುರೇಶ್ ತೆಲುಗು ಸೌತ್‌ ಸಿನಿರಂಗದ ಸ್ಟಾರ್ ನಟಿ ಎಂದು ಗುರುತಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಗುರುತಿಸಿಕೊಂಡಿದ್ದ ಕೀರ್ತಿ ಸುರೇಶ್ ತಮಿಳಿನಲ್ಲೂ ಸ್ಟಾರ್ ಹೀರೋಗಳ ಎದುರು ನಟಿಸಿ ಸೈ ಎನಿಸಿಕೊಂಡರು. 

ತಮ್ಮ ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ. ಬಾಲಿವುಡ್ ನಲ್ಲಿ ವರುಣ್ ಧವನ್ ಜೊತೆ ಕೀರ್ತಿ ಸುರೇಶ್ ಬೇಬಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಈ ನಡುವೆ ಕೀರ್ತಿ ಸುರೇಶ್  ಅವರಿಗೆ ಬಾಲಿವುಡ್ ನಲ್ಲಿ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆಯಂತೆ.

ಇದನ್ನೂ ಓದಿ:  'ರಾಮಾಯಣ' ದೇಶದ ಅತ್ಯಂತ ದುಬಾರಿ ಚಿತ್ರ.. ಈ ಬಜೆಟ್‌ನಲ್ಲಿ ಕೆಜಿಎಫ್ 2 ಸಿನಿಮಾವನ್ನು 8 ಬಾರಿ ನಿರ್ಮಿಸಬಹುದು! 

ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಎದುರು ನಟಿಸುವ ಅವಕಾಶ ಕೀರ್ತಿಸುರೇಶ್ ಗೆ ಸಿಕ್ಕಿದೆಯಂತೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಚರ್ಚೆ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ. ಈ ಸುದ್ದಿ ನಿಜವಾದರೆ ಬಾಲಿವುಡ್‌ನಲ್ಲಿ ಕೀರ್ತಿ ಸುರೇಶ್ ಕ್ರೇಜ್ ಹೆಚ್ಚಾಗುವುದು ಖಚಿತ ಎನ್ನುತ್ತಿದ್ದಾರೆ ಸಿನಿಮಾ ಮಂದಿ. 

ಪ್ರಿಯದರ್ಶನ್ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಹಾರರ್ ಕಾಮಿಡಿ ಹಿನ್ನೆಲೆಯಲ್ಲಿ ಇರಲಿದೆಯಂತೆ. ಈ ಸಿನಿಮಾದಲ್ಲಿ ನಾಯಕಿಯರಾಗಿ ಆಲಿಯಾ ಭಟ್ ಮತ್ತು ಕಿಯಾರಾ ಅಡ್ವಾಣಿ ಹೆಸರು ಕೂಡ ಕೇಳಿ ಬರುತ್ತಿದೆ. ಇವರೊಂದಿಗೆ ಕೀರ್ತಿಸುರೇಶ್ ಹೆಸರೂ ಕೇಳಿಬರುತ್ತಿದೆ. ಅಕ್ಷಯ್ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಕೀರ್ತಿ ಸುರೇಶ್ ಕ್ರೇಜ್ ದುಪ್ಪಟ್ಟಾಗುವುದು ಖಚಿತ. 

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಸೀರಿಯಲ್‌ ಶ್ರೇಷ್ಠಾ ತಾಯಿಯ ನಿಜವಾದ ಹೆಸರೇನು.. ಇವರ ಪತಿ ಮಕ್ಕಳು ಯಾರು ಗೊತ್ತೇ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News